ಮಕ್ಕಳಲ್ಲಿ ಜಂತುಹುಳ ಸಾಮಾನ್ಯ ಸಮಸ್ಯೆ.
- ಐದರಿಂದ ಹತ್ತು ವರ್ಷದ ಮಕ್ಕಳಲ್ಲಿ ಜಂತುಗಳು ಸಾಮಾನ್ಯ ಸಮಸ್ಯೆ
- ಕೆಲವೊಂದು ಸೋಂಕುಗಳು ಯಾವುದೇ ಲಕ್ಷಣವನ್ನು ತೋರ್ಪಡಿಸುವುದಿಲ್ಲ. ಮಕ್ಕಳ ಚರ್ಮದ ಬಣ್ಣ ಬದಲಾದ ಬಣ್ಣದಲ್ಲಿ ಇರುತ್ತದೆ. ಕೆರೆತವನ್ನು ಹೊಂದಿರುತ್ತಾರೆ
- ಇಂಥ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬದ ಸದಸ್ಯರಿಗೆ ಜಂತುಹುಳದ ಮಾತ್ರೆಯನ್ನು ಕೊಡಬೇಕಾಗುತ್ತದೆ
- ಜಂತುಹುಳುಗಳ ಸೋಂಕಿನಿಂದ ಜಾಗೃತರಾಗಲು ವೈಯಕ್ತಿಕ ಶುಚಿತ್ವ ಮತ್ತು ಮನೆಯ ಶುಚಿತ್ವ ಬಹಳ ಮುಖ್ಯ
- ಮಕ್ಕಳಲ್ಲಿ ಸಾಮಾನ್ಯವಾಗಿ ರೆಡ್ ವರ್ಮ್ ಕಂಡುಬರುತ್ತವೆ. ಇದನ್ನ ಫಿನ್ ವರ್ವ್ ಅಂತಾನೂ ಕರೀತಾರೆ.
- ಜನರಿಂದ ಜನರಿಗೆ ಬಹುಬೇಗ ಹರಡುತ್ತದೆ.
ಮಕ್ಕಳಲ್ಲಿ ಸೋಂಕಿನ ಕೆಲವು ಲಕ್ಷಣಗಳು
- ಗುಪ್ತಾಂಗಗಳಲ್ಲಿ ಕೆರೆತ ಮತ್ತು ಚರ್ಮದ ಬಣ್ಣದ ಬದಲಾವಣೆ. ರಾತ್ರಿಯ ವೇಳೆಗೆ ಇದು ಹೆಚ್ಚಾಗಿರುತ್ತದೆ
- ಚರ್ಮದ ಬಣ್ಣ ಕೆಂಪು ಅಥವಾ ಪೇಲವ ಬಣ್ಣ ಅಥವಾ ಗಾಢ ಬಣ್ಣ ಕಂಡುಬರುತ್ತದೆ.
- ಮಕ್ಕಳು ಹೆಚ್ಚು ಕಿರಿಕಿರಿಯಾಗಿ ಇರುತ್ತಾರೆ.
ಅತಿ ವಿರಳ ಲಕ್ಷಣಗಳು
- ಹುಳಗಳು ಕಾಣಿಸಿಕೊಳ್ಳುವುದು- ಬಿಳಿ ಮತ್ತು ಸಣ್ಣ ಆಕಾರದ ಎಂಟರಿಂದ 13mm ಉದ್ಧದ ಹುಳಗಳು
- ಹೊಟ್ಟೆ ನೋವು
- ವಾಂತಿ ಅಥವಾ ತಲೆತಿರುಗುವಿಕೆ
ಚಿಕಿತ್ಸೆ
- ಮಕ್ಕಳಲ್ಲಿ ಹುಳಗಳು ಗೋಚರಿಸಿದಾಗ ತುಂಬಾ ಭಯ ಪಡುವ ಅಗತ್ಯವಿಲ್ಲ.
- ಮಕ್ಕಳು ಹುಳ ನಿಂದ ಅನುಭವಿಸುತ್ತಿದ್ದರೆ ಮನೆಯಲ್ಲಿ ನಿರೋಧಕ ಮಾತ್ರೆಗಳನ್ನು ಕೊಡಬಹುದು
- ವೈದ್ಯರನ್ನು ಸಂಪರ್ಕಿಸಿ ಆರು ತಿಂಗಳಿಗೊಮ್ಮೆ ಮಕ್ಕಳಿಗೆ ಹುಳಕ್ಕೆ ಔಷಧಿಯನ್ನು ಕೊಡಬೇಕಾಗುತ್ತದೆ.
- ದೊಡ್ಡವರಿಂದ ಮಕ್ಕಳಿಗೆ ಹರಡುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ದೊಡ್ಡವರು ಕೂಡ ಒಳಕ್ಕೆ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮುಂಜಾಗ್ರತಾ ಕ್ರಮ
- ಶೌಚಾಲಯಕ್ಕೆ ಹೋಗುವ ಮುನ್ನ ಮತ್ತು ಶೌಚಾಲಯವನ್ನು ಬಳಸಿದ ನಂತರ ಕೈ-ಕಾಲುಗಳನ್ನು ತೊಳೆದುಕೊಳ್ಳಬೇಕು
- ಉಗುರುಗಳನ್ನು ನಿಯಮಿತವಾಗಿ ಕತ್ತರಿಸಬೇಕು
- ಮಕ್ಕಳಿಗೆ ಬಾಯಿಗೆ ಬೆರಳು ಹಾಕುವುದು ಮತ್ತು ಉಗುರನ ಕಚ್ಚುವುದನ್ನು ನಿಲ್ಲಿಸಬೇಕು
- ಮನೆಯ ಸದಸ್ಯರೆಲ್ಲರೂ ಹುಳಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳಿ.
- ಮಕ್ಕಳ ಬಟ್ಟೆಯನ್ನು ಬಿಸಿನೀರನ್ನು ತೊಳೆಯಿರಿ ಮತ್ತು ಡೆಟಾಲ್ ಹಾಕಿ ಒಣಗಿಸಿರಿ.
- ಶೌಚಾಲಯವನ್ನು ನಿತ್ಯ ಸ್ವಚ್ಛಗೊಳಿಸಿ.
#kidshealth #wormsinkids