14 Apr 2022 | 0 min Read
Tinystep
Author | 2578 Articles
ಸ್ತ್ರೀಯರು ಅವರಿಗೆ ಹಿತವೆನಿಸುವ ಪ್ರಸವ ರೀತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಪ್ರಸವದ ಹಲವಾರು ಮಾದರಿಗಳ ಬಗ್ಗೆ ಕೇಳಿ ತಿಳಿದುಕೊಂಡಬಹುದಾದರೂ, ಆಯ್ಕೆಯ ಪ್ರಶ್ನೆ ಬಂದಾಗ, ನೀವು ಗೊಂದಲಕ್ಕೊಳಗಾಗಬಹುದು. ನಿಮ್ಮ ಮನೋಭಾವವನ್ನು ಅರ್ಥಮಾಡಿಕೊಂಡು, ಯಾವುದೇ ರೀತಿಯ ಪ್ರಸವ ರೀತಿಯನ್ನು ಆಯ್ಕೆ ಮಾಡಿಕೊಂಡರೂ, ಆರೋಗ್ಯಪೂರ್ಣವಾದ ಮಗುವಿಗೆ ಜನ್ಮವೀಯಬೇಕೆನ್ನುವುದಷ್ಟೇ ತಾತ್ಪರ್ಯ.ಯಾವ ರೀತಿಯ ಪ್ರಸವಕ್ಕೆ ನಿಮ್ಮ ಮನಸ್ಸನ್ನು ಸಜ್ಜು ಗೊಳಿಸಬೇಕೆಂದು
ತೀರ್ಮಾನಿಸಲು ನಿಮಗೆ ಸಹಾಯಹಸ್ತ ಚಾಚುವ ಈ ಲೇಖನವನ್ನು ಒಮ್ಮೆ ಓದಿರಿ.
ತಾಯಿಯ ಆರೋಗ್ಯಕ್ಕೆ ಸಂಬಂಧಿಸಿದಂತೆ
ಮನಶಾಸ್ತ್ರಜ್ಞರ ಪ್ರಕಾರ ಯೋನಿಯ ಮೂಲಕ ಪ್ರಸವಿಸಿದ ತಾಯಿಯಂದಿರು, ಪ್ರಸವದ ಯಾವುದೇ ಘಟ್ಟದಲ್ಲೂ ಮನೋಧೈರ್ಯವನ್ನು ಪ್ರಕಟಿಸುತ್ತಾರೆ. ಪ್ರಸವದ ಕೊನೆಯ ಹಂತದವರೆಗೂ ನಡೆಯುವ ಎಲ್ಲಾ ಆಗು ಹೋಗುಗಳಿಗೂ ಸಿದ್ಧರಾಗಿರುತ್ತಾರೆ.
ಚರ್ಮಕ್ಕೆ ಚರ್ಮ ತಗುಲಿಕೊಂಡು ನಡೆಯುವ ಈ ಪ್ರಸವದಿಂದ, ತಾಯಿ ಮಕ್ಕಳ ಸಂಬಂಧವು ಬಹಳ ಸ್ನೇಹಬಾಂಧವ್ಯದಿಂದ ಬೆಸೆಯಲ್ಪಡುವುದು.
ಸ್ವಾಭಾವಿಕ ಹೆರಿಗೆಯಿಂದ ಚೇತರಿಸಿಕೊಳ್ಳಲು, ಸಿಸೇರಿಯನ್ ಗಿಂತ ಕಡಿಮೆ ಸಮಯ ಮಾತ್ರ
ಸಾಕಾಗುವುದು. ಮಾತ್ರವಲ್ಲದೆ ಹೆರಿಗೆಯ ನಂತರದ ದಿನಗಳ ನೋವು ಕೂಡ ಕಡಿಮೆಯಾಗಿರುವುದು. ಶರೀರವನ್ನು ಛೇದಿಸುವ ಅಗತ್ಯಬೀಳದಿರುವುದರಿಂದ ಯಾವುದೇ ಕಲೆಗಳೂ ಉಳಿಯುವುದಿಲ್ಲ.
ಯಾವುದೇ ವಿಪರೀತ ಪರಿಸ್ಥಿತಿಗಳೂ ಎದುರಾಗುವ ಭಯವಿಲ್ಲವೆಂದು ಮಾತ್ರವಲ್ಲ, ಮರಣದ ಸರಾಸರಿಯ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿರುವುದು.
ಮಗುವಿನ ಆರೋಗ್ಯ
ಸಂಪೂರ್ಣ ಪ್ರಸವಕ್ಕಾಗಿ ಶರೀರವು ಸಜ್ಜುಗೊಂಡಾಗ, ಮಗುವು ಮೆಲ್ಲ ಮೆಲ್ಲನೆ ಯೋನಿ ಕುಳಿಯಿಂದ ಆಂನಿಯೋಟಿಕ್ ಫ್ಲೂಯಿಢನ್ನು ಛೇದಿಸಿ ಹೊರಬರುವುದು. ಈ ಸಮಯದಲ್ಲಿ ಹಲವಾರು
ಬ್ಯಾಕ್ಟೀರಿಯಾಗಳ ಸಂಪರ್ಕಕ್ಕೆ ಬರುವ ಮಗುವು ತನ್ನ ರೋಗ ನಿರೋಧಕ ಶಕ್ತಿಯನ್ನು ಊರ್ಜಿತಗೊಳಿಸುವುದು.
ಯೋನಿಯ ಮೂಲಕ ನೈಸರ್ಗಿಕವಾಗಿ ಹೊರಬಂದ ಮಗುವು ಅಸ್ತಮಾ, ಅಲರ್ಜಿ ಅಥವಾ ಇತರ ಶ್ವಾಸಕೋಶ ಸಂಬಂಧಿತ ರೋಗಗಳಿಗೆ ಒಳಗಾಗುವ ಸಾಧ್ಯತೆಗಳಿಲ್ಲ. ಮಾತ್ರವಲ್ಲದೆ (ಲಾಕ್ಟೋಸ್ ಇನ್ಟೋಲೆರೆನ್ಸ )ಸಕ್ಕರೆಯನ್ನು ಜೀರ್ಣಗೊಳಿಸಲಾಗದಂತಹ ತೊಂದರೆಗೊಳಗಾಗುವರು.
ತಾಯಿಗೆ ಸಂಬಂಧಿಸಿದಂತೆ
ನೈಸರ್ಗಿಕ ಪ್ರಸವವು, ಗರ್ಭಿಣಿಯರನ್ನು ತುಂಬಾ ಒತ್ತಡಕ್ಕೀಡುಮಾಡುತ್ತದೆ.ಎಷ್ಟು ಗಂಟೆಗಳವರೆಗೆ ಪ್ರಸವ ವೇದನೆಯನ್ನು ಅನುಭವಿಸಬೇಕಾಗಬಹುದೆಂದು
ಯಾರಿಂದಲೂ ಪ್ರವಚಿಸಲು ಸಾಧ್ಯವಿಲ್ಲ.ಕೆಲವರಿಗೆ ಕೇವಲ ಎರಡು ಮೂರು ಗಂಟೆಗಳಲ್ಲಿ ಪ್ರಸವವಾದರೆ, ಇನ್ನು ಕೆಲವರು ಹಲವಾರು ಗಂಟೆಗಳ ಕಾಲ ಪ್ರಸವ ವೇದನೆಯನ್ನು ತಾಳಿಕೊಳ್ಳಬೇಕಾಗುತ್ತದೆ.
ಆದರೆ,ಮಗುವು ಯಾವಾಗ ಹೊರಬರುತ್ತದೆಯೆಂದು ನಿಖರವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ.
ಮಗುವಿಗೆ ಸಂಬಂಧಿಸಿದಂತೆ
ಸಾಧಾರಣವಾಗಿ, ಯೋನೀ ಪ್ರಸವವು ಅಷ್ಟೊಂದು ಸಂಕೀರ್ಣವಾಗಿರುವುದಿಲ್ಲ. ಕೆಲವು ಅಸಾಧಾರಣ ಸನ್ನಿವೇಶಗಳಲ್ಲಿ, ಕರುಳ ಬಳ್ಳಿಯು ಸಂಕುಚಿಸಲ್ಪಡುವುದರಿಂದ, ಆಮ್ಲಜನಕದ ಕೊರತೆಯನ್ನು ಎದುರಿಸುವುದು. ಕೆಲವೊಮ್ಮೆ ಬ್ರೇನ್ ಹೆಮರೆಜ್ ಕೂಡಾ ಕಾಣಿಸಿಕೊಳ್ಳಬಹುದು.
ತಾಯಿಗೆ ಸಂಬಂಧಿಸಿದಂತೆ
ನೋವಿನ ಅನುಭವವೇ ಇಲ್ಲದೆ,ನಿಮ್ಮ ಅಗತ್ಯಕ್ಕೆ ತಕ್ಕಂತೆ, ನಿಮ್ಮ ಸಮಯ ಅವಕಾಶಗಳೊಂದಿಗೆ ಹೊಂದಿಕೊಳ್ಳುವಂತೆ ನಿಮ್ಮ ಸಂಪೂರ್ಣ ಸಿದ್ಧತೆಯ ಬಳಿಕ ಬಹಳ ಸರಳವಾಗಿ ನಡೆಸುವ ಶಸ್ತ್ರಕಿೃಯೆಯೇ ಈ ಸಿಸೇರಿಯನ್.
ಚಿಮುಟ ಹಾಗೂ ಇಕ್ಕುಳಗಳ ಬಳಕೆಯ ಅಗತ್ಯಬೀಳದ ಕಾರಣ ಜನನದ ವೇಳೆಗಳಲ್ಲೂ ಅಪಘಾತಗಳುಂಟಾಗುವುದಿಲ್ಲ.
ಮಗುವಿನ ಆಗಮನವು ಅನಿರೀಕ್ಷಿತವಲ್ಲದ ಕಾರಣ, ನಿಮ್ಮ ಭಾವನೆಗಳ ಹೊಯ್ದಾಟಗಳನ್ನೂ ಹತೋಟಿಯಲ್ಲಿಡಬಹುದು. ಹೊರಗಡೆ ಕೆಲಸಮಾಡುವ ಹೆಂಗಸರಿಗಾದರೆ, ಅವರ ರಜೆಯನ್ನು
ಹೊಂದಿಸಿಕೊಳ್ಳಲೂ ಸಿಸೇರಿಯನ್ ಅನುವುಮಾಡಿಕೊಡುವುದು.
ತಾಯಿಗೆ ಸಂಬಂಧಿಸಿದಂತೆ
ತಾಯಿಯು ಸ್ವಲ್ಪ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿ ತಂಗಬೇಕಾಗುವುದು. ಕೆಲವೊಮ್ಮೆ ಡಾಕ್ಟರ್ ತಮ್ಮ ಕೈತಪ್ಪಿನಿಂದ ನಿಮ್ಮ ಬ್ಲಾಡರನ್ನು ಕತ್ತರಿಸುವ ಅಥವಾ ತಮ್ಮ ಸಲಕರಣೆಗಳಾದ, ಚಾಕು ಹಾಗೂ ಕತ್ತರಿಗಳನ್ನು ನಿಮ್ಮ ಉದರದೊಳಗೆ ಮರೆತು ಹೊಲಿದುಬಿಡುವ ಸಾಧ್ಯತೆಗಳನ್ನು ಕಡೆಗಣಿಸುವಂತಿಲ್ಲ.
ಅಂಕಿ ಅಂಶಗಳ ಪ್ರಕಾರ ಸಿಸೇರಿಯನ್ ಮೂಲಕ ಹುಟ್ಟಿದ ೨೮ ದಿನಗಳ ನಂತರ ಮರಣಿಸುವ ನವಜಾತ ಶಿಶುಗಳ ಪ್ರಮಾಣವೂ ಹೆಚ್ಚಾಗಿರುವುದು.
ಮಗುವಿಗೆ ಸಂಬಂಧಿಸಿದಂತೆ
ಸಿಸೇರಿಯನ್ ಮಗುವು ಉಸಿರಾಟದ ತೊಂದರೆಯಿಂದ ಬಳಲುವುದು.ತಾಯಿಗೆ ನೀಡುವ ಅರಿವಳಿಕೆ ಮದ್ದು (ಅನಸ್ತೇಶಿಯಾ) ಮಗುವಿನ ಮೇಲೂ ಪರಿಣಾಮ ಬೀರುವುದು. ತಾಯಿಯ ಉದರವನ್ನು ಛೇದಿಸುವಾಗ, ಕೆಲವೊಮ್ಮೆ ಮಗುವಿನ ತಲೆಬುರುಡೆಯ ಮೇಲೂ ಗೆರೆಬೀಳಬಹುದಾದಂತಹ, ಅತ್ಯಂತ ಅಪಯಕಾರಿ ಘಟನೆಗಳೂ ನಡೆಯಬಹುದು.
ನಿಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಯಾವುದೇ ರೀತಿಯ ಪ್ರಸವ ಕ್ರಿಯೆಗೂ ನೀವು ಮುಂದಾಗಬಹುದು. ಯಾಕೆಂದರೆ,
ಆರೋಗ್ಯಪೂರ್ಣವಾದ ಕಂದ ಹಾಗೂ ಸಂತೃಪ್ತ ಕುಟುಂಬವೇ ನಿಮ್ಮ ಗುರಿಯಲ್ಲವೇ ?
0
Like
0
Saves
0
Shares
A