#HomeRemedies #HairCare#dandruff#dryhaircare #BBCreatorsClub #kannada #ಮನೆಮದ್ದು ತಲೆಹೊಟ್ಟನ್ನು ನಿವಾರಿಸುವ;ವಿಧಾನಗಳನ್ನು; 1) ಮೆಂತೆ ತಲೆಹೊಟ್ಟಿನ ನಿವಾರಣೆಗೆ ಮೆಂತೆ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಕೊಂಚ ಮೆಂತೆಕಾಳುಗಳನ್ನು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಡಬೇಕು. ಒಂದು ಕಪ್ ನಲ್ಲಿ ಎರಡು ದೊಡ್ಡ ಚಮಚ ಮೆಂತೆ ಹಾಕಬೇಕು. ಮರುದಿನ ಬೆಳಿಗ್ಗೆ ನೀರಿನ ಸಹಿತ ಮೆಂತೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಅರೆಯಿರಿ. ಈ ಲೇಪನವನ್ನು ಸ್ನಾನಕ್ಕೂ ಒಂದು ಗಂಟೆ ಮುನ್ನ ತಲೆಗೂದಲ ಬುಡಕ್ಕೆ ನಯವಾದ ಮಸಾಜ್ ಮೂಲಕ ಹಚ್ಚಿ. ಬಳಿಕ ಸೌಮ್ಯ ಶಾಂಪೂ ಬಳಸಿ ತಲೆಗೂದಲನ್ನು ತೊಳೆದುಕೊಳ್ಳಿ. 2)ಮೊಸರು ತಲೆಹೊಟ್ಟಿನ ನಿವಾರಣೆಗೆ ದಪ್ಪ ಮೊಸರನ್ನು ನೇರವಾಗಿ ಕೂದಲ ಬುಡಕ್ಕೆ ಹಚ್ಚಬಹುದು. ಗಟ್ಟಿ ಮೊಸರನ್ನು ತಯಾರಿಸಲು ತೆಳುವಾದ ಹತ್ತಿಯ ಬಟ್ಟೆಯಲ್ಲಿ ಮೊಸರನ್ನು ಹಾಕಿ ಸುಮಾರು ಅರ್ಧ ಗಂಟೆ ಕಾಲ ನೇತು ಹಾಕಿ. ನೀರು ಇಳಿದ ಬಳಿಕ ಘನವಾಗಿರುವ ಮೊಸರನ್ನು ತಲೆಗೂದಲಿಗೆ ಹಚ್ಚಿ ಒಂದು ಘಂಟೆ ಬಿಟ್ಟು ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ
3) ಬೇವು ಕೂದಲಿಗೆ ಬೇವಿನ ಎಲೆಗಳನ್ನು, ವಿಶೇಷವಾಗಿ ಕಹಿಬೇವಿನ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು. ತಲೆಹೊಟ್ಟಿನ ನಿವಾರಣೆಗೆ ಒಂದು ಕಪ್ ನಷ್ಟು ಈಗತಾನೇ ಕಿತ್ತ ಕಹಿಬೇವಿನ ಎಲೆಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಗಾಢಹಸಿರು ಬಣ್ಣಕ್ಕೆ ತಿರುಗಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ತಣ್ಣಗಾದ ಬಳಿಕ ಈ ನೀರನ್ನು ಸೋಸಿ ಎಲೆಗಳನ್ನು ನಿವಾರಿಸಿ. ಈ ನೀರಿನಿಂದ ತಲೆಯನ್ನು ತೋಯಿಸಿಕೊಂಡು ಕೊಂಚ ಹೊತ್ತು ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ 4) ತುಳಸಿ ತುಳಸಿಯನ್ನೂ ಮೇಲೆ ವಿವರಿಸಿದ ವಿಧಾನದಂತೆಯೇ ಬಳಸಬಹುದು. ಒಂದು ಲೀಟರ್ ನೀರಿನಲ್ಲಿ ಒಂದು ಮುಷ್ಠಿಯಷ್ಟು ತುಳಸಿ ಎಲೆಗಳನ್ನು ಹಾಕಿ ಕುದಿಸಿ. ನೀರು ಗಾಢ ಹಸಿರಾದ ಬಳಿಕ ನೀರನ್ನು ತಣಿಸಿ ಸೋಸಿ. ಮೊದಲು ಸೌಮ್ಯ ಶಾಂಪೂ ಬಳಸಿ ತಲೆಯನ್ನು ತೊಳೆದುಕೊಳ್ಳಿ ಬಳಿಕ ಈ ನೀರನ್ನು ಬಳಸಿ ತಲೆಯನ್ನು ತೊಳೆದುಕೊಳ್ಳಿ. 5) ಲೋಳೆಸರ ಒಂದು ವೇಳೆ ತಲೆಯಲ್ಲಿ ತಲೆಹೊಟ್ಟಿನ ಜೊತೆಗೇ ತುರಿಕೆಯೂ ಇದ್ದರೆ ಲೋಳೆಸರ ಪ್ರಥಮ ಆಯ್ಕೆಯಾಗಿದೆ. ಈಗತಾನೇ ತುಂಡರಿಸಿದ ಒಂದು ಲೋಳೆಸರದ ಕೋಡನ್ನು ಸೀಳಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಲೆಗೂದಲ ಬುಡಕ್ಕೆ, ವಿಶೇಷವಾಗಿ ತಲೆಗೂದಲಲ್ಲಿ ತಲೆಹೊಟ್ಟು ಇರುವಲ್ಲೆಲ್ಲಾ ಹೆಚ್ಚಾಗಿ ಹಚ್ಚಿ. ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ಶಾಂಪೂ ಹಾಗೂ ಕಂಡೀಶನರ್ ಬಳಸಿ ತಲೆಯನ್ನು ತೊಳೆದುಕೊಳ್ಳಿ 6) ಹಸಿರು ಟೀ ಎರಡಿ ಹಸಿರು ಟೀ ಬ್ಯಾಗ್ ಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಕೊಂಚ ಹೊತ್ತಿನ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಬಳಿಕ ಟೀ ಬ್ಯಾಗ್ ಗಳನ್ನು ಹಿಂಡಿ ನೀರು ಸಂಗ್ರಹಿಸಿ. ತಣ್ಣಗಿದ್ದಂತೆಯೇ ಈ ನೀರಿನಿಂದ ತಲೆಗೂದಲನ್ನು ತೋಯಿಸಿಕೊಂಡು ನಯವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ಶಾಂಪೂ ಬಳಸಿ ತೊಳೆದುಕೊಳ್ಳಿ. 7) ಮೊಟ್ಟೆಯ ಬಿಳಿಭಾಗ ಸುಮಾರು ಎರಡು ದೊಡ್ಡ ಅಥವಾ ಮೂರು ಮಧ್ಯಮ ಗಾತ್ರದ ಮೊಟ್ಟೆಗಳ ಬಿಳಿಭಾಗವನ್ನು ಪ್ರತ್ಯೇಕಿಸಿ ಚೆನ್ನಾಗಿ ಗೊಟಾಯಿಸಿ. ಈ ಲೇಪನವನ್ನು ತಲೆಗೆಹಚ್ಚಿ ತಲೆಗೂದಲ ಬುಡಕ್ಕೆ ಕೊಂಚವೇ ಮಸಾಜ್ ಮಾಡಿ. ಸುಮಾರು ಮೂವತ್ತು ನಿಮಿಷಗಳವರೆಗೆ ಹಾಗೇ ಒಣಗಲು ಬಿಡಿ. ಬಳಿಕ ನಿಮ್ಮ ನಿತ್ಯದ ಶಾಂಪೂ ಬಳಸಿ ತೊಳೆದುಕೊಳ್ಳಿ.ಆದರೆ ಈ ವಿಧಾನದಿಂದ ಮುಂದಿನ ಒಂದು ಅಥವಾ ಎರಡು ದಿನಗಳವರೆಗೆ ಮೊಟ್ಟೆಯ ವಾಸನೆ ಇರುವ ಕಾರಣ ರಜೆ ಇರುವ ದಿನಗಳಲ್ಲಿ ಈ ವಿಧಾನ ಅನುಸರಿಸುವುದು ಸೂಕ್ತ. ಆದರೆ ತಲೆಹೊಟ್ಟು ನಿವಾರಣೆಯಾಗುವ ಕಾರಣ ಈ ವಾಸನೆಯನ್ನು ಕೊಂಚ ಸಹಿಸಬೇಕಾಗುತ್ತದೆ. 8)ಟೊಮೆಟೋ ಜ್ಯೂಸ್ ತಲೆಹೊಟ್ಟು ಕೊಂಚವೇ ಪ್ರಮಾಣದಲ್ಲಿದ್ದು ಪುಡಿ ಉದುರುತ್ತಿದ್ದರೆ ಟೊಮಾಟೋ ಜ್ಯೂಸ್ ಬಳಸಬಹುದು. ಟೊಮಾಟೋ ರಸವನ್ನು ಹಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ನಂತರ ಕಂಡೀಶನರ್ ಹಾಕಿ ಕೂದಲನ್ನು ತೊಳೆದುಕೊಳ್ಳಿ. #nesting #monsoonhaircare
12 Jul 2019
7
Likes
5
Comments
0
Shares
Sowmya Prithvi
<font color ="#3b5998"><b> @63713f982338f60015eaa17b </b></font> <font color ="#3b5998"><b> @629847e308f7c30014119c82 </b></font> <font color ="#3b5998"><b> @637674108940140017eee1e2 </b></font> <font color ="#3b5998"><b> @616da14c8054f30013c5bccd </b></font> <a href="http://app.babychakra.com/user/1595126"><b><font color ="#3b5998">Rashmi Gowda</font></b></a> <a href="http://app.babychakra.com/user/1190966"><b><font color ="#3b5998">meghana kiran</font></b></a><br>
<font color ="#3b5998"><b> @616da0fa46822a0013624488 </b></font>
Sowmya Prithvi
Like
Reply
20 Aug 2019