ಬೇಬಿಚಕ್ರದ #Equalparent ಅಭಿಯಾನ 2019

cover-image
ಬೇಬಿಚಕ್ರದ #Equalparent ಅಭಿಯಾನ 2019

ಬೇಬಿಚಕ್ರ ಅವರಿಂದ #EqualParent ಅನ್ನು ಬೆಂಬಲಿಸಲು ನಗರಗಳಾದ್ಯಂತ ಇಪ್ಪತ್ತು ಸಾವಿರ ತಂದೆಯಂದಿರು ಒಗ್ಗೂಡಿದರು.

 

 

ಭಾರತ, 18 ಜೂನ್, 2019: #FathersDay 2019 ರಂದು, ಭಾರತದ ಅತಿದೊಡ್ಡ ಗರ್ಭಧಾರಣೆ ಮತ್ತು ಪೋಷಕರ ವೇದಿಕೆಯಾದ ಬೇಬಿಚಕ್ರಾ 15 ಕ್ಕೂ ಹೆಚ್ಚು ದೊಡ್ಡ ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ಸ್ಟಾರ್ಟ್ ಅಪ್‌ಗಳೊಂದಿಗೆ ಉದಾಹರಣೆಗೆ ಏರ್‌ಟೆಲ್, ಫ್ಲಿಪ್‌ಕಾರ್ಟ್, ಹ್ಯಾಪ್ಟಿಕ್, ಜಾನ್ಸನ್ಸ್ ಮತ್ತು ಜಾನ್ಸನ್ಸ್, ಅಕ್ಕಿವಾಲೋವ್, ಸಿಕ್ವೊಯಾ, ಲಿಂಕ್ಡ್‌ಇನ್, ಸೊಹೊ ಹೌಸ್, 9 ಸ್ಟ್ಯಾಕ್ಸ, 5000+ ಕಾರ್ಪೊರೇಟ್ ತಂದೆಯಂದಿರು ಮತ್ತು 15000+ ಬೇಬಿಚಕ್ರ ಆಪ್ ತಂದೆಯಂದಿರ ಜೊತೆಗೆ # Equalparent ಅಭಿಯಾನದ ಸಮೀಕ್ಷೆಗಾಗಿ ಕೆಲಸ ಮಾಡಿತು. ಮನೆಯಲ್ಲಿ ಮತ್ತು ಅವರ ಮಕ್ಕಳೊಂದಿಗೆ ನಿಜವಾದ ಪಾಲುದಾರನ ಪಾತ್ರವನ್ನು ನಿರ್ವಹಿಸುವ ತಂದೆಗೆ ಬೆಂಬಲವನ್ನು ನೀಡಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

 

ಇಶಾ ಡಿಯೋಲ್, ಹಿತೇನ್ ತೇಜ್ವಾನಿ, ಡೇನಿಯಲ್ ವೆಬ್ಬರ್,  ಡಿಯನ್ನೆ ಪಾಂಡೆ, ಸಿಮೋನೆ ಖಂಭಟ್ಟಾ , ಛಾವಿ ಮಿತ್ತಲ್, ಆಂಡ್ರಿಯಾ ಮಿಚೆಲ್ ಸೇರಿದಂತೆ 45 ಪ್ರಸಿದ್ಧ ಪ್ರಭಾವಿ ವ್ಯಕ್ತಿಗಳು ಸಹ ಮುಂದೆ ಬಂದು ತಮ್ಮ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಮತ್ತು # Equalparent ಅಭಿಯಾನಕ್ಕೆ ಬೆಂಬಲವನ್ನು ನೀಡಲು ಪ್ರತಿಜ್ಞೆ ಮಾಡುವ ಮೂಲಕ ಅಭಿಯಾನವನ್ನು ಬೆಂಬಲಿಸಿದರು.

 

ಬೇಬಿಚಕ್ರಾ ದೇಶಾದ್ಯಂತ ಪೋಷಕರು, ವಿಶೇಷವಾಗಿ ತಾಯಂದಿರಿಂದ 250+ ಸ್ಪೂರ್ತಿದಾಯಕ ಕಥೆಗಳನ್ನು ಸಂಗ್ರಹಿಸಿದೆ, ಅವರು ಅಪಾರ ಉತ್ಸಾಹ ಮತ್ತು ಹೆಮ್ಮೆಯಿಂದ ತಮ್ಮ ಗಂಡಂದಿರನ್ನು ಅಭಿಯಾನವನ್ನು ಬೆಂಬಲಿಸಲು ನಡೆಯುತ್ತಿರುವ ಸ್ಪರ್ಧೆಯ ಭಾಗವಾಗಿ ತೊಡಗಿಸಿ ಕೊಳ್ಳುವ ತಂದೆಯರೆಂದು (ಇನ್ವಾಲ್ವಡ್ ಫಾದರ್ ಎಂದು)  ನಾಮನಿರ್ದೇಶನ ಮಾಡಿದರು.

 

ಕುಟುಂಬಗಳು ಮತ್ತು ಕಾರ್ಪೊರೇಟ್‌ಗಳೊಳಗಿನ ತಂದೆಯಂದಿರಿಂದ ಒಳನೋಟಗಳು ಮತ್ತು ದೃಷ್ಟಿಕೋನಗಳನ್ನು ಹೊರತರುವ ಈ ಪ್ರಮಾಣದಲ್ಲಿ ನಡೆಯುತ್ತಿರುವ ಮೊದಲ ಅಭಿಯಾನ ಇದಾಗಿದೆ. ಒಳನೋಟಗಳಿಗೆ ಪೂರಕವಾಗಿ ಈ ಅಭಿಯಾನಕ್ಕೆ ಸಂಬಂಧಿಸಿದ ಕಾರ್ಪೊರೇಟ್ ಪಾಲುದಾರರಲ್ಲಿ ಫ್ಲಿಪ್‌ಕಾರ್ಟ್, ಹೆಚ್ಕ್ಯು, ಬೆಂಗಳೂರು ಸೇರಿದಂತೆ ಆಯೋಜಿಸಲಾದ ಆಫ್‌ಲೈನ್ ಪ್ಯಾನಲ್ ಚರ್ಚೆಗಳು ನಡೆದವು, ಅಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಂದ ಸಮಾನ ಪಾಲನೆ ಮತ್ತು ಬೆಂಬಲವನ್ನು ಹಿರಿಯ ನಾಯಕತ್ವ ಮತ್ತು ಸಂಘಟನೆಯ ಎಲ್ಲ ಸದಸ್ಯರು ಚರ್ಚಿಸಿದರು.

 

ಈ ಅಭಿಯಾನವು ತಂದೆಯಂದಿರನ್ನು, ಕುಟುಂಬಗಳನ್ನು ಮತ್ತು ಕಾರ್ಪೊರೇಟ್‌ಗಳನ್ನು- ಡಿಜಿಟಲ್ ಮತ್ತು ಆಫ್‌ಲೈನ್ ಮೂಲಕ ತಲುಪುವ ದ್ವಿ ಮಾರ್ಗಗಳನ್ನು ತೆಗೆದುಕೊಂಡಿದೆ. ದೇಶಾದ್ಯಂತ 5000+ ಕ್ಕೂ ಹೆಚ್ಚು ತಂದೆಯರು, ತಂದೆಯ ದಿನದ ಮುನ್ನಾದಿನದಂದು ವೈಯಕ್ತಿಕ ಉಡುಗೊರೆಗಳೊಂದಿಗೆ ಅಚ್ಚರಿಯ ಪ್ರಚಾರ ಚೀಲಗಳನ್ನು ಪಡೆದರು.

 

ಈ ಡೇಟಾವು ಭಾರತದಲ್ಲಿ ಈ ಪ್ರಮಾಣದಲ್ಲಿ ಸಂಗ್ರಹಿಸಲ್ಪಟ್ಟ ಅದರ ಪ್ರಕಾರದ ಮೊದಲನೆಯ ಡೇಟಾವಾಗಿದೆ ಮತ್ತು ಇದು ಭಾರತೀಯ ಕುಟುಂಬದ ವಿಕಾಸವನ್ನು ಸೆರೆಹಿಡಿಯುವಲ್ಲಿ ವಿಶಿಷ್ಟವಾಗಿದೆ.

ಕೆಲವು ಉನ್ನತ ಕಾರ್ಪೊರೇಟ್‌ಗಳ ಪೋಷಕರು #Equalparent ಎಂಬ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

 

ಆಕ್ರಿತ್ ವೈಶ್ - ಸ್ಥಾಪಕ ಹ್ಯಾಪ್ಟಿಕ್, - 'ಮಕ್ಕಳ ಪಾಲನೆಯನ್ನು ತಂದೆ ಮತ್ತು ತಾಯಿಯ ನಡುವೆ ಮಾತ್ರ ವಿಭಜಿಸಬಹುದು. ಒಂದನ್ನು ಮಾಡಲು ಎರಡು ತೆಗೆದುಕೊಳ್ಳುತ್ತದೆ ”

 

ದಿನೇಶ್ ಕೀರ್ತಿ-ಅಸೋಸಿಯೇಟ್ ಡೈರೆಕ್ಟರ್-ಕಾರ್ಪೊರೇಟ್ ಕಮ್ಯುನಿಕೇಷನ್ಸ್, ಪ್ಲಿಪ್ ಕಾರ್ಟ್- “ತನ್ನ ಮಗುವಿನ ಭವಿಷ್ಯವನ್ನು ಭದ್ರಪಡಿಸುವುದು ಮತ್ತು ಅವರ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳುವುದರ ಹೊರತಾಗಿ, ಪ್ರತಿಯೊಬ್ಬ ಅಪ್ಪ ತನ್ನ ಮಗುವಿನೊಂದಿಗೆ ಪ್ರತಿದಿನವೂ ಸಂಪರ್ಕ ಹೊಂದಬೇಕು ಮತ್ತು ಅವರ ದಿನಚರಿಯ ಸಕ್ರಿಯ ಭಾಗವಾಗಿರಬೇಕು. ಪ್ರತಿಯೊಂದು ಚಟುವಟಿಕೆಯು ಆಲೋಚನೆಗಳು, ಮಾಹಿತಿ, ಅಭಿಪ್ರಾಯ ಮತ್ತು ಭಾವನೆಗಳೊಂದಿಗೆ ಸಂವಹನ ನಡೆಸಲು ಮತ್ತು ವಿನಿಮಯ ಮಾಡಿಕೊಳ್ಳಲು ಅವಕಾಶವನ್ನು ಒದಗಿಸುತ್ತದೆ. ಈ ವಿನಿಮಯಗಳು ಮಗುವಿಗೆ ಮುಖ್ಯವಾದರೂ, ಅವು ಅಪ್ಪನಿಗೂ ಅಷ್ಟೇ ಮುಖ್ಯ ”

 

ಈ ಆಲೋಚನೆಗಳನ್ನು ಹುಟ್ಟುಹಾಕಿದ , ನಯ್ಯಾ ಸಗ್ಗಿ - ಸಂಸ್ಥಾಪಕರು ಮತ್ತು ಸಿಇಓ -ಬೇಬಿಚಕ್ರ -'ನಮಗೆ ತಿಳಿದಿರುವಂತೆ ಭಾರತವು ಜಂಟಿ ಕುಟುಂಬಗಳಿಂದ ಸಣ್ಣ ಕುಟುಂಬಗಳಾಗಿ ವೇಗವಾಗಿ ಬದಲಾಗಿದೆ. ಶಿಶುಪಾಲನಾ ಪೂರೈಕೆದಾರರು ಮತ್ತು ನಿರ್ಧಾರ ತೆಗೆದುಕೊಳ್ಳುವವರಾಗಿ ತಂದೆಯಂದರು ಆಳವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ನಮ್ಮ ಅಪ್ಲಿಕೇಶನ್‌ನಲ್ಲಿ ನಾವು ಮೊದಲೇ ಅರಿತುಕೊಂಡಿದ್ದೇವೆ. ಈ ಸಮೀಕ್ಷೆಯ ಆವಿಷ್ಕಾರಗಳನ್ನು ಭಾರತೀಯ ಕುಟುಂಬಗಳ ಬಗ್ಗೆ ಇರುವ ಅತಿದೊಡ್ಡ ಆನ್‌ಲೈನ್ ಡೇಟಾಸೆಟ್‌ಗಳಿಂದ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಅಭಿಯಾನಕ್ಕೆ ಬೆಂಬಲವನ್ನು ವಾಗ್ದಾನ ಮಾಡಿದ ನಮ್ಮ ಅದ್ಭುತ ಪಾಲುದಾರರು ಮತ್ತು ಪ್ರಭಾವಿಗಳೊಂದಿಗೆ ಭಾರತದಲ್ಲಿ ಸಮಾನ ಪೋಷಕರ ಸುತ್ತಲಿನ ಸಂಭಾಷಣೆಯನ್ನು ಮುನ್ನಡೆಸಲು ನಾವು ಉತ್ಸುಕರಾಗಿದ್ದೇವೆ. ”

 

ಡಿಜಿಟಲ್ ಅಭಿಯಾನದ ಭಾಗವಾಗಿ, ಬೇಬಿಚಕ್ರ ಅದರ ಸಮುದಾಯದೊಂದಿಗೆ ಸಂವಹನ ನಡೆಸಿತು ಮತ್ತು ಹೊಸ ಯುಗದ ತಂದೆ ಇಂದು ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ಕೆಲವು ಅದ್ಭುತ ಆಶ್ಚರ್ಯಕರ ಸಂಗತಿಗಳನ್ನು ಕಂಡುಹಿಡಿದಿದ್ದಾರೆ. ಕೆಲವು ಪ್ರಬಲವಾದ ಒಳನೋಟಗಳು ಇಲ್ಲಿವೆ 

BabyChakra's Annual Father's Day Report: Are you an Equal Parent?

 

ಪ್ರತಿಯೊಬ್ಬ ತಂದೆಯು ಸಮಾನ ಪೋಷಕ ಪಾತ್ರವನ್ನು ನಿರ್ವಹಿಸಿದ ಬಗ್ಗೆ ಹಂಚಿಕೊಳ್ಳಲು ಸ್ಪೂರ್ತಿದಾಯಕ ಕಥೆಯನ್ನು ಹೊಂದಿದ್ದಾರೆ ಎಂಬುದು ಈಗ ಸಾಕಷ್ಟು ಸ್ಪಷ್ಟವಾಗಿದೆ. ಅಂತಹ ಅನೇಕ ಕಥೆಗಳನ್ನು ನೀವು ಇಲ್ಲಿ ಓದಬಹುದು: 

 Inspiring Stories about #EqualParenting

 

 Share your story ! ನೀವು ಈ ಅಭಿಯಾನಕ್ಕೆ ಸೇರಬಹುದು ಮತ್ತು ನಿಮ್ಮನ್ನು, ಸ್ನೇಹಿತರನ್ನು ಮತ್ತು ಪುರುಷರನ್ನು # Equalparent ಎಂದು ಹೆಸರಿಸಬಹುದು, ಮತ ಚಲಾಯಿಸಿ ಮತ್ತು ಗೆಲ್ಲಬಹುದು!

 

#equalparent #equalparent
logo

Select Language

down - arrow
Personalizing BabyChakra just for you!
This may take a moment!