ಗರ್ಭಿಣಿಯರಿಗೆ  ಸಂಗೀತ ಚಿಕಿತ್ಸೆ !

ಗರ್ಭಿಣಿಯರಿಗೆ ಸಂಗೀತ ಚಿಕಿತ್ಸೆ !

1 Nov 2021 | 1 min Read

Medically reviewed by

Author | Articles

ಪ್ರತಿಯೊಂದು ತಾಯ್ತನವನ್ನು ಅನುಭವಿಸುತ್ತಿರುವ ಹೆಣ್ಣಿಗೆ, ಪ್ರತಿ ನಿಮಿಷ ಕೂಡ ತುಂಬಾ ಮುಖ್ಯ. ತನ್ನ ಗರ್ಭದಲ್ಲಿ ನವಮಾಸದಲ್ಲಿ ಬೆಳೆಯುವ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ಅವಳ ಮನಸ್ಸಿನಲ್ಲಿ ಗಾಢವಾಗಿ ಬೇರೂರಿರುತ್ತದೆ. ಮಗುವಿನ ರೂಪವನ್ನು ನೆನೆಯುತ್ತಾ, ಮಗುವಿನ ಬಗ್ಗೆ ನಾನಾ ರೀತಿಯ ಕನಸುಗಳನ್ನು ಕಾಣುತ್ತಾ ದಿನಗಳನ್ನು ಲೆಕ್ಕ ಹಾಕುತ್ತಿರುತ್ತಾಳೆ. ಅವಳ ದೃಷ್ಟಿಯಲ್ಲಿ ಮಗು ಬೆಳೆದು ದೊಡ್ಡದಾದಾಗ ಉತ್ತಮ ಹವ್ಯಾಸಗಳೊಂದಿಗೆ ಬೆಳೆಯಬೇಕು ಎಂದು ಇರುತ್ತದೆ. ಅಕಸ್ಮಾತ್ ತಾಯಿ ಆಗುವವಳ ಅಭಿರುಚಿ ಸಂಗೀತ-ನೃತ್ಯ -ಚಿತ್ರಕಲೆ- ಓದುವ ಹವ್ಯಾಸಗಳಿದ್ದರೆ, ತನ್ನ ಮಗು ಕೂಡ ಇದೇ ಹವ್ಯಾಸದಿಂದ ಬೆಳೆಯಬೇಕು ಎಂಬ ಅಭಿಲಾಷೆ ಇರುತ್ತದೆ. ಮಗುವಿನ ಬೆಳವಣಿಗೆಯ ಹಂತದಲ್ಲಿ ಇಂಥ ಹವ್ಯಾಸಗಳನ್ನು ರೂಢಿ ಮಾಡಿಸಬೇಕು ಎಂಬ ಹೆಬ್ಬಯಕೆ ಪ್ರತೀ ತಾಯಿಯಲ್ಲಿಯೂ ಇರುತ್ತದೆ.

 

ನೀವೆಲ್ಲಾ ಮಹಾಭಾರತದ ಕಥೆಯನ್ನು ಕೇಳಿಯೇ ಇರುತ್ತೀರಿ. ಕೃಷ್ಣನ ತಂಗಿ ಸುಭದ್ರೆಯ ಕಥೆ ತಿಳಿದೇ ಇದೆ. ಸುಭದ್ರೆಯು ಕೃಷ್ಣ ಹೇಳುವ ಕಥೆಯನ್ನು ಕೇಳಿ ಅರ್ಧದಲ್ಲಿ ನಿದ್ರಿಸಿಬಿಡುತ್ತಾಳೆ. ಆದರೆ ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯು, ಕೃಷ್ಣ ಹೇಳುವ ಕಥೆಯನ್ನು ಕೊನೆಯ ಘಟ್ಟದವರೆಗೆ ಆಲಿಸಕೊಂಡ. ಅಪೂರ್ಣ ಕಥೆಯನ್ನು ಆಲಿಸಿದ ಅಭಿಮನ್ಯು , ಮುಂದೆ ಕುರುಕ್ಷೇತ್ರ ಯುದ್ಧದಲ್ಲಿ ಚಕ್ರವ್ಯೂಹವನ್ನು ಬೇಧಿಸಿದ. ಆದರೆ ಹೊರಬರಲು ಮಾರ್ಗ ತಿಳಿಯದೇ ಸೆಣಸಿ ವೀರಮರಣವನ್ನು ಗಿಟ್ಟಿಸಿಕೊಂಡ. ವಿಜ್ಞಾನಿಗಳ ವೈಜ್ಞಾನಿಕ ಪರಿಶೋಧನೆಯಿಂದಲೂ ಇದು ದೃಢಪಟ್ಟಿದೆ. ಗರ್ಭದಲ್ಲಿರುವ ಮಗು ನಮ್ಮ ಚಲನವಲನದ ಜೊತೆಗೆ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ. ತಾಯಿಯಾದವಳ ಮನಸ್ಥಿತಿಯು ಮಗುವಿನ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ ಎಂಬುದು ಅನಾದಿ ಕಾಲದಿಂದಲೂ ತಿಳಿದಿದೆ. ಹಾಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಪ್ರತಿಯೊಂದು ತಾಯಂದಿರು ತಮ್ಮ ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯದ ಮೇಲೂ ಹೆಚ್ಚಿನ ನಿಗಾವಹಿಸಿ ನೋಡಿಕೊಳ್ಳಬೇಕು.
ಬೆಳಗ್ಗೆ ಬೇಗ ಏಳಲು ಕಷ್ಟವಾಗುವ ಬಹಳಷ್ಟು ತಾಯಂದಿರು, ಭಾರವಾದ ಮನಸಲ್ಲಿ ಎದ್ದೇಳುತ್ತಾರೆ. ಕೆಲವರು ಎದ್ದಕೂಡಲೇ ಅಡಿಗೆಮನೆ ಇತರೆ ಕೆಲಸ ಎಂದು ಬ್ಯುಸಿಯಾಗಿರುತ್ತಾರೆ. ನಮ್ಮ ಇಡೀ ದಿನದ ಮಾನಸಿಕ ಸ್ಥಿತಿ ಒಂದೇ ರೀತಿಯಲ್ಲಿ ಇರಬೇಕೆಂದರೆ, ಬೆಳಗಿನ ನಮ್ಮ ಭಾವನೆ ಪ್ರಶಾಂತವಾಗಿರಬೇಕು. ಕೆಲವರು ಬೆಳಗ್ಗೆ ಎದ್ದ ತಕ್ಷಣ ವಾಕಿಂಗ್ ವ್ಯಾಯಾಮ ಯೋಗ ಇದನ್ನು ಅವಲಂಬಿಸುತ್ತಾರೆ. ಯಾರೇ ಆಗಲಿ, ಯಾವುದೇ ವಯೋಮಾನದಲ್ಲಿ ಆಗಲಿ ನಮ್ಮ ದಿನದ ಆರಂಭವನ್ನು ಪ್ರಶಾಂತತೆಯಿಂದ ಆರಂಭಿಸಿದರೆ ದಿನಪೂರ್ತಿ ಹಿತವಾಗಿರುತ್ತದೆ. ವಿಶೇಷವಾಗಿ ಹೇಳಬೇಕೆಂದರೆ, ಗರ್ಭಿಣಿ ತಾಯಿಂದಿರಿಗೆ ಬೆಳಗಿನ ಮೂಡ್ ಸ್ವಿಂಗ್ ಇದ್ದೇ ಇರುತ್ತದೆ. ಕೆಲವು ಮಹಿಳೆಯರಲ್ಲಿ ದಿನಪೂರ್ತಿ ಮನಸ್ಸಿನಲ್ಲಿ ಕಿರಿಕಿರಿ ಏರ್ಪಟ್ಟಿರುತ್ತದೆ. ಯಾರನ್ನು ನೋಡಿದರೂ ಕಿರುಚಾಡುವ, ಕೋಪಗೊಳ್ಳುವ ಪ್ರವೃತ್ತಿ ಆರಂಭವಾಗುತ್ತದೆ. ಸದಾ ಸಿಡಿಮಿಡಿ, ಮನಸಿನ ಭಾವನೆಯಲ್ಲಿ ಏರುಪೇರು, ಖಿನ್ನತೆ, ಮೂಡ್ ಸ್ವಿಂಗ್, ಇದ್ದಕ್ಕಿದ್ದ ಹಾಗೆ ದುಃಖ ಆವರಿಸಿಕೊಳ್ಳುವುದು , ವಿಪರೀತ ಬೇಸರ, ಆಲಸ್ಯ, ತಾತ್ಸಾರ, ಈ ಎಲ್ಲಾ ಭಾವನೆಗಳು ಗರ್ಭಿಣಿಯರಲ್ಲಿ ಸಾಮಾನ್ಯ.

ನಮ್ಮ ನಿಮ್ಮ ಮನೆಗಳಲ್ಲಿ ಹಿಂದಿನ ಕಾಲದವರು ಅನುಸರಿಸಿಕೊಂಡು ಬಂದ ಪದ್ಧತಿಯನ್ನು ನಾವು ಒಮ್ಮೆ ನೆನಪು ಮಾಡಿಕೊಳ್ಳೋಣ. ವಯಸ್ಸಾದ ಅಜ್ಜಿಯಂದಿರು ಇರುವ ಮನೆಯಲ್ಲಿ ಗರ್ಭಿಣಿಯರಿಗೆ ವಿಶೇಷವಾದ ಕೊಠಡಿಯನ್ನು, ವಿಶೇಷವಾದ ದೈನಂದಿನ ಜೀವನಶೈಲಿಯನ್ನು ಅಳವಡಿಸಿರುತ್ತಾರೆ. ಮನೆಯಲ್ಲಿ ಗರ್ಭಿಣಿ ಸ್ತ್ರೀಯರ ಆರೈಕೆಯನ್ನು ಸಂಪೂರ್ಣವಾಗಿ ಇವರೇ ನೋಡಿಕೊಳ್ಳುತ್ತಿದ್ದರು, ನವಮಾಸ ತುಂಬಿ ಬಾಣಂತನ ಮುಗಿಯುವವರೆಗೂ ಮನೆಯಲ್ಲಿ ಇವರ ಜವಾಬ್ಧಾರಿ ಇರುತಿತ್ತು. ಇವರ ಸಲಹೆ ಸೂಚನೆಯನ್ನು ಕೇಳಲಾಗುತ್ತಿತ್ತು. ಆದರೆ ಇಂದು ಕಾಲ ಬದಲಾಗಿದೆ. ಕೂಡುಕುಟುಂಬಗಳು ಮಾಯವಾಗಿದೆ. ಹಿರಿಯರ ಮಾರ್ಗದರ್ಶನ ಸಲಹೆ ಸೂಚನೆಯನ್ನು ಮಾಡುವ ಕಾರ್ಯ ತಾಂತ್ರಿಕವಾಗಿ ಆಪ್ ಬ್ಲಾಗ್ಸ್ಗಳು ಮಾಡುತ್ತೀವೆ. ಇದಕ್ಕಾಗಿ ಹಲವಾರು ರೀತಿಯ ವಿಧಾನಗಳನ್ನು ಗರ್ಭಿಣಿ ಸ್ತ್ರೀಯರು ಅನುಸರಿಸುತ್ತಿದ್ದಾರೆ. ಎಲ್ಲಾ ಸಲಹೆ-ಸೂಚನೆಗಳಿಗೆ ಮುಖ್ಯವಾದುದು ನಮ್ಮ ಮನಸ್ಸಿನ ಭಾವನೆಯನ್ನು ಹೇಗೆ ನಿಯಂತ್ರಣದಲ್ಲಿ ಇಡಬಹುದು ಎಂಬುದು ಪ್ರತೀಯೊಬ್ಬ ಮಹಿಳೆಯರ ಪ್ರಶ್ನೆಯಾಗಿದೆ. ದಿನಪೂರ್ತಿ ಒಂದೇ ರೀತಿಯಲ್ಲಿ ಮನಸ್ಸಿನ ಭಾವನೆಯನ್ನು ನಿಯಂತ್ರಣದಲ್ಲಿಡುವುದು ಒಂದು ಯಕ್ಷ ಪ್ರಶ್ನೆಯೇ ಸರಿ. ಇದಕ್ಕಾಗಿ ಟಿವಿ ನೋಡುವುದು, ಒಳ್ಳೆಯ ಆಹಾರ ಸೇವನೆ ಮಾಡುವುದು, ನಿದ್ರೆಯ ಮೊರೆ ಹೋಗುವುದು , ಕೆಲವು ಹವ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಮನಸಿನ ಭಾವನೆಗೆ ಪರಿಣಾಮಕಾರಿ ಔಷಧಿ ಸಂಗೀತ. ಮನಸ್ಸಿನ ಭಾವನೆಯನ್ನು ಒಂದೇ ಅಳತೆಯಲ್ಲಿ ಸರಿದೂಗಿಸುವ ಮಾಂತ್ರಿಕ ಶಕ್ತಿ ಇರುವುದು ಸಂಗೀತಕ್ಕೆ. ಸಂಗೀತಕ್ಕೆ ಎಂಥಾ ಶಕ್ತಿ ಇದೆ ಎಂದರೆ, ಗಿಡವನ್ನು ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ಬೆಳಗ್ಗೆ ಎದ್ದ ತಕ್ಷಣ ಉತ್ತಮ ದೇವರನಾಮವನ್ನು ಕೇಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಪ್ರಶಾಂತತೆಯಿಂದ ಕೂಡಿದ ದೇವರನಾಮಗಳು ನಮ್ಮ ಮನಸ್ಸು ಮತ್ತು ದೇಹವನ್ನು ದೇವರ ಕಡೆಗೆ ಒಂದೇ ಏಕಾಗ್ರತೆಯಲ್ಲಿ ನಿಲ್ಲಿಸುತ್ತದೆ. ಸಂಗೀತಕ್ಕೆ ತಲೆಬಾಗದವರು ಯಾರೂ ಇಲ್ಲ. ನೀವು ಎದ್ದ ತಕ್ಷಣ ಯಾವುದಾದರೂ ದೇವರನಾಮವನ್ನು ಅಥವಾ ನಿಮಗೆ ಹಿತ ಕೊಡುವ ಒಂದು ಸಮಾಧಾನದ ಸಂಗೀತವನ್ನು, ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್, ಕೇಳಿದರೆ ಮನಸ್ಸಿಗೆ ಹಿತವೆನಿಸುತ್ತದೆ. . ಗರ್ಭಿಣಿಯರು ಶಾಂತ ರೀತಿಯಲ್ಲಿ ಇದ್ದಾಗ , ಗರ್ಭದಲ್ಲಿ ಬೆಳೆಯುತ್ತಿರುವ ಮಗು ಕೂಡ ಶಾಂತವಾಗಿ ಬೆಳೆಯುತ್ತದೆ. ಮುಂದೆ ಅದರ ಆಸಕ್ತಿಯ ಕ್ಷೇತ್ರವಾಗಿ ಸಂಗೀತ ಆಗಬಹುದು. ಸಂಗೀತವನ್ನು ನೀವು ಆಲಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಕಿರಿಕಿರಿಯಾಗದೆ, ಭಾವನೆಯ ಏರುಪೇರು ಆಗದೇ ಸದಾ ಹಸನ್ಮುಖಿಯಾಗಿ ಇರುತ್ತೀರಿ. ಇದರಿಂದ ಮಗುವಿನ ಬೆಳವಣಿಗೆಯು ಕೂಡ ಸಕಾರಾತ್ಮಕವಾಗಿ ರೂಪುಗೊಳ್ಳುತ್ತದೆ. ತಾಯಿಯ ಉತ್ತಮ ಆಸಕ್ತಿಗಳು ಮುಂದೆ ಹುಟ್ಟಿದ ಮಗುವಿಗೆ ವರ್ಗಾಯಿಸಿ ಬರುವುದುಂಟು.

ಯಾವ ವಿಧದ ಸಂಗೀತವನ್ನು ಕೇಳಬೇಕು?

  • ಹೆಚ್ಚು ಕರ್ಕಶ ವಲ್ಲದ, ಆವೇಶಕ್ಕೆ ಒಳಗಾಗದ ಸಂಗೀತವನ್ನು ಆಲಿಸಿರಿ.
  • ಸಂಗೀತವನ್ನು ಆಲಿಸುವಾಗ ನಿಧಾನಕ್ಕೆ ಕಣ್ಣು ಮುಚ್ಚಿ. ನಿಮ್ಮ ಏಕಾಗ್ರತೆಯು ಒಂದೇ ಕಡೆ ನಿಲ್ಲುತ್ತಿದ್ದರೆ ನಿಮ್ಮ ಮನಸ್ಸು ಶಾಂತವಾಗಿದೆ ಎಂದು ಅರ್ಥ.
  • ಸಂಗೀತಕ್ಕೆ ಭಾಷೆಯ ಎಲ್ಲೆ ಇರುವುದಿಲ್ಲ. ಯಾವುದೇ ಭಾಷೆಯ ಸಂಗೀತವನ್ನು ಕೂಡ ಕೇಳಬಹುದು.
  • ಮೆದುವಾದ ಸಂಗೀತ ನಿಮಗೂ ಮತ್ತು ನಿಮ್ಮ ಮಗುವಿಗೂ ಸಕಾರಾತ್ಮಕ ಭಾವನೆಯನ್ನು ಬೆಳೆಸುತ್ತದೆ.
  • ಸಂಗೀತವನ್ನು ಕೇಳುತ್ತಾ ನಿಮ್ಮ ಇಷ್ಟದ ಕೆಲಸವನ್ನು ನೀವು ಮಾಡುತ್ತಿದ್ದರೆ ದಿನಪೂರ್ತಿ ಒಳ್ಳೆಯ ಭಾವನೆಯಲ್ಲಿ ನೀವು ಇರುತ್ತೀರಿ.

ಎಷ್ಟು ಸಮಯದವರೆಗೂ ಬೇಕಾದರೂ ಸಂಗೀತವನ್ನು ಕೇಳಬಹುದು. ಅದಕ್ಕೆ ಇತಿ ಮಿತಿ ಇಲ್ಲ.

ತಾಯಿ ಮತ್ತು ಮಗುವಿನ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಸಂಗೀತ ಸಹಕಾರಿ. ಗರ್ಭಿಣಿಯರು ಚೇತೋಹಾರಿಯಾಗಿ ದಿನ ಪೂರ್ತಿ ಇರುವುದಲ್ಲದೇ ಸಕಾರಾತ್ಮಕ ಭಾವನೆ ಬೆಳೆಯುತ್ತದೆ. ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಭಾವನೆ ಇದ್ದರೆ ಮಗುವು ಕೂಡ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ.

#pregnancymustknow

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.