2 Nov 2021 | 1 min Read
Medically reviewed by
Author | Articles
ಪ್ರತಿಯೊಂದು ಹೆಣ್ಣಿಗೆ ಮಗುವಿನ ಆಗಮನ ಒಂದು ರೀತಿಯಲ್ಲಿ ಹೊಸ ನಿರೀಕ್ಷೆ ಮತ್ತು ಹೊಸ ಭರವಸೆ. ತಾಯಿ ಈ ಜಗತ್ತಿಗೆ ಅಮೂಲ್ಯವಾದ ಉಡುಗೊರೆಯಂತೆ ಮಗುವನ್ನು ಈ ಸಮಾಜಕ್ಕೆ ನೀಡುತ್ತಾಳೆ. ನವಮಾಸದ ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿಗೆ, ಮಗುವನ್ನು ನೋಡಿದ ತಕ್ಷಣ ಜಗತ್ತೇ ತನ್ನ ಬಳಿ ಇದ್ದಂತೆ ಅನುಭವಿಸುತ್ತಾಳೆ. ತನ್ನ ಮಗುವಿನ ಆರೈಕೆ ವಿಶೇಷವಾಗಿ ಇರಬೇಕೆಂದು ಬಯಸುತ್ತಾಳೆ. ನವಜಾತ ಶಿಶುವಿನ ಆರೋಗ್ಯ ಆರೈಕೆಯ ಬಗ್ಗೆ ಪ್ರತಿ ನಿಮಿಷ ನಿಗಾವಹಿಸುತ್ತಾ ಇರುತ್ತಾಳೆ. ವೈದ್ಯರು ತಾಯಿಯ ಎದೆಹಾಲನ್ನು ಸೂಚಿಸಿದಾಗ, ಎದೆಹಾಲು ಸಮರ್ಪಕವಾಗಿ ಪೂರೈಕೆಯಾಗದೇ ಇದ್ದಾಗ ತುಂಬಾ ಕಳವಳದಿಂದ ಚಿಂತೆಗೀಡಾಗುತ್ತಾಳೆ.
ಅವಳ ಕಳವಳಕ್ಕೆ ಸರಿಯಾಗಿ ಮಗುವು ಹಸಿವಿನಿಂದ ಅಳುವಾಗ ಮುಂದೇನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾಳೆ. ಹೆರಿಗೆ ಆದ ಮರು ಕ್ಷಣದಲ್ಲೇ ಕೆಲವರಿಗೆ ಸ್ತನದಲ್ಲಿ ಹಾಲು ಬರಲು ಆರಂಭವಾಗುತ್ತದೆ. ಇನ್ನು ಕೆಲವರಿಗೆ ಹಾಲು ಬರಲು ವಿಳಂಭವಾಗಬಹುದು. ಹಾರ್ಮೋನಿನ ಏರುಪೇರಿನಿಂದ ಈ ರೀತಿಯ ಸಮಸ್ಯೆ ಉದ್ಭವವಾಗುತ್ತದೆ. ತಾಯಿಯ ಎದೆಹಾಲು ಮಕ್ಕಳಿಗೆ ಅಮೃತವಿದ್ದಂತೆ. ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶವಿಲ್ಲ. ಮಗು ಪೌಷ್ಟಿಕವಾಗಿ ಸದೃಢವಾಗಿ ಆರೋಗ್ಯಪೂರ್ಣವಾಗಿ ಬೆಳೆಯಲು ತಾಯಿಯ ಸ್ತನ್ಯಪಾನ ತುಂಬಾ ಮುಖ್ಯ. ಹಾಗಾಗಿ ನವಜಾತ ಶಿಶುವಿಗೆ ತಾಯಿಯ ಎದೆಹಾಲು ಉಣಿಸಲು ವೈದ್ಯರು ಸೂಚಿಸುತ್ತಾರೆ.
ಕೆಲವು ತಾಯಂದಿರಿಗೆ ಮಗು ಜನಿಸಿದ ಅರ್ಧ ಗಂಟೆ ಒಳಗಡೆ ಇಲ್ಲವೇ ಕೆಲವು ಸಲ ಮೂರು ದಿನಗಳಾದರೂ ಎದೆಹಾಲು ಉತ್ಪತ್ತಿಯಾಗುವುದಿಲ್ಲ. ಹಾಗೊಂದು ವೇಳೆ ಹಾಲಿನ ಕೊರತೆ ಉಂಟಾದರೆ ಚಿಂತೆ ಪಡುವ ಅಗತ್ಯವಿಲ್ಲ. ಮಗುವನ್ನು ಹೆಚ್ಚಾಗಿ ಮುದ್ದಿಸುವುದರ ಮೂಲಕ ಹಾರ್ಮೋನಿನ ಉತ್ಪತಿ ಉತ್ತೇಜಿಸಲಾಗುವುದು. ನೀವು ಮಾಡಬೇಕಾಗಿದ್ದು ಇಷ್ಟೇ. ಮಗುವನ್ನು ಎದೆಯ ಮೇಲೆ ಮಲಗಿಸಿಕೊಳ್ಳಿ, ಎದೆ ಹಾಲನ್ನು ಮಗು ಚೀಪುತ್ತಿದ್ದ ಹಾಗೆ ಹಾಲಿನ ಉತ್ಪಾಧನೆ ಆರಂಭವಾಗುವುದು. ಆರಂಭದ ದಿನಗಳಲ್ಲಿ ಹಾಲಿನ ಉತ್ಪಾಧನೆ ವಿಳಂಭವಾಗುತ್ತದೆ. ಆದ್ದರಿಂದ ನಿಮ್ಮ ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸಿರಿ. ಇದರ ಜೊತೆಗೆ ಕೆಲವು ಮನೆಮದ್ದು ಗಳಿಂದಲೂ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಹುದು.
ಆರಂಭದ ಕೆಲವು ವಾರಗಳ ವರೆಗೆ ಮಗುವು ವಿಪರೀತ ನಿದ್ರೆಯನ್ನು ಮಾಡುತ್ತಿರುತ್ತದೆ. ಮಗುವಿಗೆ ಪ್ರತೀ ಎರಡು ಗಂಟೆಗೊಮ್ಮೆ ನೀವು ಹಾಲುಣಿಸಬೇಕು. ಅಕಸ್ಮಾತ್ ಮಗು ನಿದ್ರಿಸುತ್ತಿದ್ದರೆ, ಮಗುವನ್ನು ಎಬ್ಬಿಸಬೇಡಿ. ಮಗು ಅದಾಗಿ ಹಸಿವಾದಾಗ ಎದ್ದು ಅಳುತ್ತದೆ. ಮೂರು ಗಂಟೆಯಾದರೂ ಮಗುವನ್ನು ಮಲಗಲು ಬಿಡಿ. ಮಗುವಿಗೆ ಹಸಿವಾದಾಗ ಅಳುತ್ತಲೇ ಇರುತ್ತದೆ. ಆಗ ತಾಯಿ ಆದವಳು ಮಗುವಿನ ಹಸಿವಿನ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.
ಮಗುವಿಗೆ ಹಾಲಿನ ಪೂರೈಕೆ ಸಮರ್ಪಕವಾಗಿದೆಯೇ ?
ಪ್ರತಿಯೊಬ್ಬ ತಾಯಿಗೆ ಇದರ ಬಗ್ಗೆ ಅನುಮಾನ ಇರುತ್ತದೆ. ಒಂದು ವೇಳೆ ಮಗುವಿಗೆ ತನ್ನ ಎದೆ ಹಾಲು ಸಾಕಾಗದೇ ಇದ್ದರೆ ಏನು ಮಾಡುವುದು ಎಂಬ ಹೆದರಿಕೆ ಇರುತ್ತದೆ. ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನೀವು ಮಗುವಿಗೆ ಹಾಲುಣಿಸುವಾಗ ಮಗುವಿಗೆ ಎಷ್ಟು ಬೇಕೋ ಅಷ್ಟು ಹಾಲನ್ನು ಅದು ಸೇವಿಸಿ ಸ್ತನದ ತೊಟ್ಟನ್ನು ಬಾಯಿಯಿಂದ ಬಿಡಿಸಿಕೊಳ್ಳುತ್ತದೆ. ಮತ್ತೆ ನೀವು ಹಾಲು ಕುಡಿಯಲು ಪ್ರೇರೇಪಿಸಿದರೆ, ಮಗು ತೊಟ್ಟನ್ನು ಕಚ್ಚುವುದಿಲ್ಲ.. ಕೆಲವು ಸಲ ಮಗು ತುಂಬಾ ಸಮಯದವರೆಗೆ ನಿದ್ರಿಸಿರುತ್ತದೆ. ಅಕಸ್ಮಾತ್ ಮಗು ಏಳದೇ ನಿದ್ರಿಸುತ್ತಿದ್ದರೆ ಮಗುವನ್ನು ಎತ್ತಿಕೊಂಡು ಅದರ ಬಾಯಿಗೆ ಸ್ತನದ ತೊಟ್ಟನ್ನು ಇಡಬೇಕು.
ಮಗು ಹಾಲು ಕುಡಿದ ನಂತರ ಮಗುವನ್ನು ನಿಮ್ಮ ಹೆಗಲಿನ ಮೇಲೆ ಮಲಗಿಸಿ ಅದರ ಬೆನ್ನನ್ನು ತಟ್ಟಬೇಕು. ಇದರಿಂದ ಗ್ಯಾಸ್ ಹೊರಗೆ ಬರುವುದು. ಕೆಲವು ಸಲ ಮಗು ಕುಡಿದ ಹಾಲು ಕಕ್ಕುವುದು. ಇದಕ್ಕೆ ಹೆದರುವ ಅಗತ್ಯವಿಲ್ಲ.ಹೆಚ್ಚಿನ ಪ್ರಮಾಣದಲ್ಲಿ ಮಗು ಹಾಲನ್ನು ಸೇವಿಸಿದಾಗ ಹೀಗೆ ಆಗುತ್ತದೆ . ಮಗುವಿಗೆ ತಾಯಿಯ ಎದೆ ಹಾಲು ಬಿಟ್ಟರೆ ಬೇರೆ ಯಾವ ಹಾಲು ಕೊಡಬೇಡಿ. ಮಗು ಮತ್ತು ತಾಯಿಯ ನಡುವಿನ ಸಂಬಂಧ ಎದೆ ಹಾಲಿನ ಮೂಲಕ ಗಟ್ಟಿಯಾಗಿರುತ್ತದೆ.
A