ವಿಶ್ರಾಂತಿ ಮತ್ತು ನಿದ್ರೆ

cover-image
ವಿಶ್ರಾಂತಿ ಮತ್ತು ನಿದ್ರೆ

ಪ್ರಸವದ ನಂತರ ಪ್ರತೀಯೊಬ್ಬ ಹೆಣ್ಣಿಗೆ ವಿಶ್ರಾಂತಿ ಮತ್ತು ನಿದ್ರೆ ಒಂದು ರೀತಿಯಲ್ಲಿ ತಮ್ಮ ಹಿಡಿತದಲ್ಲಿರದ ಸಂಗತಿ. ಮಗುವಿನ ಅಳು, ನಿದ್ರಿಸದೇ ಇರುವಿಕೆ, ಆಗಾಗ ಹಾಲುಣಿಸುವಿಕೆ ಇವೆಲ್ಲವೂ ಒಂದು ರೀತಿಯಲ್ಲಿ ನಿಮಗೆ ಕಸಿವಿಸಿಕೊಟ್ಟರೂ, ಮಗುವಿನ ಆಗಮನದಿಂದ ಎಲ್ಲವನ್ನು ಮರೆಯುತ್ತೀರಿ. ಹಗಲು ನಿದ್ರೆ ಮಾಡಲು ಮತ್ತು ವಿಶ್ರಾಂತಿ ಮಾಡಲು ಸಾಧ್ಯವಾಗದು. ರಾತ್ರಿಯ ವೇಳೆ ಮಗುವಿನ ಜೊತೆ ನೀವು ಎದ್ದಿರಬೇಕಾಗುತ್ತದೆ. ಹಾಗಾಗಿ ನಿಮಗೆ ಹೆರಿಗೆಯ ನಂತರ ವಿಶ್ರಾಂತಿ ಕಷ್ಟ ಸಾಧ್ಯ. ಇದಕ್ಕಾಗಿ ನೀವು ಯಾರನ್ನೂ ಧೂಷಣೆ ಮಾಡಲು ಸಾಧ್ಯವಿಲ್ಲ. ಅರ್ಥಾತ್ ಮಗುವಿನ ಪೋಷಣೆಗೆ ತಾಯಿಯ ಅಗತ್ಯತೆ ತುಂಬಾ ಮುಖ್ಯ.


ಪ್ರಸವಕ್ಕೆ ಮುನ್ನ ಮತ್ತು ನಂತರ ಪ್ರತೀ ತಾಯಿಯ ದೇಹ ಬದಲಾವಣೆ ಹೊಂದಿರುತ್ತದೆ. ಅದಕ್ಕೆ ತಕ್ಕ ಮಾರ್ಪಾಟು ಮಾನಸಿಕವಾಗಿಯು ಸಿದ್ದವಾಗಿರುತ್ತದೆ. ಆದರೆ ಬದಲಾವಣೆಯಿಂದಾಗಿ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿರುತ್ತದೆ. ಇದು ಕೆಲವರಿಗೆ ಗಮನಕ್ಕೆ ಬಂದಿರುವುದಿಲ್ಲ. ಕೆಲವರಿಗೆ ಗಮನಕ್ಕೆ ಬಂದರೂ ತಾತ್ಸಾರ ಮಾಡಿರುತ್ತಾರೆ.
ಗ್ರಾಮೀಣ ಪ್ರದೇಶ ಮತ್ತು ಕೆಲವು ವರ್ಷಗಳ ಹಿಂದೆ, ಮನೆಗಳಲ್ಲಿ ಗರ್ಭಿಣಿಯರಿಗೆ ವಿಶ್ರಾಂತಿ ಸಿಗುವಂತೆ ಮನೆಯ ಸದಸ್ಯರು ನೋಡಿಕೊಳ್ಳುತ್ತಿದ್ದರು. ಕೂಡು ಕುಟುಂಬದಲ್ಲಿ ತುಂಬಾ ಜಾಗ್ರತೆಯಿಂದ ನಿಭಾಯಿಸುತ್ತಿದ್ದರು. ಪ್ರಸವದ ನಂತರ ಮಗುವಿನ ತಾಯಿಗೆ ಹೆಚ್ಚು ಶ್ರಮ ಕೊಡದಂತೆ ಮನೆಯ ಸದಸ್ಯರು ಮಗು ಮತ್ತು ತಾಯಿಯನ್ನು ನೋಡಿಕೊಳ್ಳುತ್ತಿದ್ದರು. ರಾತ್ರಿ ಮಗು ಎದ್ದಾಗ ಅದರ ನ್ಯಾಪಿ ಬದಲಾಯಿಸುವುದು ಹಿರಿಯ ಹೆಂಗಸರು ನೋಡಿಕೊಳ್ಳುತ್ತಿದ್ದರು. ಅಷ್ಟು ಸಮಯವಾದರೂ ಮಗುವಿನ ತಾಯಿ ವಿಶ್ರಾಂತಿ ತೆಗೆದುಕೊಳ್ಳಲಿ ಎಂಬುದು ಅವರ ಉದ್ದೇಶ. ಈಗ ಧಾವಂತದ ಜೀವನ, ನಗರ ಜೀವನ ಮತ್ತು ಕೂಡುಕುಟುಂಬ ಮಾಯವಾಗಿದೆ. ಪ್ರಸವದ ನಂತರ ಮಹಿಳೆಯರಿಗೆ ವಿಶ್ರಾಂತಿ ಮತ್ತು ನಿದ್ರೆ ಎಂಬುದೇ ಮಾಯವಾಗಿದೆ. ಇದು ಹಲವಾರು ಆರೋಗ್ಯ ಸಮಸ್ಯೆಗೆ ಮುಂದೆ ಕಾರಣವಾಗಬಹುದು.


ತಾಯಿಯ ಗರ್ಭದಲ್ಲಿ ನವಮಾಸ ಇರುವ ಮಗು ರಾತ್ರಿಯ ವೇಳೆ ಹೆಚ್ಚು ಚಟುವಟಿಕೆಯಲ್ಲಿ ಇರುತ್ತದೆ. ಇದು ಮುಂದೆ ಮಗು ಜನಿಸಿದಾಗಲೂ ಮುಂದುವರಿಯುತ್ತದೆ. ಹಾಗಾಗಿ ಮಗು ರಾತ್ರಿಯ ವೇಳೆ ನಿದ್ರಿಸಲು ಇಚ್ಛಿಸುವುದಿಲ್ಲ. ಇವೆಲ್ಲಾ ಗಮನದಲ್ಲಿಟ್ಟುಕೊಂಡು ತಾಯಿಯು ಮಗು ನಿದ್ರಿಸುವ ಸಮಯದಲ್ಲಿ ನಿದ್ರಿಸಬೇಕಾಗುತ್ತದೆ. ನಾರ್ಮಲ್ ಡೆಲಿವರಿ ಮತ್ತು ಸಿ ಸೆಕ್ಷನ್ ಡೆಲಿವರಿ ಆಗಿದ್ದರೂ ತಾಯಿಗೆ ವಿಶ್ರಾಂತಿ ಮತ್ತು ತುಂಬಾ ಅವಶ್ಯಕ.


ನಿದ್ರಾಹೀನತೆ ಸಮಸ್ಯೆ:


ಸದಾ ಚಟುವಟಿಗೆ ಮತ್ತು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯರಿಗೆ , ಹೆರಿಗೆಯ ನಂತರ ಹಗಲಿನ ವೇಳೆ ನಿದ್ರೆ ಬಾರದೇ ಇರಬಹುದು. ಆದರೆ ರಾತ್ರಿಯೂ ಕೂಡ ನಿಮಗೆ ನಿದ್ರೆ ಆಗದೇ ಇದ್ದರೆ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಕೆಲವರಿಗೆ ನಿದ್ರಾನಡಿಗೆ (ಇನ್ಸೊಮನಿಯಾ ) ಎಂಬ ಸಮಸ್ಯೆ ಕಾಡುತ್ತದೆ. ಖಿನ್ನತೆ ಕೂಡ ಆವರಿಸಬಹುದು. ಬಾಣಂತಿ ಸಣ್ಣಿ ಯು ಕೂಡ ಬರಬಹುದು.


ನಿದ್ರಾಹೀನತೆ ಯಾರನ್ನು ಕಾಡುತ್ತದೆ:

 • ನಿದ್ರಾನಡಿಗೆ (ಇನ್ಸೊಮನಿಯಾ ) ಸಮಸ್ಯೆ ಇರುವವರಿಗೆ
 • ಹೆಚ್ಚಾಗಿ ಕಾಫಿ , ಟೀ , ಮಧ್ಯ ಸೇವನೆ ಮಾಡುವವರಿಗೆ
 • ಬಾಣಂತಿ ಸಣ್ಣಿ , ಖಿನ್ನತೆಯಿಂದ ಬಳಲುತ್ತಿರುವವರಿಗೆ
 • ಬಾಣಂತಿಯರಲ್ಲಿ ಬೆನ್ನು ನೋವು, ಆರ್ಥರೈಟಿಸ್ ಸಮಸ್ಯೆ ಇರುವವರಿಗೆ
 • ಮಾನಸಿಕ ತೊಂದರೆ ಮತ್ತು ವಿಪರೀತ ಕೋಪ ಪಡುವವರಿಗೆ
 • ಆಸ್ತಮಾದಿಂದ ಬಳಲುತ್ತಿರುವವರಿಗೆ


ವಿಶ್ರಾಂತಿ ಪಡೆಯದೇ ಇದ್ದಾಗ ಆಗುವ ಸಮಸ್ಯೆ:


ಹೆರಿಗೆಯ ನಂತರ ದೇಹ ತನ್ನ ವಾಸ್ತವ ಸ್ಥಿತಿಗೆ ಬರಲು ಕೆಲವು ವಾರಗಳೇ ತೆಗೆದುಕೊಳ್ಳುತ್ತದೆ. ಈ ಸಮಯದಲ್ಲಿ ಮಗುವಿನ ತಾಯಿ ಹೆಚ್ಚು ವಿಶ್ರಾಂತಿಗೆ ಆಧ್ಯತೆ ಕೊಡಬೇಕು. ಇಲ್ಲದೇ ಹೋದರೆ ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

 • ಬೆನ್ನು ನೋವು
 • ಕೈ ಕಾಲು ಸೆಳೆತ, ಮುಂದೆ ಆರ್ಥ್ರೈಟಿಸ್ ಸಮಸ್ಯೆ ಕಾಡಬಹುದು
 • ಬಿಪಿ, ಶುಗರ್ , ಥೈರಾಯಿಡ್ ಸಮಸ್ಯೆ ಎದುರಾಗಬಹುದು.
 • ಮಾನಸಿಕ ಸಮಸ್ಯೆ ಕಾಡಬಹುದು.
 • ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ನಕಾರಾತ್ಮಕ ಭಾವನೆ ಬೆಳೆಯಬಹುದು.

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಾವು ಮಾಡಬೇಕಾಗಿದ್ದು ಇಷ್ಟೇ. ಉತ್ತಮ ಆರೋಗ್ಯಕ್ಕೆ ವಿಶ್ರಾಂತಿ ಮಾಡಲೇ ಬೇಕು. ಪ್ರಸವದ ನಂತರ ಬಾಣಂತಿ ಆರೈಕೆಗೆ ವಯಸ್ಸಾದ ಮಹಿಳೆಯರನ್ನು ಕೆಲವರು ಮನೆಯಲ್ಲಿ ಇರಿಸಿಕೊಂಡಿರುತ್ತಾರೆ. ಪ್ರಸವದ ನಂತರ ೪೦ ರಿಂದ ೪೫ ದಿನಗಳವರೆಗೆ ವಿಶ್ರಾಂತಿ ತುಂಬಾ ಮುಖ್ಯ.


ಸಿ ಸೆಕ್ಷನ್ ಅಥವಾ ನಾರ್ಮಲ್ ಪ್ರಸವದ ನಂತರ ಯೋನಿಯ ಮತ್ತು ಸಿ ಸೆಕ್ಷನ್ ಗಾಯ ಮಾಯಲು ಕೆಲವು ವಾರವೇ ಬೇಕಾಗುತ್ತದೆ. ಈ ಸಮಯದಲ್ಲಿ ದೇಹವು ಕೂಡ ಸೂಕ್ಶ್ಮ ಮತ್ತು ಮೃದುವಾಗಿರುತ್ತದೆ.


ನಿದ್ರೆ ಮತ್ತು ವಿಶ್ರಾಂತಿಗೆ ಕೆಲವು ಟಿಪ್ಸ್

 • ಪ್ರಸವದ ನಂತರ ತೈಲ ಅಭ್ಯಂಜನ ತುಂಬಾ ಮುಖ್ಯ.
 • ದೇಹಕ್ಕೆ ಎಣ್ಣೆಯನ್ನು ಲೇಪಿಸಿ ಕನಿಷ್ಠ ೨೦ ನಿಮಿಷವಾದರೂ ದೇಹದಲ್ಲಿ ಎಣ್ಣೆ ಇರಬೇಕು. ಈ ಸಮಯದಲ್ಲಿ ಹೀಟರ್ ಅಥವಾ ಕೆಂಡದ ಬೆಂಕಿಯ ಶಾಖಕ್ಕೆ ಮೈ ಒಡ್ಡಿ ಕುಳಿತುಕೊಳ್ಳಬೇಕು.
 • ಗರ್ಭಾವಸ್ಥೆಯ ಸಮಯದಲ್ಲಿ ನೀರಿನ ಪ್ರಮಾಣ ದೇಹವಾದಲ್ಲಿ ಅಧಿಕವಾಗಿರುತ್ತದೆ. ಅದೇ ರೀತಿ ದೇಹವು ತೂಕ ಹೆಚ್ಚಿರುವುದರಿಂದ ಎಣ್ಣೆಯ ಅಭ್ಯಂಜನ, ಬಿಸಿ ನೀರು ಸ್ನಾನ, ಬಿಸಿ ಶಾಖದಲ್ಲಿ ದೇಹವನ್ನು ಕಾಯಿಸುವುದರಿಂದ ದೇಹದಲ್ಲಿ ಸಂಗ್ರಹವಾದ ನೀರು ಬತ್ತುವುದು.
 • ಜಾಯಿಂಟ್ ಮತ್ತು ಬೆನ್ನು ನೋವು ನಿವಾರಣೆಯಾವುದು
 • ತೈಲ ಅಭ್ಯಂಜನ ಬಹು ಉಪಯೋಗಿ. ರಕ್ತ ಸಂಚಾರ ಚೆನ್ನಾಗಿ ಆಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ
 • ಊಟದ ಜೊತೆಗೆ ತುಪ್ಪವನ್ನು ಸೇವಿಸಿರಿ
 • ಕಾಫಿ , ಟೀ, ಮಧ್ಯ ಸೇವನೆ ಮಾಡದಿರಿ.
 • ಮಲಗುವಾಗ ಚಿನ್ ಮುದ್ರೆ ಧಾರಣೆ ಮಾಡಿರಿ. ಇದು ನಿಮ್ಮ ದೇಹ ವಿಶ್ರಾಂತಿ ಪಡೆಯಲು ಮತ್ತು ಬೇಗನೆ ನಿದ್ರೆ ಆವರಿಸಲು ಸಹಾಯಕ.
 • ಮಗು ನಿದ್ರಿಸುವಾಗ ಮಗುವಿನ ಜೊತೆಯಲ್ಲಿ ನೀವು ಕೂಡ ನಿದ್ರಿಸಿರಿ
 • ನೀವು ವಿಶ್ರಾಂತಿ ತೆಗೆದುಕೊಳ್ಳುವಾಗ ಅನಗತ್ಯವಾದ ಮೊಬೈಲ್ ಕರೆಗಳನ್ನು ನಿಲ್ಲಿಸಿರಿ. ಮೊಬೈಲ್ ಸೈಲೆಂಟ್ ಮೋಡ್ ನಲ್ಲಿರಲಿ.
 • ಟಿವಿ ವೀಕ್ಷಣೆ, ಮೊಬೈಲ್ ನೋಡುವಿಕೆ ೪೦ ದಿನಗಳವರೆಗೆ ಸಾಧ್ಯವಾದಷ್ಟು ನಿಯಂತ್ರಣದಲ್ಲಿರಲಿ.
#momhealth #babysleep
logo

Select Language

down - arrow
Personalizing BabyChakra just for you!
This may take a moment!