ಸ್ಲೀಪ್ ಇನ್ಸೋಮ್ನಿಯಾ

ಸ್ಲೀಪ್ ಇನ್ಸೋಮ್ನಿಯಾ

10 Nov 2021 | 1 min Read

Medically reviewed by

Author | Articles

ಸ್ಲೀಪ್ ಇನ್ಸೋಮ್ನಿಯಾ ಎಂಬುದು ಸಾಮಾನ್ಯ ನಿದ್ರೆಯ ಸಮಸ್ಯೆಯಾಗಿದೆ. ಈ ಸಮಸ್ಯೆ ಹೊಂದಿರುವವರು ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ರೆ ಬರುವುದಿಲ್ಲ. ನಿದ್ರೆಯಿಂದ ಬೇಗ ಎದ್ದೇಳುತ್ತಾರೆ. ಅಷ್ಟು ಸುಲಭವಾಗಿ ನಿದ್ರೆ ಇವರನ್ನು ಸುಳಿಯದು. ಗರ್ಭವಾಸ್ಥೆಯ ಸ್ಥಿತಿಯಲ್ಲಿ ಬಹಳಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಾರೆ. ನಿದ್ರೆ ಮಾಡಿ ಎದ್ದರೂ ಒಂದು ರೀತಿಯ ಸುಸ್ತು ಆವರಿಸಿರುತ್ತದೆ. ಇನ್ಸೋಮ್ನಿಯಾದಿಂದ ನರಳುತ್ತಿರುವವರು ಶಕ್ತಿ, ಸಾಮರ್ಥ್ಯದ ಜೊತೆಗೆ ಲವಲವಿಕೆಯಿಂದ ಇರುವುದನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಗುಣಮಟ್ಟದ ಜೀವನ ಶೈಲಿ ಅವರಿಂದ ರೂಪಿಸಿಕೊಳ್ಳಲು ಸಾಧ್ಯವಿಲ್ಲ.

ನಿದ್ರೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರು ನಾಲ್ಕು ಗಂಟೆಗಳು ನಿದ್ರೆ ಮಾಡಿದರೆ ಸಾಕು ಎಂಟು ಗಂಟೆ ನಿದ್ರೆ ಮಾಡಿದವರಂತೆ ಇರುತ್ತಾರೆ. ಆದರೆ ಕೆಲವರು ಹತ್ತು ಗಂಟೆ ನಿದ್ರೆ ಮಾಡಿದರೂ ನಿದ್ರೆ ಮಾಡದ ಹಾಗೆ ವ್ಯಥೆ ಪಡುತ್ತಾರೆ. ಇನ್ಸೋಮ್ನಿಯಾ ಕೇವಲ ತಾತ್ಕಾಲಿಕ ಸಮಸ್ಯೆಯಂತೆ ಕಾಣಬಹುದು ಆದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಮುಂದೆ ಸಮಸ್ಯೆ ಹಿರಿದಾಗುತ್ತಾ ಸಾಗುತ್ತದೆ.

ಸ್ಲೀಪ್ ಇನ್ಸೋಮ್ನಿಯಾದ ಲಕ್ಷಣಗಳು ಹೀಗಿವೆ:

 • ರಾತ್ರಿಯ ಸಮಯದಲ್ಲಿ ನಿದ್ರೆ ಮಾಡಲು ಕಷ್ಟ
 • ರಾತ್ರಿ ನಡಿಗೆ
 • ಬೆಳಗ್ಗೆ ಬೇಗ ಎದ್ದೇಳುವುದು
 • ರಾತ್ರಿ ನಿದ್ರೆಯ ನಂತರ ತುಂಬಾ ಸುಸ್ತು ಅನ್ನಿಸುವುದು
 • ಹಗಲಿನ ವೇಳೆ ನಿದ್ರೆ ಮಾಡುವುದು ಅಥವಾ ಸುಸ್ತು
 • ಕಿರಿಕಿರಿ, ಖಿನ್ನತೆ ಅಥವಾ ಆವೇಶ
 • ಏಕಾಗ್ರತೆಯ ಕೊರತೆ, ನೆನಪಿನಶಕ್ತಿ ಇಲ್ಲದಿರುವಿಕೆ
 • ತಪ್ಪುಗಳು ಹೆಚ್ಚಾಗುವುದು ಅಥವಾ ಅವಘಡಗಳು ಹೆಚ್ಚಾಗುವಿಕೆ
  ಸದಾ ನಿದ್ರೆಯ ಬಗ್ಗೆ ಚಿಂತಿತರಾಗುವುದು

ಯಾವಾಗ ವೈದ್ಯರನ್ನು ಕಾಣಬೇಕು.

ಸ್ಲೀಪ್ ಇನ್ಸೋಮ್ನಿಯಾದಿಂದ ನೀವು ಬಳಲುತ್ತಿದ್ದರೆ ಹಗಲಿನಲ್ಲಿ ಕೆಲಸ ಮಾಡಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಇಂಥಾ ತೊಂದರೆ ನಿಮ್ಮನ್ನು ಕಾಡುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿಮಾಡಿ ಮತ್ತು ಚಿಕಿತ್ಸೆಯನ್ನು ಆರಂಭಿಸಿ. ಒಂದು ವೇಳೆ ನಿದ್ರಾಹೀನತೆಯ ತೀವ್ರತೆ ನಿಮ್ಮಲ್ಲಿ ಅಧಿಕವಾಗಿದ್ದರೆ ನಿಮ್ಮನ್ನು ಹೆಚ್ಚಿನ ತಪಾಸಣೆಗೆ ಬೇರೆ ಕಡೆ ಕಳುಹಿಸಬಹುದು.

ಕಾರಣಗಳು

ಸ್ಲೀಪ್ ಇನ್ಸೋಮ್ನಿಯಾ ಒಂದು ಪ್ರಾಥಮಿಕ ಕಾರಣವಿರಬಹುದು. ಇದರ ಜೊತೆಗೆ ಬೇರೆ ಆರೋಗ್ಯ ಸಮಸ್ಯೆ ಸೇರಿಕೊಂಡಿರಬಹುದು.

 • ಒತ್ತಡ . ನಿಮ್ಮ ಪ್ರೊಫೆಷನಲ್ ಕೆಲಸಕ್ಕೆ ಸಂಬಂಧಿಸಿದಂತೆ, ಶಾಲೆ, ಆರೋಗ್ಯ , ಮನೆಯ ಆರ್ಥಿಕ ಸಮಸ್ಯೆ ಅಥವಾ ಮನೆಯ ಸಮಸ್ಯೆಯ ಬಗ್ಗೆ ರಾತ್ರಿ ನಿದ್ರೆ ಇಲ್ಲದೇ ನಿಮ್ಮನ್ನು ಕಾಡಬಹುದು. ಒತ್ತಡದ ಜೀವನ ಅಥವಾ ನಿಮ್ಮ ಹತ್ತಿರದವರ ಸಾವು ನಿಮ್ಮನ್ನು ಬಹುವಾಗಿ ಕಾಡಬಹದು.ಕೆಲಸ ಕಳೆದುಕೊಳ್ಳುವಿಕೆ, ನಿಮ್ಮ ಸಂಗಾತಿ ವಿಚ್ಛೇದನ ಪಡೆದಿದ್ದರೆ ಈ ರೀತಿ ನಿಮ್ಮನ್ನು ನಿದ್ರಾಹೀನತೆ ಕಾಡುತ್ತದೆ.
 • ಪ್ರಯಾಣ ಅಥವಾ ಕೆಲಸದ ವೇಳಾಪಟ್ಟಿ . ದೂರದ ಊರಿಗೆ ಪ್ರಯಾಣ ಬೆಳೆಸುವಾಗ ಪ್ರಯಾಣದಲ್ಲಿ ಒಂದೆರಡು ದಿನ ನಿದ್ರೆ ಬಾರದೇ ಹೋದರೆ ಅದರ ಪ್ರಭಾವ ಮುಂದಿನ ದಿನಗಳಲ್ಲಿಯೂ ನಿಮ್ಮನ್ನು ಕಾಡುತ್ತದೆ. ರಾತ್ರಿ ಇಡೀ ಪ್ರಯಾಣ ಮಾಡಿ ಹಗಲಿನ ವೇಳೆ ನಿದ್ರೆ ಮಾಡಬೇಕೆಂದರೂ ನಿದ್ರೆ ಆವರಿಸದು. ಅದೇ ರೀತಿ ಕೆಲಸದಲ್ಲಿ ರಾತ್ರಿ ಪಾಳಿಯಲ್ಲಿ ನೀವು ಕೆಲಸ ನಿರ್ವಹಿಸುತ್ತಿದ್ದರೆ , ಅಥವಾ ಪದೇ ಪದೇ ವೇಳಾಪಟ್ಟಿ ಬದಲಾದರೆ ನಿಮಗೆ ನಿದ್ರಾಹೀನತೆ ಕಾಡುತ್ತದೆ.
 • ಕಡಿಮೆ ನಿದ್ರಾ ಸಮಯದ ಅಭ್ಯಾಸ: ಅನಿಯಮಿತವಾಗಿ ನಿದ್ರಾ ಸಮಯ , ನಿದ್ರೆಯ ಮಧ್ಯೆ ಶೌಚಾಲಯಕ್ಕೆ ಹೋಗುವುದು, ಮಲಗುವ ಸ್ಥಳ ಅಸಮರ್ಪಕವಾಗಿರುವುದು, ಉದ್ವೇಗವಾಗುವಂತ ವಿಷಯ, ಸಿನಿಮಾ ವೀಕ್ಷಣೆ ಮಾಡಿ ಮಲಗಲು ತೆರಳುವುದು, ತುಂಬಾ ಸಮಯದವರೆಗೆ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡುವುದು. ವಿಡಿಯೋ ಗೇಮ್ ಆಡುತ್ತಾ ಸಮಯ ಕಳೆಯುವುದು. ಇವೆಲ್ಲದರಿಂದ ನಿದ್ರಾ ಸಮಯಕ್ಕೆ ಭಂಗವಾಗುತ್ತದೆ.
 • ರಾತ್ರಿ ಮಲಗುವ ಸಮಯದಲ್ಲಿ ಹೊಟ್ಟೆ ತುಂಬಾ ಊಟ ಮಾಡಿರುವುದು: ಮಲಗಲು ತೆರಳುವ ಮುನ್ನ ಹೊಟ್ಟೆ ತುಂಬಾ ಊಟ ಮಾಡಿ, ನೀರು ಕುಡಿದು ಮಲಗಿಕೊಂಡರೆ. ನಿದ್ರೆ ಸರಿಯಾಗಿ ಬರುವುದಿಲ್ಲ. ಅದರಲ್ಲೂ ಅಸಿಡಿಟಿ ಕಾರಕ ಆಹಾರವನ್ನು ಸೇವಿಸಿದರೆ ರಾತ್ರಿ ಪೂರ ನಿದ್ದೆ ಗೆಡಬೇಕಾಗುತ್ತದೆ. ಎದೆ ಉರಿಯುವುದು, ಆಸಿಡ್ ಬಾಯಿಗೆ ಬರುವುದು, ಸರಿಯಾಗಿ ಜೀರ್ಣವಾಗದೇ ಕಿರಿಕಿರಿ ಉಂಟುಮಾಡುತ್ತದೆ. ಇಂಥ ಸಮಯದಲ್ಲಿ ನಿದ್ರೆಯು ಬರುವುದಿಲ್ಲ.
 • ಮಾನಸಿಕ ತೊಂದರೆ ಕಾಯಿಲೆ ಇರುವವರಿಗೆ – ಖಿನ್ನತೆ, ಹಲವಾರು ಮಾನಸಿಕ ತೊಂದರೆಯನ್ನು ಅನುಭವಿಸುತ್ತಿರುವ ರೋಗಿಗಳಲ್ಲಿ ರಾತ್ರಿ ವೇಳೆ ನಡೆಯುವ ಹವ್ಯಾಸವಿರುತ್ತದೆ
 • ಚಿಕಿತ್ಸೆಯನ್ನು ಪಡೆಯುತ್ತಿರುವವರು- ಹಲವಾರು ರೀತಿಯ ಔಷಧಿ ಮಾತ್ರೆಯನ್ನು ತೆಗೆದುಕೊಳ್ಳುತ್ತಿರುವವರಲ್ಲಿ ನಿದ್ರಾಹೀನತೆಯ ತೊಂದರೆ ಕಾಡುತ್ತಿರುತ್ತದೆ. ಕೆಲವು ರೋಗಗಳು ಅಸ್ತಮಾ ಅಥವಾ ಅಧಿಕ ರಕ್ತದೊತ್ತಡಕ್ಕೆ ಸಂಬಂಧಪಟ್ಟ ಔಷಧಿಗಳಿಂದ ನಿದ್ರಾಹೀನತೆಯ ಸಮಸ್ಯೆ ತೀವ್ರವಾಗಿರುತ್ತದೆ. ಸಣ್ಣ ಪ್ರಮಾಣದ ಮಾತ್ರೆಗಳನ್ನು ಅಲರ್ಜಿಕಾರಕ, ಶೀತ ತಲೆನೋವು, ನೋವಿನ ಮಾತ್ರೆ ಗಳು, ತೂಕ ಕಡಿಮೆ ಮಾಡುವ ಔಷಧಿ, ಇಂಥಾ ಮಾತ್ರೆಗಳ ಸೇವನೆಯಿಂದ ಮತ್ತು ಕಾಫಿ-ಟೀ ಹೆಚ್ಚಾಗಿ ಕುಡಿಯುವವರಲ್ಲಿ ಕೂಡ ನಿದ್ರಾಹೀನತೆ ಕಾಡುತ್ತಿರುತ್ತದೆ.
 • ಕೆಲವು ರೋಗದ ಸ್ಥಿತಿಗಳಲ್ಲಿ- ಮಧುಮೇಹ, ಆರ್ಥ್ರೈಟಿಸ್, ಹೃದಯರೋಗ, ಅಸ್ತಮಾ, ಕ್ಯಾನ್ಸರ್, ಗ್ಯಾಸ್ಟ್ರೋಈಸೋಫಂಗೆಲ್ , ಥೈರಾಯಿಡ್ ತೀವ್ರತೆ ಇರುವವರಲ್ಲಿ, ಪಾರ್ಕಿನ್ಸನ್ ರೋಗ ಮತ್ತು ಅಲ್ಜಿಮರ್ಸ್ ಇರುವವರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತಿರುತ್ತದೆ.
 • ನಿದ್ರೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿ- ಸ್ಲೀಪ್ ಆಪ್ನೀಯದಿಂದ ರಾತ್ರಿ ಪೂರ್ತಿ ಉಸಿರಾಟದ ತೊಂದರೆಯಿಂದಾಗಿ ನಿದ್ರೆ ಇರುವುದಿಲ್ಲ. ಕಾಲುಗಳು ಜೋಮು ಹಿಡಿಯುವುದು, ಕಾಲುಗಳನ್ನು ಸ್ಪರ್ಶ ತಿಳಿಯದೆ ಇರುವುದರಿಂದ ನಿದ್ರೆಗೆ ಆಗಾಗ ತೊಡಕಾಗುತ್ತದೆ.
 • ಕಾಫಿ, ಟೀ, ಕೋಕಾಕೋಲಾ- ರಾತ್ರಿ ಮಲಗುವ ಸಮಯದಲ್ಲಿ ಕಾಫಿ ಟೀ ಕೋಕಾ-ಕೋಲಾ ಇದನ್ನು ಕುಡಿದು ಮಲಗಿದರೆ ನಿದ್ರೆ ಬರುವುದಿಲ್ಲ. ನಿಕೋಟಿನ್ ಮತ್ತು ಟೊಬ್ಯಾಕೋ ಉತ್ಪನ್ನಗಳು ನಿದ್ರೆಯನ್ನು ಹಾಳುಮಾಡುತ್ತವೆ. ಆಲ್ಕೋಹಾಲ್ ನಿಂದ ನಿದ್ರೆ ಬರಬಹುದು ಆದರೆ ನಿದ್ದೆಯೂ ಗಾಢವಾಗಿ ಇರುವುದಿಲ್ಲ.

ನಿದ್ರಾಹೀನತೆಯ ದುಷ್ಪರಿಣಾಮಗಳು.

 • ಮಹಿಳೆಯರಲ್ಲಿ ನಿದ್ರಾಹೀನತೆಯಿಂದ ಹಾರ್ಮೋನಿನ ಏರುಪೇರಾಗುತ್ತದೆ. ಇದರಿಂದ ಮಾಸಿಕ ಚಕ್ರದ ಅಡೆತಡೆ ಉಂಟಾಗುತ್ತದೆ. ನಿದ್ರಾಹೀನತೆ ಸಮಸ್ಯೆ ಮೆನೋಪಾಸ ಸಮಯದಲ್ಲಿ ಅಧಿಕವಾಗಿರುವುದರಿಂದ ರಾತ್ರಿ ಸಮಯದಲ್ಲಿ ತುಂಬಾ ಬೆವರುವುದು ಮತ್ತು ಅನುಭವವಾಗುತ್ತದೆ.
 • ನಿದ್ರೆಯ ಭಂಗಿಯಲ್ಲಿ ಬದಲಾವಣೆ: ನಿದ್ರೆಯು ಕಡಿಮೆ ಪ್ರಮಾಣದಲ್ಲಿ ಆಗುವುದರಿಂದ ಆವಾಗಾವಾಗ ಮಗ್ಗುಲು ಬದಲಿಸಿ ನಿದ್ರಿಸಲು ಪ್ರಯತ್ನ ಪಡುತ್ತಾರೆ. ಪರಿಸರದ ಬದಲಾವಣೆಗೆ ಅನುಗುಣವಾಗಿ, ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಸಾಮಯಾ ಕೂಡ ಬದಲಾಗುತ್ತಾ ಸಾಗುತ್ತದೆ .
 • ದೈನಂದಿನ ಚಟುವಟಿಕೆಯಲ್ಲಿ ಬದಲಾವಣೆ: ನಿದ್ರೆ ಕಡಿಮೆ ಮಾಡಿ ಸುಸ್ತು ಅನುಭವಿಸುತ್ತಿರುವವರು ಅತೀ ಕಡಿಮೆ ಚಟುವಟಿಕೆಯಿಂದ ಇರುತ್ತಾರೆ. ಅದೂ ಅಲ್ಲದೇ ಸಾಮಾಜಿಕ ಜೀವನದಲ್ಲಿ ತುಂಬಾ ಕಡಿಮೆ ಬೆರೆಯುತ್ತಾರೆ. ರಾತ್ರಿ ಸಮಯದಲ್ಲಿ ಇವರು ಆವಾಗಾವಾಗ ಮೂತ್ರವಿಸರ್ಜನೆಗೆ ತೆರಳುತ್ತಾರೆ. ಆದರೆ ಹಗಲು ಅಷ್ಟು ಇರುವುದಿಲ್ಲ.
 • ಆರೋಗ್ಯದಲ್ಲಿ ಬದಲಾವಣೆ : ಆರ್ಥ್ರಿಟಿಸ್ ಅಥವಾ ಬೆನ್ನು ನೋವು ಅಧಿಕವಾಗಿರುತ್ತದೆ. ಖಿನ್ನತೆ ಮತ್ತು ಕೋಪ ಇದರ ಜೊತೆಗೆ ಸೇರಿಕೊಳ್ಳುತ್ತದೆ. ಗೊತ್ತಿಲ್ಲದಂತೆ ಮೂತ್ರ ಹೊರಬರಬಹುದು. ಬ್ಲಡ್ಡೇರ್ ಸಮಸ್ಯೆ ಆರಂಭವಾಗಬಹುದು.

ಸ್ಲೀಪ್ ಇನ್ಸೋಮ್ನಿಯಾದ ಸಂಕೀರ್ಣತೆ:

 • ಶಾಲೆ ಅಥವಾ ಕಚೇರಿಯಲ್ಲಿ ಕಡಿಮೆ ಸಾಮರ್ಥ್ಯದ ಪ್ರದರ್ಶನ.
 • ಡ್ರೈವಿಂಗ್ ಮಾಡುವಾಗ ನಿದ್ರೆಗೆ ಜಾರಿ ಅಪಘಾತಗಳಾಗುವುದು.
 • ಮಾನಸಿಕ ಆರೋಗ್ಯ ಸಮಸ್ಯೆ, ಉದಾಹರಣೆಗೆ: ಖಿನ್ನತೆ, ಮೆನಿಕ್, ಬೈಪೋಲಾರ್ ಡಿಸಾರ್ಡರ್.
 • ದೀರ್ಘಾವಧಿ ಕಾಡುವ ರೋಗಗಳ ತೀವ್ರತೆ ಹೆಚ್ಚುವುದು ಮತ್ತು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಖಾಯಿಲೆಗಳು .

ತಡೆತಟ್ಟುವುದು

ಒಳ್ಳೆಯ ನಿದ್ರೆಯ ಅಭ್ಯಾಸದಿಂದ ಇನ್ಸೋಮ್ನಿಯಾ ಸಮಸ್ಯೆಯನ್ನು ತಡೆಗಟ್ಟಬಹುದು.

 

 • ದಿನವೂ ಅದೇ ಸಮಯದಲ್ಲಿ ನಿದ್ರಿಸುವಂತೆ ಟೈಮ್ ಟೇಬಲ್ ಹಾಕಿಕೊಳ್ಳಿ.
 • ಚಟುವಟಿಕೆಯಿಂದಿರಿ- ದಿನದಲ್ಲಿ ಚಟುವಟಿಕೆಯಲ್ಲಿ ಇದ್ದು ದೇಹ ದಣಿದರೆ ರಾತ್ರಿ ಸುಖ ನಿದ್ರೆ ನಿಮ್ಮದಾಗುತ್ತದೆ.
 • ನಿಮ್ಮ ಔಷಧಿಯನ್ನು ಪರಿಶೀಲಿಸಿ. ಏಕೆಂದರೆ ಐಸೋಮ್ನಿಯಾಕ್ಕೆ ಇದರ ಪಾಲುದಾರಿಕೆ ಇರಬಹುದು.
 • ರಾತ್ರಿ ಮೂತ್ರ ವಿಸರ್ಜನೆಗೆ ಬೇಗನೆ ಹೋಗಿ. ನಿದ್ರೆಯ ಮಧ್ಯೆ ಎದ್ದೇಳಬೇಡಿ.
 • ಸಂಜೆ ಐದರ ನಂತರ ಕಾಫಿ, ಆಲ್ಕೋಹಾಲ್, ಟೀ ಸೇವನೆ ಮಾಡದಿರಿ.
 • ರಾತ್ರಿ ಏಳು ಗಂಟೆಯ ನಂತರ ಭೋಜನ ಮಾಡದಿರಿ. ಲೈಟ್ ಫುಡ್ ಸಾಕು.
 • ಮಲಗುವ ಹಾಸಿಗೆ ಮತ್ತು ಕೊಠಡಿ ಸ್ವಚ್ಛವಾಗಿರಲಿ
 • ಸಂಗಾತಿಯೊಡನೆ ಲೈಂಗಿಕತೆ ಒಂದು ರೀತಿಯಲ್ಲಿ ಒಳ್ಳೆಯ ನಿದ್ರೆಯನ್ನು ಕೊಡುತ್ತದೆ.
 • ಚಿನ್ ಮುದ್ರೆ ಧಾರಣೆ ಮಾಡಿ ಸವಾಸನದಲ್ಲಿ ಮಲಗಿರಿ. ನಿದ್ರೆ ತಾನೇ ಬರುತ್ತದೆ.

#momhealth

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.