10 Nov 2021 | 1 min Read
Medically reviewed by
Author | Articles
ನಮ್ಮ ದೇಹದ ಪ್ರಮುಖ ಗ್ರಂಥಿಗಳಲ್ಲಿ ಒಂದಾದ ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ಹಾರ್ಮೋನ್ ಅನ್ನು ಸ್ರವಿಸುತ್ತದೆ. ಇದರಲ್ಲಿ ಸ್ವಲ್ಪ ಏರುಪೇರು ಆದಾಗ ದೇಹದ ನಿತ್ಯ ಪ್ರಕ್ರಿಯೆಯಲ್ಲಿ ವೈಪರೀತ್ಯ ಕಂಡುಬರುತ್ತದೆ. ಕೆಲವು ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಮಾತ್ರ ಥೈರಾಯ್ಡ್ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆ ಆರಂಭದಲ್ಲಿ ಸಣ್ಣದಾಗಿ ಕಂಡುಬಂದರೂ ರೋಗವನ್ನು ನಿರ್ಲಕ್ಷ್ಯ ಮಾಡಿದರೆ ಥೈರಾಯ್ಡ್ ಗ್ರಂಥಿ ದಪ್ಪಗಾಗಿ ಗಂಟಲು ದಪ್ಪಗಾಗುವ ಸಂದರ್ಭ ಬಹಳಷ್ಟಿದೆ. ಥೈರಾಯಿಡ್ ಸಮಸ್ಯೆಯಿಂದ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯಾದಾಗ ಇದಕ್ಕೆ ಸರಿಯಾದ ಚಿಕಿತ್ಸೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಕ್ಯಾನ್ಸರ್ ನಂತಹ ಭಯಾನಕ ರೋಗಕ್ಕೆ ತುತ್ತಾಗಬಹುದು. ಥೈರಾಯಿಡ್ ಸಮಸ್ಯೆಯಲ್ಲಿ ತುಂಬಾ ಸಾಮಾನ್ಯ ಎಂದರೆ ಹಾರ್ಮೋನಿನ ಅನಿಯಮಿತ ಸ್ರವಿಕೆ. ಹಾರ್ಮೋನಿನ ಅತಿಯಾದ ಸ್ರವಿಕೆಯು ಹೈಪರ್ ಥೈರಾಯಿಡಿಸಂ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಅದೇ ರೀತಿ , ವಿರಳವಾಗಿ ಹಾರ್ಮೋನ್ ಸ್ರವಿಕೆ ಉಂಟಾದರೆ, ಹೈಪೋಥೈರೋಯ್ಡಿಸಂ ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಸರಿಯಾದ ಸಮಯಕ್ಕೆ ಸಮಪರ್ಕವಾದ ಚಿಕಿತ್ಸೆ ಕೊಡಿಸಿದ್ದಲ್ಲಿ ಥೈರಾಯಿಡ್ ಸಮಸ್ಯೆಯನ್ನು ನಿವಾರಿಸಬಹುದು.
ಥೈರಾಯಿಡ್ ಸಮಸ್ಯೆಗೆ ಕಾರಣವೇನು?
ಎಲ್ಲಾ ರೀತಿಯ ಹೈಪರ್ ಥೈರಾಯಿಡಿಸಂನ ಮೂಲ ಕಾರಣ ಹಾರ್ಮೋನಿನ ಅತಿಯಾದ ಸ್ರವಿಕೆ. ಹೆಚ್ಚು ಪ್ರಮಾಣದಲ್ಲಿ ಸ್ರವಿಕೆಯನ್ನು ಹೈಪೋಥೈರಾಯಿಡಿಸಂ ಎಂದು ಕರೆಯುತ್ತಾರೆ. ಇದರಿಂದ ಉಂಟಾಗುವ ಅಪಾಯವನ್ನು ತಿಳಿಯೋಣ
ಗ್ರೇವ್ಸ್ ಡಿಸೀಸಸ್- ಥೈರಾಯಿಡ್ ಹಾರ್ಮೋನಿನ ಸ್ರವಿಕೆ ತೀವ್ರ ಮಟ್ಟದಲ್ಲಿ ಇರುತ್ತದೆ.
ವಿಷಕಾರಿ ಅಡೆನೋಮಸ್ – ಥೈರಾಯ್ಡ್ ಗ್ರಂಥಿಯಲ್ಲಿ ಗಂಟುಗಳು ಬೆಳೆಯಲು ಆರಂಭವಾಗುತ್ತದೆ. ಬೆಳೆದ ಗಂಟುಗಳಲ್ಲಿ ಥೈರಾಯಿಡ್ ಹಾರ್ಮೋನ್ ಸ್ರವಿಕೆ ಆರಂಭವಾಗಿ ದೇಹದ ಒಟ್ಟಾರೆ ರಾಸಾಯನಿಕ ಪ್ರಕ್ರಿಯೆಯನ್ನು ಅಸಮತೋಲನಗೊಳಿಸುತ್ತದೆ. ಇದರಿಂದ ನ್ಯಾಸಗ್ರಂಥಿಗಳಲ್ಲಿ ಬಹಳಷ್ಟು ಗಂಟುಗಳು ಹುಟ್ಟಿಕೊಳ್ಳುತ್ತವೆ.
ಸಬಾಕ್ಯೂಟ್ ಥೈರಾಯಿಡ್ಟಿಸ್:- ಥೈರಾಯಿಡ್ ಗ್ರಂಥಿಯಲ್ಲಾಗುವ ಊತದಿಂದಾಗಿ ಹೆಚ್ಚುವರಿ ಹಾರ್ಮೋನಿನ ಸ್ರವಿಕೆಯು ಹೊರಬರುತ್ತದೆ. ಇದರಿಂದ ತಾತ್ಕಾಲಿಕ ಹೈಪೋಥೈರಾಯಿಡಿಸಂ ಕೆಲವು ವಾರಗಳ ತನಕ ಕಾಡಬಹುದು. ತದನಂತರ ದೀರ್ಘಕಾಲದವರೆಗೆ ಕಾಡಬಹುದು.
ಪಿಟ್ಯೂಟರಿ ಗ್ರಂಥಿಯ ಅಸಮತೋಲನ ಅಥವಾ ಥೈರಾಯ್ಡ್ ಗ್ರಂಥಿಯಲ್ಲಿ ಕ್ಯಾನ್ಸರ್ ಬೆಳವಣಿಗೆ :- ತುಂಬಾ ವಿರಳ ಸನ್ನಿವೇಶದಲ್ಲಿ ಹೈಪರ್ ಥೈರಾಯ್ಡಿಸಂ ಸ್ಥಿತಿಯಲ್ಲಿ ಈ ಪರಿಸ್ಥಿತಿ ಉಂಟಾಗುತ್ತದೆ. ಹೈಪರ್ ಥೈರಾಯಿಡಿಸಂ ಸ್ಥಿತಿಯು ಇದಕ್ಕೆ ವಿಭಿನ್ನವಾಗಿರುತ್ತದೆ. ದೇಹದ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಥೈರಾಯ್ಡ್ ಹಾರ್ಮೋನಿನ ಸ್ರವಿಕೆ ಉಂಟಾಗುತ್ತದೆ. ಥೈರಾಯ್ಡ್ ಹಾರ್ಮೋನಿನ ಸ್ರವಿಕೆ ಕಡಿಮೆ ಪ್ರಮಾಣ ದಲ್ಲಿ ಉಂಟಾದಾಗ ದೇಹದ ಶಕ್ತಿ ಸಾಮರ್ಥ್ಯ ಕುಗ್ಗುತ್ತದೆ. ಈ ಸ್ಥಿತಿಯಲ್ಲಿ ಹೈಪೋ ಥೈರಾಯಿಡಿಸಂ ಉಂಟಾಗುತ್ತದೆ. ಈ ಸ್ಥಿತಿಯಲ್ಲಿ ಅದರ ತೀವ್ರತೆ ಏನಾಗುತ್ತದೆ ಎಂದರೆ,
ಅಶಿಮೋಟೋಸ್ ಥೈರಾಯ್ಡಿಟಿಸ್ :- ಇದು ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ದಾಳಿಮಾಡುತ್ತದೆ. ಅಂದರೆ ಥೈರಾಯಿಡ್ ಟಿಶ್ಯುವಿನ ಮೇಲೆ ದಾಳಿ ಮಾಡುತ್ತದೆ. ಇದರ ಪರಿಣಾಮವಾಗಿ ಟಿಶ್ಯೂ ಸಾಯುತ್ತದೆ ಮತ್ತು ಹಾರ್ಮೋನಿನ ಸ್ರವಿಕೆ ನಿಂತುಹೋಗುತ್ತದೆ.
ಥೈರಾಯ್ಡ್ ಗ್ರಂಥಿಯನ್ನು ತೆಗೆದುಹಾಕುವುದು:- ಥೈರಾಯಿಡ್ ಗ್ರಂಥಿಯು ರಾಸಾಯನಿಕ ಪರಿಣಾಮದಿಂದ ಹಾಳಾಗುವುದು ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಥೈರಾಯಿಡ್ ಗ್ರಂಥಿಯನ್ನು ಮಾಡಿ ತೆಗೆದುಹಾಕಲಾಗುವುದು.
ಅಯೋಡೈಸ್ಡ್ ಅಂಶಕ್ಕೆ ವಿಪರೀತವಾಗಿ ಸಂಪರ್ಕಕ್ಕೆ ಬರುವುದು:- ಶೀತ ಮತ್ತು ಸೈನಸ್ ಔಷಧಿ, ಹೃದಯಕ್ಕೆ ಸಂಬಂಧಿಸಿದ ಔಷಧಿ ಅಮೂಡರೋನ್, ಅಥವಾ ಎಕ್ಸರೇಗೆ ಮುಂಚಿತವಾಗಿ ಲೇಪನದ ಸಮನ್ವಯತೆಯನ್ನು ಹೆಚ್ಚು ಕಡಿಮೆಯಾದಾಗ ಅಯೋಡಿನ್ ಗೆ ತೀವ್ರ ಪ್ರಮಾಣದಲ್ಲಿ ದೇಹ ಒಡ್ಡಿದಾಗ ಅಂತಹ ಸಂದರ್ಭದಲ್ಲಿ ಅದಕ್ಕೂ ಮುಂಚಿತವಾಗಿ ಥೈರಾಯಿಡ್ ಸಮಸ್ಯೆ ಇದ್ದರೆ, ಇವತ್ತಿನ ಕಾರಣದಿಂದಾಗಿ ಹೈಪೋ ಥೈರಾಯಿಡಿಸಂ ಸ್ಥಿತಿ ಉಂಟಾಗುತ್ತದೆ.
ಲಿಥಿಯಂ :- ಹೈಪೋಥೈರಾಯಿಡಿಸಂ ಸ್ಥಿತಿಗೆ ಲಿತಿಯಂ ಸಂಬಂಧಪಟ್ಟ ಔಷಧಿ ಕಾರಣವಾಗುತ್ತದೆ.
ಥೈರಾಯಿಡ್ಗೆ ಗರ್ಭಾವಸ್ಥೆಯಲ್ಲಿ ತಕ್ಷಣ ಔಷದೋಪಚಾರ ಮಾಡಬೇಕು. ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೇ ಇರುವ ಹೈಪೋಥೈರಾಯಿಡಿಸಂ ಸ್ಥಿತಿಯು ಮುಂದೆ ಮಿಕ್ಸೆಡೆಮ ಕೊಮ ಸ್ಥಿತಿಗೆ ತಲುಪುವಂತೆ ಮಾಡುತ್ತದೆ.
ಹೈಪೋಥೈರಾಯಿಡಿಸಂ ಸ್ಥಿತಿಯು ವಿಶೇಷವಾಗಿ ನವಜಾತ ಶಿಶು ಮತ್ತು ಸಣ್ಣ ಮಕ್ಕಳಲ್ಲಿ ಅಪಾಯಕಾರಿಯಾಗಿದೆ. ಮಕ್ಕಳ ಬೆಳವಣಿಗೆಯ ಸಮಯದಲ್ಲಿ ಈ ಸಮಸ್ಯೆ ಕಾಡುವುದರಿಂದ, ಮಗುವಿನಲ್ಲಿ ಕಲಿಕೆಯ ವಿಕಲತೆ ಮತ್ತು ಮಗುವಿನ ಬೆಳವಣಿಗೆಯನ್ನು ಮೊಟಕುಗೊಳಿಸುತ್ತದೆ. ಆದ್ದರಿಂದ ಮಗು ಹುಟ್ಟಿದ ಕ್ಷಣ ಥೈರಾಯ್ಡ್ ಪರೀಕ್ಷೆ ಮಾಡಲಾಗುವುದು. ಒಂದು ವೇಳೆ ಮಗುವಿನಲ್ಲಿ ಹೈಪೋಥೈರಾಯ್ಡಿಸಂ ಸ್ಥಿತಿ ಕಂಡು ಬಂದರೆ ತಕ್ಷಣ ಚಿಕಿತ್ಸೆಯನ್ನು ಆರಂಭಿಸಲಾಗುವುದು. ದೊಡ್ಡವರಂತೆ ಮಕ್ಕಳಲ್ಲಿ ಹೈಪೋಥೈರಾಯ್ಡಿಸಂ ನಿಂದ ಆಗುವ ಪರಿಣಾಮಗಳು ಹೀಗಿವೆ,
ಮಗುವಿನಲ್ಲಿ ಕಂಡು ಬರುವ ಥೈರಾಯಿಡ್ ಸಮಸ್ಯೆಯಿಂದಾಗಿ ಮಗು ಹೆಚ್ಚು ಚಟುವಟಿಕೆ ಇಲ್ಲದಂತೆ ಇರುವುದು. ಸದಾ ಮೌನವಾಗಿರುತ್ತದೆ. ಹಸಿವಿನ ತೀವ್ರತೆ ತುಂಬಾ ಕಡಿಮೆ ಇರುತ್ತದೆ. ನಿದ್ರೆಯು ಬಹಳ ಸಮಯದವರೆಗೆ ಇರುತ್ತದೆ.
ಮಹಿಳೆಯರಲ್ಲಿ ಥೈರಾಯಿಡ್ ಸಮಸ್ಯೆಯಿಂದಾಗುವ ತೊಂದರೆ:
ಹೈಪೋಥೈರಾಯಿಡಿಸಂನ ಲಕ್ಷಣಗಳು
ಹೈಪರ್ಥೈರಾಯಿಡಿಸಂ ಲಕ್ಷಣಗಳು
ಮುಂಜಾಗ್ರತೆಯ ಕ್ರಮ
ಈ ಎಲ್ಲಾ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ಮಾಡಿಸಿ. ಈಗ ಬಹಳಷ್ಟು ಆಯುರ್ವೇದ ಮತ್ತು ಅಲೋಪಥಿ ಚಿಕಿತ್ಸೆ ಲಭ್ಯವಿದೆ. ತಾತ್ಸಾರ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.