ಯೋನಿಯ ಪ್ರಸವದ ನಂತರ

ಯೋನಿಯ ಪ್ರಸವದ ನಂತರ

10 Nov 2021 | 1 min Read

Medically reviewed by

Author | Articles

ಪ್ರತಿ ಹೆಣ್ಣಿಗೆ ಪ್ರಸವದ ನಂತರ ಏನಾಗುತ್ತದೋ ಹೇಗಿರುತ್ತೇನೋ ಬದಲಾದ ನನ್ನ ಶರೀರ ಪುನಹ ಹಳೇ ಸ್ಥಿತಿಗೆ ಬರುತ್ತದೆಯೇ ಎಂಬ ಹಲವಾರು ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡುತ್ತದೆ. ಇದು ಸಹಜ ಕೂಡ. ನಮ್ಮಲ್ಲಿ ಬಹಳಷ್ಟು ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ತೂಕ ಹೆಚ್ಚಳದಿಂದ ದೇಹದ ಆಕಾರ ಕೇಡುವುದು, ಮುಖದ ಸೌಂದರ್ಯ ಹಾಳಾಗುವುದು, ಕೂದಲು ಉದುರುವಿಕೆ, ಸೊಂಟದ ಭಾಗದ ಅಳತೆ ಹೆಚ್ಚಾಗುವುದು, ಕಪ್ಪಗಾಗುವುದು , ಈ ಸಮಸ್ಯೆಗಳಿಂದ ಹೇಗಪ್ಪ ಮುಕ್ತಿ ಹೊಂದುವುದು ಎಂಬ ಭಾವನೆ ಇರುತ್ತದೆ. ಎಲ್ಲ ಸಮಸ್ಯೆಗಳು ಹೆರಿಗೆಯ ನಂತರ ಮುಂದುವರಿದರೆ ಹೇಗೆ ನಿಭಾಯಿಸುವುದು ಎಂಬ ಅನುಮಾನವೂ ಕೂಡ ಇರುತ್ತದೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಬದಲಾದ ದೇಹ ಮತ್ತು ಮನಸ್ಸಿನ ಸ್ಥಿತಿ, ಪ್ರಸವದ ನಂತರ ಬರಲಾಗುವುದಿಲ್ಲವೇ? ಖಂಡಿತ ಬದಲಾಗುತ್ತದೆ.

 

ಪ್ರಸವದ ನಂತರದ ದಿನಗಳು ಬಹಳಷ್ಟು ಜನರ ಮನಸ್ಸಿನಲ್ಲಿ ಒಬ್ಬ ರೋಗಿಯ ಆರೈಕೆ ಎಂಬಂತೆ ಮನೆಮಾಡಿದೆ. ಆದರೆ ಒಂದು ತಿಳಿದುಕೊಳ್ಳಿ, ಪ್ರಸವದ ನಂತರದ ದಿನಗಳು ನಿಮ್ಮ ದೇಹದ ಸಹಜಸ್ಥಿತಿ ಮನಸ್ಸಿನ ಸಹಜ ಸ್ಥಿತಿ, ಸಮತೋಲನಕ್ಕೆ ತೆಗೆದುಕೊಳ್ಳುವ ಸಮಯ ಎಂಬುದನ್ನು ಮರೆಯಬೇಡಿ.

ಪ್ರಸವದ ನಂತರ ಕೆಲವು ವಾರಗಳವರೆಗೆ ದೇಹ ತನ್ನ ಸಹಜ ಸ್ಥಿತಿಗೆ ಮರಳುತ್ತದೆ. ಈ ಅವಧಿಯಲ್ಲಿ ನೀವು ನಿಮ್ಮ ನವಜಾತ ಶಿಶುವಿನೊಂದಿಗೆ ಅನನ್ಯ ಬಾಂಧವ್ಯವನ್ನು ಬೆಸೆಯುವ ಸಂದರ್ಭದಲ್ಲಿ ಸಂತೋಷವಾಗಿರುತ್ತೀರಿ. ಈ ಸಂದರ್ಭದಲ್ಲಿ ಮಗುವಿನ ಆರೈಕೆ ಜೊತೆಗೆ ನಿಮ್ಮ ಆರೈಕೆಯೂ ಕೂಡ ತುಂಬಾ ಮುಖ್ಯ. ಗರ್ಭಾವಸ್ಥೆಯಲ್ಲಿ ಅನುಭವಿಸಿದ ದೈಹಿಕ ಮತ್ತು ಮಾನಸಿಕ ಅಸಮತೋಲನವನ್ನು ಪ್ರಸವದ ನಂತರ ಸಮಾನಗೊಳಿಸಲು ನೀವು ಪ್ರಯತ್ನಿಸಬೇಕಾಗಿದೆ. ಯೋನಿಯ ಮೂಲಕ ಮಗುವಿನ ಜನನವಾದರೆ, ಯೋನಿಯ ಗಾಯ ವಾಸಿಯಾಗಲು ಮತ್ತು ಗರ್ಭಾಶಯದ ಕುಗ್ಗುವಿಕೆಗೆ ಸಮಯ ತೆಗೆದುಕೊಳ್ಳುತ್ತದೆ. ಮಗುವಿನ ಜನನದ ನಂತರ ನಿಮ್ಮ ದೇಹವು ದೈಹಿಕವಾಗಿ ಮತ್ತು ಮಾನಸಿಕವಾಗಿ ದಿನಂಪ್ರತಿ ಬದಲಾಗುತ್ತಲೇ ಇರುತ್ತದೆ. ಕೆಲವು ಬದಲಾವಣೆಗಳು 6 ವಾರಗಳಲ್ಲಿ ನಡೆಯಬಹುದು. ಹಾಗಾಗಿ ವೈದ್ಯರು ಕನಿಷ್ಠ 6 ವಾರಗಳಷ್ಟು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕೆಂದು ಸೂಚಿಸುತ್ತಾರೆ. ಭಾರತೀಯ ಸಾಂಪ್ರದಾಯಿಕ ಪದ್ಧತಿಯಲ್ಲಿಯೂ ಕೂಡ ಪ್ರಸವದ ನಂತರ ಮಹಿಳೆಯರು 60 ದಿನಗಳವರೆಗೆ ಸಾಕಷ್ಟು ವಿಶ್ರಾಂತಿಯನ್ನು ಪಡೆಯುತ್ತಾರೆ. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸಂಗ್ರಹಗೊಂಡ ನೀರಿನ ಪ್ರಮಾಣ ಇಳಿಯಲು ಬಹಳಷ್ಟು ಆರೈಕೆಯ ಅವಶ್ಯಕತೆ ಇರುತ್ತದೆ. ಈ ಅವಧಿಯಲ್ಲಿಯೇ ಮಗುವಿನ ಗಾತ್ರಕ್ಕೆ ಅನುಗುಣವಾಗಿ ಬೆಳೆದ ಗರ್ಭಕೋಶದ ಆಕಾರ ನಿಧಾನವಾಗಿ ಆಗಲು ಪ್ರಾರಂಭಿಸುತ್ತದೆ. ಕುಗ್ಗಿದ ನಂತರ ಗರ್ಭಾವಸ್ಥೆಗೆ ಮುಂಚೆ ಹೇಗಿತ್ತು ಹಾಗೆ ನಿಮ್ಮ ಹೊಟ್ಟೆಯು ಕಾಣಿಸಿಕೊಳ್ಳುತ್ತದೆ. ಪ್ರಸವದ ನಂತರ ಹಾರ್ಮೋನಿನ ಬದಲಾವಣೆ ಮತ್ತು ಭಾವನಾತ್ಮಕ ಸಮತೋಲನ ಇದಕ್ಕೂ ಕೂಡ ಸಮಯ ಹಿಡಿಯುತ್ತದೆ. ಆರಂಭಿಕ ಆರು ವಾರಗಳು ನಿಮಗೆ ತುಂಬಾ ಒತ್ತಡದ ದಿನಗಳಾಗಿರುತ್ತವೆ. ಏಕೆಂದರೆ ಮಗು ನಿಮ್ಮನ್ನು ಅವಲಂಬಿಸಿರುವುದರಿಂದ, ನಿಮ್ಮ ಹೆರಿಗೆ ನೋವಿನ ಜೊತೆಯಲ್ಲಿ ಮಗುವಿನ ಆರೈಕೆಯೂ ಸೇರಿಕೊಂಡಿರುತ್ತದೆ.

ಕೆಳಹೊಟ್ಟೆಯ ನೋವು : ನಿಮ್ಮ ಗರ್ಭಕೋಶವು ಸಹಜ ಸ್ಥಿತಿಗೆ ಬರುವಾಗ ಗರ್ಭಕೋಶ ಸಂಕುಚಿತಗೊಳ್ಳುತ್ತದೆ. ಇದೇ ಕಾರಣಕ್ಕೆ ಕೆಳಹೊಟ್ಟೆ ಬಹಳ ನೋಯುತ್ತಿರುತ್ತದೆ. ಕೆಲವರಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರಲ್ಲಿ ನೋವಿನ ತೀವ್ರತೆ ಅಧಿಕವಾಗಿರುತ್ತದೆ. ಈ ನೋವು ಮಗುವಿಗೆ ಹಾಲುಣಿಸುವಾಗ ಹೆಚ್ಚಾಗಿ ಕಾಣಬಹುದು. ಇದಕ್ಕೆ ಕಾರಣವಿದೆ. ಮಗುವಿಗೆ ಹಾಲುಣಿಸುವಾಗ ರಾಸಾಯನಿಕ ಪ್ರಕ್ರಿಯೆಯನ್ನು ದೇಹವು ಪ್ರಚೋಧಿಸುತ್ತದೆ. ಇದು ಗರ್ಭವನ್ನು ಮುದುಡಿಕೊಳ್ಳುವಂತೆ ಹೆಚ್ಚು ಸಂಕುಚಿತಗೊಳ್ಳುವಂತೆ ಮಾಡುತ್ತದೆ. ಈ ಸಮಯದಲ್ಲಿ ಸ್ವಲ್ಪ ಬಿಸಿ ಶಾಖವನ್ನು ಕಿಬ್ಬೊಟ್ಟೆಗೆ ಕೊಡಬೇಕು. ನೋವು ಶಮನವಾಗುತ್ತದೆ. ತುಂಬಾ ನೋವಿದ್ದರೆ ವೈದ್ಯರಿಗೆ ಹೇಳಿರಿ.

ಮಲಬದ್ಧತೆ: ಗರ್ಭವಾಸ್ಥೆಯ ಸಮಯದಲ್ಲಿ ಮತ್ತು ಪ್ರಸವದ ನಂತರವೂ ಕೂಡ ಕೆಲವು ಮಹಿಳೆಯರಲ್ಲಿ ಮಲಬದ್ಧತೆಯ ಸಮಸ್ಯೆ ಆರಂಭವಾಗಿರುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅಧಿಕವಾಗಿ ನೀರು ಕುಡಿಯದೇ ಇರುವುದು, ಮತ್ತು ನೋವು ನಿವಾರಕ ಮಾತ್ರೆ ಆಸ್ಪತ್ರೆಯಿಂದ ನೀಡಿದ್ದರೆ ಇದರಿಂದ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡಬಹದು. ಗರ್ಭ ಬೆಳೆದಾಗ ಹೊಟ್ಟೆಯ ಸುತ್ತಲಿರುವ ಅಂಗಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಹೆಚ್ಚು ಬೆಳೆದ ಹೊಟ್ಟೆಯ ಒತ್ತಡದಿಂದಾಗಿ ಉಳಿದ ಅಂಗಗಳು ಸ್ವಲ್ಪ ಸಂಕುಚಗೊಂಡಿರುತ್ತದೆ. ಈ ಕಾರಣಕ್ಕೆ ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಪ್ರಸವದ ನಂತರ ಕೆಲವು ದಿನಗಳವರೆಗೆ ಪೋಷಕಾಂಶದ ಕೊರತೆಯಿಂದಾಗಿ ಮತ್ತು ಹೆಚ್ಚಿನ ನೀರು ಸೇವನೆ ಮಾಡದೆ ಇರುವುದರಿಂದ ಮಲಬದ್ಧತೆ ಕಾಣಸಿಕೊಳ್ಳುತ್ತದೆ.

ಹೇಮರಾಯ್ಡ್: ನೋವು ತುಂಬಿದ ಊತ ರೆಕ್ಟುಮ್ ನಾಳದಲ್ಲಿ ಕಂಡುಬರುತ್ತದೆ. ಇದು ಗರ್ಭವಾಸ್ಥೆಯಲ್ಲಿ ಹೆಚ್ಚಾಗಿ ಕಂಡುಬರುವುದು. ಪ್ರಸವದ ಸಮಯದಲ್ಲಿ ಮಗುವನ್ನು ಹೊರಕ್ಕೆ ತಳ್ಳುವಾಗ ಇದು ಉಂಟಾಗುತ್ತದೆ. ಕರುಳಿನ ಚಲನೆ ಯಾದಾಗ ನೋವು ಮತ್ತು ರಕ್ತಸ್ರಾವ ಕೂಡ ಆಗಬಹುದು. ಕೆಲವು ಸಲ ಕೆರೆತ ಕೂಡ ಆಗಬಹುದು. ಇದು ಶಾಶ್ವತವಲ್ಲ. ಕೆಲವು ಸಮಯದ ಬಳಿಕ ಅದಾಗಿ ಸಂಕುಚಿತಗೊಳ್ಳುತ್ತದೆ. ಇಂಥಾ ಸಮಸ್ಯೆ ಎದುರಾಗುವಾಗ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.

ಹಾರ್ಮೋನಿನ ಏರುಪೇರು : ಹೆರಿಗೆಯ ನಂತರ ಕೆಲವು ವೇಳೆ ನಿಮ್ಮ ಮನಸಿನ್ನ ಭಾವನೆಗಳು ಬದಲಾಗುತ್ತಾ ಇರುತ್ತವೆ. ಇದಕ್ಕೆ ಹಾರ್ಮೋನ್ ಕಾರಣ. ರಾತ್ರಿಯ ವೇಳೆ ನೀವು ಬೆವರುವುದು, ವಿಶೇಷವಾಗಿ ನಿದ್ರೆಯ ಸಮಯದಲ್ಲಿ ಹೀಗಾಗುತ್ತದೆ. ಈ ಕಾರಣದಿಂದಾಗಿ ಕೂದಲು ಉದುರುವಿಕೆ, ಹಾರ್ಮೋನಿನ ಬದಲಾವಣೆಯಲ್ಲಿ ಏರುಪೇರು ಆಗುತ್ತದೆ.

ಪೆರಿನಿಯಮ್ ನೋವು : ಗುಧದ್ವಾರ ಮತ್ತು ಯೋನಿಯ ಮಧ್ಯದ ಭಾಗವೇ ಪೆರಿನಿಯಮ್. ಯೋನಿಯ ಮೂಲಕ ಜನನದ ಸಮಯದಲ್ಲಿ ಇದು ಹರಿದುಹೋಗುತ್ತದೆ. ಒಂದು ವೇಳೆ ಮಗು ಜನನದ ಸಮಯದಲ್ಲಿ ಹೆಚ್ಚು ಜಾಗ ಬೇಕಾದಾಗ ವೈದ್ಯರೇ ಅದನ್ನು ಕತ್ತರಿಸುತ್ತಾರೆ. ಇದರಿಂದ ನೋವು ಅಥವಾ ಊತ ಅಲ್ಲಿ ಏರ್ಪಟ್ಟಿರುತ್ತದೆ. ಶೌಚಾಲಯಕ್ಕೆ ಹೋಗುವಾಗ ಬಿಸಿ ನೀರಿನ ಬಳಕೆ ಮಾಡಬೇಕು. ದಿನದಲ್ಲಿ ಒಂದೆರಡು ಸಲ ಸ್ವಚ್ಛ ಬಿಸಿ ನೀರಲ್ಲಿ ತೊಳೆದುಕೊಂಡು ಮುಲಾಮು ಹಚ್ಚಿರಿ. ಗಾಯ ಬೇಗ ವಾಸಿಯಾಗಲು ವೈದ್ಯರ ಬಳಿ ಒಳ್ಳೆಯ ಔಷಧಿ ಕೇಳಿ ಪಡೆಯಿರಿ.

ಸ್ತನ ತೊಟ್ಟು ನೋವು ಅಥವಾ ಸ್ತನದ ನೋವು: ಆರಂಭದ ಕೆಲವು ದಿನಗಳಲ್ಲಿ ಎದೆಹಾಲು ಉಳಿಸುವಾಗ ಸ್ತನದ ತೊಟ್ಟಿನಲ್ಲಿ ಸೀಳು ಅಥವಾ ನೋವು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾದ ಸಮಸ್ಯೆ. ಈ ನೋವು ಕೆಲವು ದಿನಗಳವರೆಗೆ ಮುಂದುವರಿಯಬಹುದು. ಕೆಲವು ಸಲ ಮಗು ಸರಿಯಾಗಿ ಹಾಲು ಕುಡಿಯದೇ ಇದ್ದಾಗ ಹಾಲು ಸ್ತನದಲ್ಲಿ ತುಂಬಿಕೊಂಡು ಸ್ತನ ವಿಪರೀತವಾಗಿ ನೋಯುತ್ತದೆ. ಕೆಲವು ಸಲ ಹಾಲು ಗಟ್ಟಿಯಾಗಿ ಗಂಟು ಆಗಿರುತ್ತದೆ. ಆಗ ಬಿಸಿನೀರಿನ ಕಂಪ್ರೆಸ್ಸರ್ ಬಳಸಿ ಹಾಲು ಗಂಟಾಗಿರುವುದನ್ನು ಕರಗಿಸಬೇಕು. ಸ್ತನದ ತೊಟ್ಟಿಗೆ ಎಣ್ಣೆಯನ್ನು ಲೇಪಿಸಿದರೆ ತೊಟ್ಟಿನ ಸೀಳು ಇಲ್ಲವಾಗುತ್ತದೆ. ನೋವು ಕೂಡ ಕಡಿಮೆ ಎನಿಸುತ್ತದೆ.

ಹೊಲಿಗೆ : ಮಗುವಿನ ಜನನದ ಸಮಯದಲ್ಲಿ ಸಾಮಾನ್ಯವಾಗಿ ಒಂದು ಸಣ್ಣ ಹೊಲಿಗೆ ಹಾಕಿರುತ್ತಾರೆ. ಅದು ಗಾಯ ವಾಸಿಯಾಗಲು 7-10 ದಿನಗಳು ಬೇಕು. ಹೊಲಿಗೆಯ ಜಾಗ ಇನ್ಫೆಕ್ಷನ್ ಆಗದಂತೆ ನೀವು ನೋಡಿಕೊಳ್ಳಬೇಕು. .

ಯೋನಿಯ ಸ್ರಾವ: ಹೆರಿಗೆಯ ನಂತರ ಕೆಲವು ದಿನಗಳವರೆಗೆ ಯೋನಿಯ ಸ್ರಾವ ಇರುತ್ತದೆ. ಅದು ಮುಖ್ಯವಾಗಿ ಯೋನಿಯ ಹೆರಿಗೆಯ ಸಂದರ್ಭದಲ್ಲಿ ಈ ಸ್ರಾವವು ಇಪ್ಪತ್ತೊಂದು ದಿನಗಳವರೆಗೆ ಇರುತ್ತದೆ .

ನೀರು ತುಂಬಿಕೊಳ್ಳುವುದು: ಕೆಲವು ಸಂದರ್ಭದಲ್ಲಿ ಹೆರಿಗೆಯ ನಂತರ ಕೆಲವರಲ್ಲಿ ಪ್ರೊಜೆಸ್ಟ್ರೊನ್ ಹಾರ್ಮೋನಿನ ವ್ಯತ್ಯಾಸದಿಂದಾಗಿ ಕೈ ಕಾಲು ಊತ ಕಾಣಿಸಿಕೊಳ್ಳುತ್ತದೆ. ಹಾರ್ಮೋನಿನ ಸ್ರವಿಕೆಯಲ್ಲಿ ಹೆಚ್ಚಳದಿಂದಾಗಿ ಈ ಸಮಸ್ಯೆ ಕಾಡುತ್ತದೆ.

ಪ್ರಸವದ ನಂತರದ ರಕ್ತಸ್ರಾವ: ಕೆಲವು ದಿನಗಳ ರಕ್ತಸ್ರಾವದ ನಂತರ ಮುಂದುವರಿಯುತ್ತಲೇ ಇರುತ್ತೇವೆ. ೨೧ ದಿನಕ್ಕೆ ನಿಲ್ಲಬೇಕಾಗಿದ್ದು ಎರಡು ತಿಂಗಳು ಅಥವಾ ದೀರ್ಘ ಕಾಲದವರೆಗೆ ಮುಂದುವರಿಯುತ್ತದೆ. ಈ ರೀತಿಯ ಸನ್ನಿವೇಶ ಎದುರಾದಾಗ ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

ತಲೆನೋವು : ಕೆಲವರಿಗೆ ಹೆರಿಗೆಯ ನಂತರ ಒತ್ತಲೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಬಿಪಿಯ ಕಾರಣಕ್ಕೆ ತಲೆನೋವು ಆವರಿಸಬಹದು. ಹೆರಿಗೆಯ ನಂತರ ಆಗುವ ಹಾರ್ಮೋನ್ ಬದಲಾವಣೆ, ಖಿನ್ನತೆಯಿಂದಲೂ ತಲೆನೋವು ಬರಬಹುದು. ತಲೆನೋವಿಗೆ ಊಟ ಮಾಡದೇ ಇದ್ದರೆ ,

ರಕ್ತನಾಳದ ಥ್ರೊಂಬೊಸಿಸ್ (ರಕ್ತ ನಾಳದಲ್ಲಿ ಗಂಟು ): ಇದು ಸಾವಿರದಲ್ಲಿ ಒಬ್ಬರಿಗೆ ಕಂಡುಬರುವ ಸಮಸ್ಯೆ. ಇದರಲ್ಲಿ ಕಾಲು ಸೆಳೆತ, ಕಾಲು ನೋವು ಸಾಮಾನ್ಯವಾಗಿರುತ್ತದೆ. ಗರ್ಭವಾಸ್ಥೆಯಿಂದಲೂ ಕಾಡುವ ಈ ಸಮಸ್ಯೆ ಹೆರಿಗೆಯ ನಂತರವೂ ಕಂಡುಬರುತ್ತದೆ. ಕಾಲು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಾಲುಗಳು ಬಿಸಿಯಾಗಿರುತ್ತವೆ . ಇದು ಮುಂದುವರೆದು ಶ್ವಾಸಕೋಶದವರೆಗೆ ವ್ಯಾಪಿಸುತ್ತದೆ. ಜೀವ ಹಾನಿಯು ಸಂಭವಿಸಬಹುದು. ಈ ಮಾಹಿತಿ ಕೇವಲ ಮಾಹಿತಿ ನೀಡಲು ಅಷ್ಟೇ. ಹೆದರುವ ಅಗತ್ಯವಿಲ್ಲ. ಯಾಕೆಂದರೆ ಇವೆಲ್ಲ ನಮ್ಮ ದೇಶದಲ್ಲಿ ಕಂಡುಬಂದಿಲ್ಲ.

ಜಾಗ್ರತೆಯಿಂದಿರಿ

 

  • ತೀವ್ರ ಪ್ರಮಾಣದ ರಕ್ತಸ್ರಾವ ಹೆಚ್ಚಿದಾಗ, ಎರಡು ಪ್ಯಾಡ್ ಗಿಂತ ಅಧಿಕ ಪ್ಯಾಡ್ ಅರ್ಧದಿನದಲ್ಲಿ ಬಳಸಿದಾಗ ವೈದ್ಯರನ್ನು ಭೇಟಿಯಾಗಿ
  • ಸ್ರಾವದ ಜೊತೆ ರಕ್ತದ ಹೆಪ್ಪು ಅಥವಾ ಗಂಟು ಹೊರಬಂದಾಗ
  • ಜ್ವರ ಬಂದಾಗ
  • ತಲೆ ತಿರುಗಿದಾಗ
  • ವಿಪರೀತ ತಲೆನೋವು ಬಂದಾಗ
  • ಮೂತ್ರ ವಿಸರ್ಜನೆ ಮಾಡುವಾಗ ಉರಿ ಮತ್ತು ತುಂಬಾ ಕಷ್ಟಕರವಾಗಿರುವುದು
  • ಬಿಳಿಸೆರಗು ಮತ್ತು ದುರ್ವಾಸನೆಯಿಂದ ಕೂಡಿರುವುದು
  • ಎದೆ ನೋವು, ಹೃಯದ ಬಡಿತ, ಉಸಿರಾಟದಲ್ಲಿ ತೊಂದರೆ
  • ವಾಂತಿಯಾಗುವುದು
  • ಕಿಬ್ಬೊಟ್ಟೆ ವಿಪರೀತ ನೋವು
  • ಸ್ತನದ ತೊಟ್ಟಿನ ನೋವು ಮತ್ತು ಸೀಳು
  • ಕಾಲು ಊತ

ಈ ಎಲ್ಲಾ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ವೈದ್ಯರನ್ನು ಸಂಪರ್ಕಿಸಿರಿ. ಯಾವುದೇ ತರದ ನಿರ್ಲಕ್ಷ್ಯ ಮಾಡದಿರಿ.

#vaginalbirth #momhealth #delivery

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.