ಕುಟುಂಬ ಯೋಜನೆ

ಕುಟುಂಬ ಯೋಜನೆ

10 Nov 2021 | 1 min Read

Medically reviewed by

Author | Articles

ಇದು ಡಿಜಿಟಲ್ ಯುಗ. ಎಲ್ಲವೂ ಧಾವಂತವಾಗಿ ಓಡುತ್ತಲೇ ಇರಬೇಕು. ಒಂದು ವೇಳೆ ನಾವು ಏನಾದರೂ ಸ್ವಲ್ಪ ಹಿಂದುಳಿದರೆ, ನಮ್ಮನ್ನು ಹಿಂದಿಕ್ಕಿ ಜನರು ಮುಂದಕ್ಕೆ ಸಾಗುತ್ತಾರೆ. ಕೆಲಸ, ಮನೆ, ಗಗನಕ್ಕೇರಿದ ಮಕ್ಕಳ ವಿಧ್ಯಾಭ್ಯಾಸದ ಫೀಸು, ಸಾಮಾನು, ಮನೆಯ ಖರ್ಚು ಎಲ್ಲವೂ ಗಣನೆಗೆ ತೆದುಕೊಂಡಾಗ ಹಿಂದೆ ಇದ್ದ ಅವಿಭಕ್ತ ಕುಟುಂಬ ಮಾಯವಾಗಿ ಈಗ ಮನೆಯಲ್ಲಿ ಒಂದೆರಡು ಮಕ್ಕಳಿಗೆ ಸೀಮತವಾಗಿದೆ. ದೇಶದ ಜನಸಂಖ್ಯೆಯಂತೂ ನಾಗಾಲೋಟದಲ್ಲಿ ಏರುತ್ತಲೇ ಇದೆ. ಹೀಗಿರುವಾಗ ನಾವು ನಮ್ಮ ಕುಟುಂಬದ ಬಗ್ಗೆ ಯೋಚಿಸಿ, ಯೋಜನೆ ಹಾಕಿಕೊಂಡರೆ ಮಾತ್ರ ಮುಂದಿನ ಭವಿಷ್ಯದ ಬದುಕು ಹಸನಾಗಿರುತ್ತದೆ. ಮಕ್ಕಳು ನಮಗೆ ಆಸ್ತಿ ಇದ್ದ ಹಾಗೆ. ಒಂದು ಮಗುವಿಗೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಿ ಮಗು ಚೆನ್ನಾಗಿ ಬೆಳೆಯಬೇಕಾದರೆ ನಾವು ಕುಟುಂಬ ಯೋಜನೆಯನ್ನು ಅಳವಡಿಸಲೇ ಬೇಕು. ಬೇಬಿಚಕ್ರ ಕುಟುಂಬ ಯೋಜನೆಯ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ.

ಕುಟುಂಬ ಎಂದರೇನು ಮತ್ತು ಪ್ರಯೋಜನಗಳು

ಅನೇಕ ದಂಪತಿಗಳು ತಮ್ಮ ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ಪರಿಮಿತಗೊಳಿಸಿಕೊಳ್ಳಲು ಬಯಸುತ್ತಾರೆ. ಇಲ್ಲವೇ ಮಕ್ಕಳನ್ನು ಪಡೆಯುವ ಮೊದಲು ಸ್ವಲ್ಪ ಕಾಲ ಕಾಯಲು ಬಯಸುತ್ತಾರೆ. ಅದೇ ರೀತಿಯಲ್ಲಿ ನವವಿವಾಹಿತ ದಂಪತಿಗಳು ಮಕ್ಕಳನ್ನು ಪಡೆಯುವಲ್ಲಿ ಎರಡರಿಂದ ಮೂರು ವರ್ಷ ವಿಳಂಬ ಮಾಡಲು ಇಚ್ಛಿಸಬಹುದು. ದಂಪತಿಗಳು ತಮ್ಮ ಕುಟುಂಬದ ಗಾತ್ರವನ್ನು ಕುಗ್ಗಿಸಲು ಅನೇಕ ವಿಧಾನಗಳಿವೆ. ಗರ್ಭಧಾರಣೆಯನ್ನು ತಡೆಗಟ್ಟಲು ಯಾವುದೇ ಕುಟುಂಬ ಯೋಜನಾ ವಿಧಾನಗಳನ್ನು ಬಳಸುವ ಮೂಲಕ, ಕುಟುಂಬದಲ್ಲಿನ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಳಕಂಡ ಪ್ರಯೋಜನಗಳು ಲಭ್ಯವಾಗುತ್ತದೆ.

 

  • ತಾಯಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಸ್ತ್ರೀಯರಿಗೆ ಹೆರಿಗೆಯ ಸಂದರ್ಭದಲ್ಲಿ ಮರಣ ಸಂಭವಿಸುವ ದೊಡ್ಡ ಅಪಾಯವಿದೆ.
  • ಹದಿಹರೆಯದ ತರುಣಿಯರು ಚಿಕ್ಕವಯಸ್ಸಿನಲ್ಲಿಯೇ ವಿವಾಹವಾದರೆ, ಅಂದರೆ 18 ವರ್ಷಕ್ಕೆ ಮೊದಲೇ ಆದರೆ, ಅತೀ ಶೀಘ್ರದಲ್ಲಿಯೇ ಅಗರ್ಭಧರಿಸುತ್ತಾರೆ. ಅಲ್ಲದೆ ಇಂತಹ ತಾಯಂದಿರಿಗೆ ಹುಟ್ಟುವ ಮಕ್ಕಳಿಗೆ ಜನನಕಾಲದ ಕಡಿಮೆ ತೂಕ ಇರುತ್ತದೆ ಮತ್ತು ಜನನದ ಸಮಯದಲ್ಲಿ ಮೃತವಾಗುವ ಸಂಭವ ಇಲ್ಲವೇ ಒಂದು ವರ್ಷದ ಒಳಗೆ ಮೃತವಾಗುವ ಸಂಭವ ಹೆಚ್ಚಿರುತ್ತ್ತದೆ. ಒಬ್ಬಳು ಸ್ತ್ರೀ 36 ತಿಂಗಳುಗಳಿಗಿಂತ ಕಡಿಮೆ ಅಂತರದಲ್ಲಿ ಹತ್ತಿರ ಹತ್ತಿರದಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದರೆ ಅವಳ ಆರೋಗ್ಯ ಮತ್ತು ಅವಳ ಮಕ್ಕಳ ಆರೋಗ್ಯಕ್ಕೆ ಹಾನಿಯಗುತ್ತದೆ. ಕಡಿಮೆ ಮಕ್ಕಳಿರುವ ಕುಟುಂಬದಲ್ಲಿ ಮಕ್ಕಳ ನಿರ್ವಹಣೆ, ಅವರ ವಿದ್ಯಾಭ್ಯಾಸ, ಅವಳ ಬೇಡಿಕೆಗಳನ್ನು ಪೂರೈಸಲು ತುಂಬಾ ಶಕ್ತರಾಗಿರುತ್ತಾರೆ.

ಇತರ ಪ್ರಯೋಜನಗಳು

  • ಕೆಲವು ಗರ್ಭನಿರೋಧಕಗಳು, ಅಂದರೆ ಕಾಂಡೋಮ್‍ಗಳು (ಪುರುಷರು ಮತ್ತು ಮಹಿಳೆಯರು ಇಬ್ಬರೂ ಉಪಯೋಗಿಸುವ ಕಾಂಡೋಮ್‍ಗಳು ಎಚ್‍ಐವಿ / ಏಡ್ಸ್ ಸೇರಿದಂತೆ ಜನನಾಂಗದ ದ್ವಾರದ ಸೋಂಕುಗಳ ವಿರುದ್ಧ ರಕ್ಷಣೆಯನ್ನು ಕೊಡುತ್ತವೆ ಮತ್ತು ಅನಪೇಕ್ಷಿತ ಗರ್ಭಧಾರಣೆಗಳನ್ನೂ ತಡೆಯುತ್ತವೆ.
  • ಕುಟುಂಬ ಯೋಜನೆಯ ವಿಧಾನಗಳ ಬಳಕೆಯು ಮಹಿಳೆಯರಿಗೆ ತಮ್ಮ ದೇಹದ ಮೇಲೆ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಹೆಚ್ಚು ಮಕ್ಕಳನ್ನು ಪಡೆಯಲು ಅವರಿಗೆ ಇಷ್ಟವಿಲ್ಲದಿದ್ದರೆ, ಅವರು ವಿವೇಚನೆಯೊಡನೆ ಗರ್ಭನಿರೋಧಕಗಳನ್ನು ಬಳಸಬಹುದು.
    ಬೇಡದ ಗರ್ಭ ತಡೆಗಟ್ಟುವ ವಿಧಾನ

ಕಾಂಡೋಮ್ಗಳು (ನಿರೋಧ್)

ಇವು ಅನಪೇಕ್ಷಿತ ಗರ್ಭಧಾರಣೆಯನ್ನು ಮತ್ತು ಎಚ್‍ಐವಿ/ಏಡ್ಸ್ ಸೇರಿದಂತೆ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಯುತ್ತವೆ. ಪ್ರತಿಬಾರಿ ಲೈಂಗಿಕ ಸಂಪರ್ಕ ಮಾಡುವಾಗಲೂ ಒಂದು ಹೊಸ ಕಾಂಡೋಮ್‍ ಅನ್ನು ಬಳಸಬೇಕು. ಅನಪೇಕ್ಷಿತ ಗರ್ಭಧಾರನೆಯನ್ನು ತಡೆಯಲು ಸರಿಯಾದ ಕಾಂಡೋಮ್‍ಗಳನ್ನು ತಪ್ಪದೇ ಬಳಸುವುದು ಅತ್ಯಗತ್ಯ.

ಕಾಪರ್ – ಟಿ

ಇದೊಂದು ಚಿಕ್ಕ ಟಿ-ಆಕಾರದಲ್ಲಿದ್ದು ಗರ್ಭಕೋಶದೊಳಗೆ ಅಳವಡಿಸುವ ಸಾಧನ (ಇಂಟ್ರಾ-ಯೂಟೆರೈನ್ ಡಿವೈಸ್ – ಐಯುಡಿ). ಇದನ್ನು ಬಗ್ಗಿಸುವ ಹಾಗೆ ಪ್ಲಾಸ್ಟಿಕ್‍ನಿಂದ ಮಾಡಿ ಅದರ ಕಾಂಡದ ಸುತ್ತ ಸೂಕ್ಷ್ಮವಾದ ತಾಮ್ರದ ತಂತಿಯನ್ನು ಸುತ್ತಲಾಗಿರುತ್ತದೆ. ಕಾಂಡದಿಂದ ಎರಡು ಪ್ಲಾಸ್ಟಿಕ್ ದಾರಗಳು ಇಳಿಬಿದ್ದಿರುತ್ತವೆ. ಗರ್ಭಕೋಶದೊಳಗೆ ಅಳವಡಿಸಿದ ನಂತರ ಕಾಪರ್-ಟಿ ಸ್ವಸ್ಥಾನದಲ್ಲಿ ಇರುತ್ತದೆ ಮತ್ತು ಗರಿಷ್ಠ ಹತ್ತು ವರ್ಷಗಳ ಕಾಲ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಕಾಪರ್-ಟಿಗಳು ಇದಕ್ಕಿಂತ ಕಡಮೆ ಅವಧಿಗೂ ಕೆಲಸ ಮಾಡುತ್ತವೆ. ಕೆಲವರಿಗೆ ಕಾಪರ್ ಟಿ ಯ ಬಳಕೆಯು ನೋವು, ಅಲರ್ಜಿ, ಬಿಳಿಸೆರಗು ಬರಬಹುದು. ಸಮಾಲೋಚಿಸಿ ಇದರ ಬಗ್ಗೆ ಯೋಚನೆ ಹಮ್ಮಿಕೊಳ್ಳಿ.

ಕಾಪರ್- ಟಿ ಯನ್ನು ತೆಗೆಯಬಹುದು.

ಹತ್ತು ವರ್ಷಗಳ ನಂತರ ಅಥವಾ ಒಬ್ಬಳು ಮಹಿಳೆ ಮಗುವನ್ನು ಪಡೆಯಲು ಬಯಸಿದರೆ ಅಥವಾ ಅತಿಯಾದ ರಕ್ತಸ್ರಾವ, ಕೆಳಕಿಬ್ಬೊಟ್ಟೆಯ ನೋವು ಅಥವಾ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡರೆ ಕಾಪರ್-ಟಿಯನ್ನು ತೆಗೆಯಬೇಕು. ಸೂಕ್ತವಾದ ಸೌಕರ್ಯವಿರುವ ಸ್ಥಳದಲ್ಲಿ ಕಾಪರ್-ಟಿಯನ್ನು ತೆಗೆಸಲು ನೀವು ಆ ಮಹಿಳೆಯರಿಗೆ ಸಹಾಯ ಮಾಡಬೇಕು.

ತಡೆ ವಿಧಾನಗಳು

ವೀರ್ಯಾಣುವು ಅಂಡವನ್ನು ತಲಪದಿದ್ದಲ್ಲಿ ಗರ್ಭಧಾರಣೆಯನ್ನು ತಡೆಗಟ್ಟಬಹುದು. ಉದಾಹರಣೆಗೆ ಒಬ್ಬ ಪುರುಷನು ಒಂದು ಕಾಂಡೋಮ್ ಅನ್ನು ಬಳಸಿದರೆ, ವೀರ್ಯಾಣುವು ಕಾಂಡೋಮಿನಲ್ಲಿಯೇ ಉಳಿದುಬಿಡುತ್ತದೆ. ಆದ್ದರಿಂದ ವೀರ್ಯಾಣುಗಳು ಗರ್ಭಾಶಯದಲ್ಲಿರುವ ಅಂಡವನ್ನು ತಲಪಲು ಅಸಮರ್ಥವಾಗುತ್ತವೆ. ಹೀಗೆ ಗರ್ಭಧಾರಣೆಯನ್ನು ತಡೆಗಟ್ಟಲಾಗುತ್ತದೆ.

ಹಾರ್ಮೋನಿನ ವಿಧಾನಗಳು

ಈ ವಿಧಾನವು ಸ್ತ್ರೀಯ ಅಂಡಾಶಯವು ಅಂಡವನ್ನು ಬಿಡುಗಡೆ ಮಾಡುವುದನ್ನು ತಡೆಯುತ್ತದೆ ಮತ್ತು ವೀರ್ಯಾಣುವು ಅಂಡವನ್ನು ತಲುಪುವುದು ಕಷ್ಟವಾಗುವಂತೆ ಮಾಡುತ್ತದೆ ಹಾಗೂ ಗರ್ಭಾಶಯದ ಗೋಡೆಗಳು ಒಂದು ಗರ್ಭಧಾರಣೆಗೆ ಬೆಂಬಲ ನೀಡದಂತೆ ತಡೆಯುತ್ತದೆ. ಉದಾಹರಣೆಗೆ ಮಾಲ್ ಎನ್ ಮಾತ್ರೆಗಳು
ಐಯುಡಿಗಳು
ಇವು ಗರ್ಭಾಶಯದೊಳಗೆ ಅಳವಡಿಸಲಾಗುವ ಸಾಧನಗಳು. ಅವು ವೀರ್ಯಾಣು ಮತ್ತು ಅಂಡ ಜೊತೆಗೂಡುವುದನ್ನು ತಡೆಯುತ್ತವೆ ಮತ್ತು ಅಂಡಾಣುವು ಗರ್ಭಾಶಯದ ಗೋಡೆಗೆ ಅಂಟಿಕೊಳ್ಳುವುದನ್ನು ತಡೆಯುತ್ತವೆ.

ಸಹಜ ವಿಧಾನಗಳು

ಗರ್ಭಧಾರಣೆಗಳನ್ನು ತಡೆಗಟ್ಟುವ ಸಹಜವಾದ ವಿಧಾನಗಳೂ ಇವೆ. ಆದರೆ ಈ ವಿಧಾನವನ್ನು ಅಳವಡಿಸಿಕೊಳ್ಳಲು ಮಹಿಳೆಯು ತನ್ನ ಮುಟ್ಟಿನ ಅವಧಿಯಲ್ಲಿ ತನ್ನ ದೇಹದಲ್ಲಾಗುವ ಅನೇಕ ಬದಲಾವಣೆಗಳನ್ನು ಕುರಿತು ಕಲಿಯಬೇಕಾಗುತ್ತದೆ. ಫಲವಂತಿಕೆಯ ಅರಿವು ಎಂದರೆ ಒಬ್ಬಳು ಮಹಿಳೆಯು ತನ್ನ ಮುಟ್ಟಿನ ಅವಧಿಯಲ್ಲಿ ಫಲವಂತಿಕೆಯ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಮುಕ್ತಾಯವಾಗುತ್ತದೆ ಎನ್ನುವುದನ್ನು ಹೇಳುವುದನ್ನು ಕಲಿತುಕೊಳ್ಳುವುದು. ಸಾಮಾನ್ಯವಾಗಿ ಒಬ್ಬಳು ಮಹಿಳೆಯ ಮುಟ್ಟಿನ ಚಕ್ರವು 28 ದಿನಗಳಿರುತ್ತದೆ. ಅವಳು ಫಲವಂತಿಕೆಯ ದಿನಗಳಲ್ಲಿ (ಚಕ್ರದ 8-19) ಸಂಭೋಗ ನಡೆಸಿದರೆ ಗರ್ಭ ಧರಿಸುವ ಸಂಭವವಿರುತ್ತದೆ. ಫಲವಂತಿಕೆಯ ನಿಯಂತ್ರಣದ ಸಹಜ ವಿಧಾನವು ಕೆಳಕಂಡವುಗಳನ್ನು ಒಳಗೊಳ್ಳುತ್ತದೆ.

1. ಸಂಭೋಗವನ್ನು ನಡೆಸದಿರುವುದು.
2. ಹಿಂದಕ್ಕೆ ತೆಗೆದುಕೊಳ್ಳುವುದು
3. ಸುರಕ್ಷಿತ ಅವಧಿಯ ವಿಧಾನ
4. ಗರ್ಭಕೋಶದ ಕಂಠದ ಲೋಳೆಯ ವಿಧಾನ

ಸುರಕ್ಷಿಣ ಅವಧಿ

26 ಮತ್ತು 32 ದಿನಗಳ ಮುಟ್ಟಿನ ಆವರ್ತವನ್ನು ಹೊಂದಿರುವ ಮಹಿಳೆಯರು, ಮುಟ್ಟಿನ ಆವರ್ತದ ಪ್ರಾರಂಭವನ್ನು ಒಂದನೆಯ ದಿನ ಎಂದು ಲೆಕ್ಕ ಹಿಡಿದು, 8 ರಿಂದ 19ನೇ ದಿನಗಳವರೆಗೆ ಅಸುರಕ್ಷಿತ ಸಂಭೋಗವನ್ನು ನಿವಾರಿಸುವ ಮೂಲಕ ಗರ್ಭಧರಣೆಯನ್ನು ತಡೆಗಟ್ಟಬಹುದು. ನೀವು ಮಾನಕ ದಿನಗಳ ವಿಧಾನವನ್ನು ಕುರಿತು ನಿಮ್ಮ ಎಎನ್‍ಎಂ ಅವರಿಂದ ಇನ್ನೂ ಹೆಚ್ಚು ವಿವರಗಳನ್ನು ತಿಳಿಯಬಹುದು.

ಗರ್ಭಕೋಶದ ಕಂಠದ ಲೋಳೆಯ ವಿಧಾನ

ಮಹಿಳೆಯ ಗರ್ಭಕೋಶದ ದ್ವಾರದಲ್ಲಿ, ಗರ್ಭಕೋಶದ ಕಂಠದ ಲೋಳೆ ಎಂಬ ಅಂಟು ದ್ರವ ಇರುತ್ತದೆ. ಅಂಡವಿಸರ್ಜನೆಯ ಎರಡು ದಿನ ಮೊದಲು ಮತ್ತು ಅನಂತರ ಈ ಲೋಳೆಯು ನೀರಾಗಿಯೂ ಅಂಟಂಟಾಗಿಯೂ ಇರುತ್ತದೆ. ಇದು ವೀರ್ಯಾಣುವು ಸುಲಭವಾಗಿ ಸಾಗಲು ಅವಕಾಶ ಮಾಡಿಕೊಡುತ್ತದೆ. ಇದು ಫಲವಂತಿಕೆಯ ಅವಧಿ. ಇತರ ದಿನಗಳಲ್ಲಿ ಲೋಳೆಯು ಗಟ್ಟಿಯಾಗಿದ್ದು, ಒಣಗಿದಂತಿರುತ್ತದೆ ಮತ್ತು ಎಳೆದಾಗ ಗುಂಡಾಗುತ್ತದೆ. ಈ ದಿನಗಳು ಫಲವಂಇಕೆಯ ದಿನಗಳಲ್ಲ.

ಈ ಸಹಜ ವಿಧಾನಗಳಿಗೆ ಅಪಾರವಾದ ಸ್ವಯಂ ನಿಯಂತ್ರಣ ಬೇಕು ಮತ್ತು ಇವುಗಳಲ್ಲಿ ವೈಫಲ್ಯದ ಪ್ರಮಾಣ ಅತ್ಯಧಿಕವಾಗಿರುತ್ತದೆ. ಆದ್ದರಿಂದ ಮಹಿಳೆಯು ಗರ್ಭಧಾರಣೆಯನ್ನು ಬಯಸದಿದ್ದರೆ ಕಡಮೆ ವೈಫಲ್ಯದ ಪ್ರಮಾಣವಿರುವ ಇತರ ಗರ್ಭನಿರೋಧಕ ವಿಧಾನಗಳನ್ನು ಅನುಸರಿಸುವುದು ಸೂಕ್ತ.

#familyplanning #momhealth

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.