ಪ್ರಸವದ ನಂತರ ಸ್ತನದ ಆರೋಗ್ಯ ಹೀಗಿರಲಿ

ಪ್ರಸವದ ನಂತರ ಸ್ತನದ ಆರೋಗ್ಯ ಹೀಗಿರಲಿ

11 Nov 2021 | 1 min Read

Medically reviewed by

Author | Articles

ಪ್ರತೀ ಹೆಣ್ಣಿಗೆ ತಾಯ್ತನ ಎಂಬುದು ಒಂದು ಕೊಡುಗೆ. ಮಗು ಜನಿಸಿದ ತಕ್ಷಣ ಇಡೀ ವಿಶ್ವವನ್ನೇ ಗೆದ್ದಂತೆ ವರ್ತಿಸುತ್ತಾಳೆ. ಕಂದನ ಮುಖವನ್ನು ನೋಡಿ, ಮಗುವಿನ ಆರೈಕೆಯಲ್ಲಿ ತನ್ನ ಬಗ್ಗೆ ಮರೆತೇ ಹೋಗುತ್ತಾಳೆ. ಹೆರಿಗೆಯ ನಂತರೂ ನೀವು ಆರೋಗ್ಯವಾಗಿದ್ದರೆ ಮಗು ಕೂಡ ಆರೋಗ್ಯವಾಗಿ ಇರುವುದು. ಒಂದು ವೇಳೆ ನೀವು ನಿಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯವಹಿಸಿದರೆ , ನಿಮ್ಮ ಮಗು ಕೂಡ ಅನಾರೋಗ್ಯದಿಂದ ನರಳುತ್ತದೆ. ಮಗುವಿನ ಸಂಪೂರ್ಣ ಆರೋಗ್ಯ ತಾಯಿಯನ್ನೂ ಅವಲಂಭಿಸಿರುವುದರಿಂದ ಪ್ರತೀ ತಾಯಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಬೇಬಿಚಕ್ರ ನಿಮಗಾಗಿ ನೀಡುತ್ತಿದೆ. ಹೆರಿಗೆಯ ನಂತರ ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ತಾಯಿಯ ಎದೆಹಾಲು ಒದಗಿಸಲು ನಮ್ಮ ದೇಹದ ಪ್ರಕೃತಿ ಹಾರ್ಮೋನಿನ ಸ್ರವಿಕೆಯಿಂದ ಹಾಲು ಉತ್ಪತ್ತಿಯಾಗುತ್ತದೆ. ಮಗುವಿಗೆ ಎಷ್ಟು ಸಾಧ್ಯವೋ ಅಷ್ಟು ಹಾಲನ್ನು ತಾಯಿ ನೀಡಬಹುದು. ಕೆಲವೊಮ್ಮೆ ಹಾಲು ಹೇರಳವಾದಾಗ ಸೋರಿಕೆಯಾಗುತ್ತದೆ.

ಸ್ರವಿಕೆಯಿಂದ ಸ್ತನದ ಆಕಾರ ಹಿರಿದಾಗುತ್ತದೆ. ಒಂದು ರೀತಿಯಲ್ಲಿ ಜಗ್ಗಿದ ಹಾಗೆ ಆಗುತ್ತದೆ. ಅವರಿಗೆ ಆರಂಭದಲ್ಲಿ ಹಾಲಿನ ಬಣ್ಣ ವ್ಯತ್ಯಾಸವಿದ್ದು, ಸ್ತನದ ತೊಟ್ಟಿನಿಂದ ಸೋರುತ್ತಿರುತ್ತದೆ. ಇದು ಮಗುವಿನ ಜನನಕ್ಕೆ ಮುಂಚಿತವಾಗಿ ಆಗಬಹುದು ಅಥವಾ ಪ್ರಸವದ ನಂತರವೂ ಆಗಬಹುದು. ಹಾಲಿನ ಹೇರಳ ಪ್ರಮಾಣದ ಉತ್ಪಾದನೆಯಿಂದ ಈ ರೀತಿ ಆಗುತ್ತದೆ ಅಥವಾ ಕೆಲವೊಮ್ಮೆ ಸೋಂಕಿನಿಂದ ಹಾಲಿನ ಬಣ್ಣ ಬದಲಾಗಿರುತ್ತದೆ. ಹಾಲಿನ ಉತ್ಪಾದನೆ ಹೆಚ್ಚಾದಂತೆ ಸ್ತನದ

ಆಕಾರ ದೊಡ್ಡದಾಗುತ್ತದೆ.

ಗುವಿಗೆ ಹಾಲುಣಿಸುವ ಆರಂಭದ ದಿನಗಳಲ್ಲಿ ವಿಪರೀತವಾದ ಸ್ತನದ ನೋವು ಕಾಡಬಹುದು. ಅದೇ ರೀತಿ ಸ್ತನದ ತೊಟ್ಟಿನ ಸೀಳು, ನೋವು ಕಾಣಿಸುತ್ತದೆ. ತುಂಬಾ ನೋವ್ ಇರುವುದರಿಂದ ಮಗುವಿಗೆ ಹಾಲುಣಿಸಲು ಸಾಧ್ಯವಾಗುವುದಿಲ್ಲ. ಮಗು ಹಾಲು ಕುಡಿಯಲು ಆರಂಭಿಸಿದರೆ, ಹಾಲಿನ ಉತ್ಪನ್ನ ಹೆಚ್ಚಾಗಲಿ ಆಗಾಗ ಸೋರುತ್ತಿರುತ್ತದೆ. ನಿನ್ನತ್ರ ಬಗ್ಗೆ ಕೂಲಂಕುಶವಾಗಿ ತಿಳಿಯೋಣ.

ಸ್ತನದ ಸೋರುವಿಕೆ

ಕಮ್ಮಿ ಮಗುವಿಗೆ ಹಾಲುಣಿಸಲು ಆರಂಭಿಸಿದ ನಂತರ ಎದೆ ಹಾಲು ಹೆಚ್ಚಾದಾಗ ತನ್ನಿಂದತಾನೇ ಸ್ಥಾನದಲ್ಲಿ ಎದೆಹಾಲು ಸೋರುತ್ತಿರುತ್ತದೆ. ಇದನ್ನು ನಿಲ್ಲಿಸಲು ಸಾಧ್ಯವಿಲ್ಲವಾದರೂ, ನರ್ಸಿಂಗ್ ಪ್ಯಾಡ್ ಬಳಸುವುದು ಉತ್ತಮ. ನರ್ಸಿಂಗ್ ಪ್ಯಾಡನ್ನು ಸೋಂಕು ತಗುಲದಂತೆ ಆಗಾಗ ಬದಲಿಸುತ್ತಿರಿ.

ಗಂಟುಗಳಾಗುವುದು.

ಕೆಲವೊಮ್ಮೆ ಹಾಲು ಮುಗಿಸಿದ ನಂತರ ಹೆಚ್ಚಾದ ಹಾಲು ಗಂಟುಗಳಾಗಿ ಸ್ಥಾನದಲ್ಲಿ ಉಳಿದುಬಿಡುತ್ತದೆ. ಇದು ವಿಪರೀತವಾಗಿ ನೋವು ಕೊಡುವುದರಿಂದ, ಬಿಸಿ ನೀರಿನ ಕಂಪ್ರೆಸರ್ ಬಳಸಿ ಹಾಲನ್ನು ಹೊರಗೆ ತೆಗೆಯಬೇಕು. ಕೆಲವೊಮ್ಮೆ ಸ್ಥಾನದಲ್ಲಿ ಸೀಳು ಉಂಟಾಗಿ ವಿಪರೀತ ನೋವು ಅನುಭವಿಸುತ್ತೀರಿ. ಕೊಬ್ಬರಿ ಎಣ್ಣೆಯನ್ನು ಸ್ತನದ ತೊಟ್ಟಿಗೆ ಲೇಪಿಸಿಕೊಂಡು ಬಂದರೆ ನೋವು ಮಾಯವಾಗುತ್ತದೆ.

 

  • ದಿನದ 24 ಗಂಟೆಗಳು ನಿಮಗೆ ಸರಿಹೊಂದುವ ಒಳ ಉಡುಪನ್ನು ಧರಿಸಿ.
  • ಬಿಸಿನೀರಿನ ಸ್ನಾನ ಮಾಡುವುದರಿಂದ, ಬಿಸಿನೀರು ಬಟ್ಟೆಯನ್ನು ಅಂತ ಸ್ತನದ ಮೇಲೆ ಇಡುವುದರಿಂದ ಹಾಲಿನ ಪರಿಚಲನೆ ಸರಾಗವಾಗುತ್ತದೆ.
  • ಒಂದು ವೇಳೆ ಹಾಲಿನ ಪ್ರಮಾಣ ಕಡಿಮೆ ಇದ್ದರೆ ಸಬ್ಸಿಗೆ ಸೊಪ್ಪು ,ನುಗ್ಗೆಕಾಯಿ ಸೊಪ್ಪು ಸೂಪ್ ಮಾಡಿ ಕುಡಿಯಿರಿ.
  • ಮಗುವಿಗೆ ಹಾಲುಣಿಸಿದ ನಂತರ ಕೋಲ್ಡ್ ಕಂಪ್ರಿಸರ್ ಸ್ತನದ ಮೇಲೆ ಇಡಿ.

​ಹೆರಿಗೆಯ ನಂತರ ಈ ಸಮಸ್ಯೆಗಳು ಕಂಡುಬರುತ್ತದೆ…

  • ಮಹಿಳೆಯರು ತಮ್ಮ ಹೆರಿಗೆಯ ಸಂದರ್ಭದಲ್ಲಿ ಒಂದು ಅಥವಾ ಮೂರು ತಿಂಗಳ ಒಳಗೆ ಸಾಧಾರಣವಾಗಿ ಸ್ತನಗಳ ಸೋಂಕುಗಳಿಗೆ ಗುರಿಯಾಗುತ್ತಾರೆ. ಕೆಲವು ಮಹಿಳೆಯರಿಗೆ ಋತುಬಂಧದ ನಂತರ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಲುಣಿಸುವ ಸಂದರ್ಭದಲ್ಲಿ ಈ ಸಮಸ್ಯೆ ಬಹುತೇಕರಿಗೆ ಸಾಮಾನ್ಯ.
  • ಏಕೆಂದರೆ ಮಗು ಹಾಲು ಕುಡಿಯುವ ಸಂದರ್ಭದಲ್ಲಿ ಅದರ ಬಾಯಿಂದ ಹೊರ ಬರುವ ಬ್ಯಾಕ್ಟೀರಿಯಾ ನೇರವಾಗಿ ಮೊಲೆ ತೊಟ್ಟುಗಳ ಮೂಲಕ ಹಾಲಿನ ಗ್ರಂಥಿಯನ್ನು ಪ್ರವೇಶ ಮಾಡುತ್ತದೆ. ಇನ್ನು ಕೆಲವು ಮಹಿಳೆಯರಿಗೆ ಸ್ತನಗಳಲ್ಲಿ ಹಾಲು ಹಾಗೆ ಉಳಿದು ಸೋಂಕಿಗೆ ಕಾರಣವಾಗಬಹುದು.
  • ಸ್ತನಗಳ ಇನ್ಫೆಕ್ಷನ್ ಉಂಟಾದರೆ ಕಂಡು ಬರುವ ರೋಗ ಲಕ್ಷಣಗಳು

 

ಸಾಮಾನ್ಯವಾಗಿ ಸ್ತನಗಳ ಸೋಂಕು ಕಂಡುಬರುವ ಯಾವುದೇ ಮಹಿಳೆಯರಿಗೆ ಈ ಕೆಳಗಿನ ರೋಗ ಲಕ್ಷಣಗಳು ಕಂಡು ಬರುತ್ತವೆ ಎಂದು ಹೇಳುತ್ತಾರೆ. ಆಗಾಗ ಎದುರಾಗುವ ದೈಹಿಕ ಆಯಾಸ

  • ಸ್ತನಗಳು ಇದ್ದಕ್ಕಿದ್ದಂತೆ ಊದಿಕೊಳ್ಳುವುದು
  • ಮುಟ್ಟಿದರೆ ಸ್ತನಗಳು ತುಂಬಾ ಮೆತ್ತನೆಯ ಅನುಭವ ಉಂಟಾಗುವುದು
  • ಜ್ವರ ಕಂಡು ಬರುವುದು
  • ಮೈಕೈ ನೋವು ಕಾಣಿಸುವುದು
  • ಚರ್ಮ ಕೆಂಪಾಗುವುದು
  • ಸ್ತನದಲ್ಲಿ ಕೆರೆತ ಉಂಟಾಗುವುದು
  • ಸ್ತನದ ತೊಟ್ಟಿಂದ ದ್ರವ ಸದಾ ಹೊರಬರುವುದು
  • ಸ್ತನದ ಚರ್ಮ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುವುದು
  • ಮೈ ನಡುಕ ಬರುವುದು
  • ನೀವು ನಿಮ್ಮ ಮಗುವಿಗೆ ಹಾಲು ಕುಡಿಸುವ ಸಂದರ್ಭದಲ್ಲಿ ಅಥವಾ ಸಾಮಾನ್ಯ ಸಂದರ್ಭಗಳಲ್ಲಿ ಒಂದು ವೇಳೆ ನಿಮ್ಮ ಸ್ತನಗಳ ಭಾಗದಲ್ಲಿ ಗಂಟುಗಳು ಕಂಡುಬಂದರೆ, ತಕ್ಷಣವೇ ನಿರ್ಲಕ್ಷ ಮಾಡದಂತೆ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಮಾಹಿತಿ ತಿಳಿಸಿ.
  • ಸ್ತನಗಳ ಗಾತ್ರವನ್ನು ನೈಸರ್ಗಿಕವಾಗಿ ಹೀಗೆ ಹೆಚ್ಚಿಸಬಹುದು
  • ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸ್ತನಗಳಲ್ಲಿ ಹಾಲು ಹಾಗೆ ಉಳಿಯುವಂತೆ ಮಾಡಿಕೊಳ್ಳಬೇಡಿ. ಸಂಪೂರ್ಣವಾಗಿ ಸ್ತನಗಳಿಂದ ಹಾಲು ಹೊರಬರುವಂತೆ ಮಾಡಿ. ಈ ಸಂದರ್ಭದಲ್ಲಿ ಸಾಧ್ಯವಾದರೆ ನೀವು ಬ್ರೆಸ್ಟ್ ಪಂಪ್ ಸಹ ಬಳಕೆ ಮಾಡಬಹುದು.
  • ಸ್ತನಗಳ ನೋವಿನಿಂದ ಪಾರಾಗಬೇಕಾದರೆ, ಒಂದು ಬಿಸಿಯಾದ ಒದ್ದೆ ಬಟ್ಟೆಯನ್ನು ಸ್ತನಗಳ ಮೇಲ್ಭಾಗದಲ್ಲಿ ಸುಮಾರು 15 ನಿಮಿಷಗಳ ಕಾಲ ಇರಿಸಿ. ಇದು ಸ್ವಲ್ಪ ಮಟ್ಟಿಗೆ ನಿಮಗೆ ಪರಿಹಾರ ಸಿಗುತ್ತದೆ.
  • ಯಾವುದೇ ಕಾರಣಕ್ಕೂ ನಿಮ್ಮ ದೇಹ ನಿರ್ಜಲೀಕರಣ ಸಮಸ್ಯೆಗೆ ಒಳಗಾಗದಂತೆ ನೋಡಿಕೊಳ್ಳಿ. ಪ್ರತಿದಿನ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಏಕೆಂದರೆ ಸ್ತನಗಳ ಇನ್ಫೆಕ್ಷನ್ ಉಂಟಾಗಿರುವವರಿಗೆ ನಿರ್ಜಲೀಕರಣ ಸಮಸ್ಯೆ ಮತ್ತಷ್ಟು ತೊಂದರೆ ತಂದುಕೊಡುವ ಸಾಧ್ಯತೆ ಇರುತ್ತದೆ.
  • ಸಮತೋಲನವಾದ ಆಹಾರ ಪದ್ಧತಿ ರೂಢಿಸಿಕೊಳ್ಳಿ. ನೀವು ಸೇವನೆ ಮಾಡುವ ಆಹಾರಗಳಲ್ಲಿ ಯಾವುದೇ ಪೌಷ್ಟಿಕಾಂಶಗಳ ಕೊರತೆ ಉಂಟಾಗಬಾರದು. ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಿ.
  • ಸ್ತನಗಳನ್ನು ಸ್ವಚ್ಛ ಮಾಡುವಾಗ ಯಾವುದೇ ಕಾರಣಕ್ಕೂ ತುಂಬಾ ಗಡಸ್ಸು ಇರುವ, ಹೆಚ್ಚಿಗೆ ಪ್ರಭಾವ ಹೊಂದಿರುವ ಸೋಪು ಬಳಕೆ ಮಾಡಬೇಡಿ. ರಾಸಾಯನಿಕ ಹೆಚ್ಚಿರುವ ಸೋಪಿನಿಂದ ಯಾವಾಗಲೂ ಸ್ತನದ ತೊಟ್ಟುಗಳನ್ನು ಸ್ವಚ್ಛ ಮಾಡಲು ಮುಂದಾದರೆ ಅದರಿಂದಲೂ ಸಹ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
  • ನಿಮ್ಮ ಆಹಾರ ಪದ್ಧತಿಯಲ್ಲಿ ಹಾಲು, ಕಡಲೆ ಬೀಜ, ಮತ್ತು ಸಣ್ಣ ಪ್ರಮಾಣದಲ್ಲಿ ಮಾಂಸಾಹಾರ, ಸಸ್ಯಹಾರಿಗಳಾಗಿದ್ದರೆ ಫ್ಲಾಕ್ಸ್ ಸೀಡ್ಸ್ ಗಳನ್ನು ತಪ್ಪದೇ ಸೇವನೆ ಮಾಡಿ. ಇದು ನಿಮ್ಮ ದೇಹಕ್ಕೆ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಅಂಶವನ್ನು ಒದಗಿಸುತ್ತದೆ. ಸ್ತನಗಳ ಕ್ಯಾನ್ಸರ್ ಸಮಸ್ಯೆ ಕಂಡು ಬರದಂತೆ ನೋಡಿಕೊಳ್ಳುತ್ತದೆ.
  • ಯಾವುದೇ ಕಾರಣಕ್ಕೂ ತುಂಬಾ ಬಿಗಿಯಾದ ಬ್ರಾಗಳನ್ನು ಧರಿಸಬೇಡಿ. ಇದು ಸೋಂಕು ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ.
  • ಸ್ತನಕ್ಕೆ ಕೊಬ್ಬರಿ ಎಣ್ಣೆಯನ್ನು ಲೇಪಿಸುತ್ತಿರಿ. ಕೊಬ್ಬರಿ ಎಣ್ಣೆಯು ಉತ್ತಮ ಔಷಧಿಯನ್ನು ಹೊಂದಿದ್ದು ಊತ , ಸೋಂಕು ಇಳಿಯುವಂತೆ ಮಾಡುತ್ತದೆ.

ಹೆರಿಗೆಯ ನಂತರ ನಮ್ಮ ಆರೋಗ್ಯದ ಕಡೆ ಗಮನ ಕೊಡಬೇಕಾಗಿರುವುದು ತುಂಬಾ ಮುಖ್ಯ. ತಾಯಿ ಆರೋಗ್ಯವಂತೆಯಾಗಿದ್ದರೆ, ಮಗುವು ಆರೋಗ್ಯ ಪೂರ್ಣವಾಗಿರುತ್ತದೆ. ಈ ಲೇಖನ ಓದುವಿಕೆಗೆ ಖುಷಿಕೊಟ್ಟಿದೆ ಎಂದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ಬೆಂಬಲ ಸೂಚಿಸಿ.

#momhealth #breastcare

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.