ಗರ್ಭಾವಸ್ಥೆಯಲ್ಲಿ ಲೈಂಗಿಕತೆ

ಗರ್ಭಾವಸ್ಥೆಯಲ್ಲಿ ಲೈಂಗಿಕತೆ

14 Nov 2021 | 1 min Read

Medically reviewed by

Author | Articles

 

ಗರ್ಭಾವಸ್ಥೆಯ ಸಮಯದಲ್ಲಿ ಲೈಂಗಿಕ ಸಂಪರ್ಕ ಒಂದು ರೀತಿಯಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸುತ್ತದೆ

ಪ್ರತಿಯೊಂದು ಹೆಣ್ಣಿನ ಪಾಲಿಗೆ ತಾಯ್ತನ ಎಂಬುದು ನಿಸರ್ಗದತ್ತ ಕೊಡುಗೆ. ಅಕ್ಷರಶಃ ಆಕೆ ನವ ಮಾಸದಲ್ಲಿ  ಮಗುವನ್ನು ಪೊರೆದು 
ಮಗುವನ್ನು ಪಡೆಯುತ್ತಾಳೆ. ಗರ್ಭಧಾರಣೆಯ ಅವಧಿಯಲ್ಲಿ ದೇಹದಲ್ಲಾಗುವ ಹಾರ್ಮೋನಿನ ಏರುಪೇರಿನಿಂದ ಬಹಳಷ್ಟು ಮಹಿಳೆಯರಲ್ಲಿ ಭಾವನಾತ್ಮಕ ಏರು-ಪೇರು, ದೈಹಿಕ ಅಸಮತೋಲನ, ಹಲವಾರು ಬಗೆಯ ತೊಡಕುಗಳು ಎದುರಾಗುತ್ತವೆ. ಆಗತಾನೇ ಮದುವೆಯಾದ ಸಂಗಾತಿಗಳಿಗೆ ದಿಢೀರನೆ ಗರ್ಭಧಾರಣೆಯಾದರೆ, ಲೈಂಗಿಕ ಜೀವನಕ್ಕೆ ತೊಡಕಾಗುತ್ತದೆ. ಬಹಳಷ್ಟು ಗರ್ಭಿಣಿಯರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತವೆ. ಅದು ತಮ್ಮ ಗರ್ಭಾವಸ್ಥೆಯ ಅವಧಿಗೆ ಸಂಬಂಧಿಸಿರಬಹುದು, ಪ್ರಸವದ ನಂತರದ ಸಮಸ್ಯೆಗಳಿಗೆ ಸಂಬಂಧಪಟ್ಟಿರಬಹುದು, ಇಲ್ಲವೇ ತಮ್ಮ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಇರಬಹುದು. ಈ ನಿಟ್ಟಿನಲ್ಲಿ ಬೇಬಿ ಚಕ್ರ ನಿಮಗೆ ನಿಮ್ಮ ಮನಸ್ಸಿನಲ್ಲಿರುವ ಅವ್ಯಕ್ತ ಪ್ರಶ್ನೆಗಳಿಗೆ ಮಾಹಿತಿಯನ್ನು ನೀಡಲು ಇಚ್ಛಿಸುತ್ತದೆ.

ಗರ್ಭಾವಸ್ಥೆಯಲ್ಲಿ ಲೈಂಗಿಕ ಸಂಪರ್ಕ ಮಾಡಬಹುದೇ?

ಖಂಡಿತ ಮಾಡಬಹುದು. ಗರ್ಭ ನಿಂತಿದೆ ಎಂದು ವೈದ್ಯರು ತಿಳಿಸಿದಾಗ ಮೊದಲ ಮೂರು ತಿಂಗಳು , ಸಂಕೀರ್ಣತೆ ಇರುವ ಗರ್ಭಧಾರಣೆ, ಐ ವಿ ಫ್ ಮೂಲಕ ಗರ್ಭಧಾರಣೆ ಆಗಿದ್ದರೆ, ಇಂಥ ಪ್ರಕರಣಗಳಲ್ಲಿ ಗರ್ಭ ಧರಿಸಿರುವ ವಾಗ ಲೈಂಗಿಕ ಸಂಪರ್ಕ ಸುರಕ್ಷಿತವಲ್ಲ. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಸುತ್ತ ಅಮ್ನಿಯಾಟಿಕ್ ಫ್ಲೂಯಿಡ್ ಮತ್ತು ಗರ್ಭಕೋಶದ ಗಟ್ಟಿಯಾದ ಮಾಂಸ ಖಂಡ ದಿಂದ ಆವೃತವಾಗಿದೆ. ಲೈಂಗಿಕ ಸಂಪರ್ಕ ಮಾಡಿದಾಗ ಇದರಿಂದೇನು ತೊಂದರೆಯಾಗುವುದಿಲ್ಲ.

ಲೈಂಗಿಕ ಸಂಪರ್ಕದಿಂದ ಗರ್ಭಪಾತ ಸಂಭವಿಸಬಹುದೇ?

ಗರ್ಭಾವಸ್ಥೆ ಯ ಸಮಯದಲ್ಲಿ ಲೈಂಗಿಕ ಸಂಪರ್ಕದಿಂದ ಯಾವುದೇ ರೀತಿಯಲ್ಲಿ ಗರ್ಭಪಾತ ಆಗುವುದಿಲ್ಲ. ಭ್ರೂಣ ಅಸಮರ್ಪಕ ಬೆಳವಣಿಗೆಯಿಂದ ಗರ್ಭಪಾತ ಆಗುತ್ತದೆ. ಇದರ ಜೊತೆಗೆ ಬಲವಾದ ಪೆಟ್ಟು ತಗುಲಿದಾಗ, ಅಸಾಧ್ಯವಾದ ಭಾರವನ್ನು ಎತ್ತಿದಾಗ ಗರ್ಭಪಾತ ಆಗುತ್ತದೆ.

ಕಾಂಡೋಮ್ ಬಳಸಬೇಕೇ?

ಈ ಸಮಯದಲ್ಲಿ ಹಲವಾರು ಸೋಂಕು, ವೈರಸ್, ಬ್ಯಾಕ್ಟೀರಿಯಾ ದೇಹವನ್ನು ಅತಿಕ್ರಮಣ ಮಾಡುವ ಸಾಧ್ಯತೆ ಇರುತ್ತದೆ. ಯೋನಿಯ ಸೋಂಕು, ಮತ್ತು ಗರ್ಭದ ಸೋಂಕು ಸಂಭವಿಸುತ್ತದೆ. ಹಾಗಾಗಿ ಸುರಕ್ಷಿತ ಲೈಂಗಿಕತೆ ಈ ಸಮಯದಲ್ಲಿ ಅತೀ ಮುಖ್ಯ.

ಲೈಂಗಿಕ ಸಂಪರ್ಕ ನಿಷೇಧಿಸಬೇಕೇ ?

ಕೆಲವು ಸಂದರ್ಭ ಗಳಲ್ಲಿ ಲೈಂಗಿಕ ಸಂಪರ್ಕ ಮಾಡದೇ ಇದ್ದಷ್ಟು ಒಳ್ಳೆಯದು.
ಯೋನಿಯಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ
ಆಮ್ನಿಯಾಟಿಕ್ ದ್ರವ ಸೋರುತ್ತಿದ್ದರೆ.
ನಿಮ್ಮ ಸರ್ವೀಕ್ಸ್ಸ್ ಅನಿಯಮಿತವಾಗಿ ತೆರೆದರೆ
ನಿಮ್ಮ ಪ್ಲಾಸೆಂಟಾ ಅರ್ಧ ಭಾಗ ಅಥವಾ ಪೂರ್ಣವಾಗಿ ಸರ್ವೀಕ್ಸ್ ಅನ್ನು ಮುಚ್ಚಿದ್ದರೆ
ಈ ಹಿಂದೆ ಅವಧಿಗೆ ಮೊದಲೇ ಮಗುವಿನ ಜನನ ವಾಗಿದ್ದರೆ.
ಪ್ಲಾಸೆಂಟಾ ತೀರ ಕೆಳಗೆ ಇದ್ದರೆ
ಅವಳಿ ಮಕ್ಕಳ ಜನನ ಬಗ್ಗೆ ನಿರೀಕ್ಷೆ ಇದ್ದರೆ.

ಇಂಥ ಸಂದರ್ಭಗಳು ನಿಮ್ಮನ್ನು ಎದುರಾದರೆ ಲೈಂಗಿಕ ಸಂಪರ್ಕ ಮುಂದುವರೆಸಬಾರದು.

ಲೈಂಗಿಕತೆಗೆ ಯಾವ ಭಂಗಿ ಉತ್ತಮ?

ಗರ್ಭಾವ್ಥೆಯಲ್ಲಿ ಸಾಮಾನ್ಯವಾಗಿ ಲೈಂಗಿಕ ಸಂಪರ್ಕ ನಡೆಸುವುದಕ್ಕಿಕಿಂತ ಭಿನ್ನವಾಗಿ ಇರಬೇಕಾಗುತ್ತದೆ. ಹೊಟ್ಟೆಯ ಮೇಲೆ ಯಾವುದೇ ಕಾರಣಕ್ಕೆ ಭಾರ ಬಿಡಬಾರದು. ಇದಕ್ಕಾಗಿ ನಿಮ್ಮ ವೈದ್ಯರ ಬಳಿ ಮಾಹಿತಿಯನ್ನು ಪಡೆಯಬಹುದು. ಈಗ ಬಹಳಷ್ಟು ಮಾಹಿತಿಗಳು ಬೇರೆ ಬೇರೆ ಮೂಲಗಳಿಂದ ಲಭ್ಯವಿದೆ. ಅದರ ಸಹಾಯ ಪಡೆಯಬಹುದು.

ಲೈಂಗಿಕ ಸಂಪರ್ಕದಿಂದಾಗುವ ದೇಹದ ಬದಲಾವಣೆ

ಹಾರ್ಮೋನಿನ ಏರುಪೇರು: ಗರ್ಭಾವಸ್ಥೆ ಯಲ್ಲಿ ಹಾರ್ಮೋನಿನ ಏರುಪೇರಿನಿಂದ ನಿಮ್ಮ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಹಾರ್ಮೋನಿನ ಮಟ್ಟದಲ್ಲಿ ಬದಲಾವಣೆ ಕಾಣಬಹುದು. ಇದರಿಂದ ಲೈಂಗಿಕತೆಯಲ್ಲಿ ಆಸಕ್ತಿ ಕುಂದಬಹುದು. ಸ್ತನದ ಸೂಕ್ಷ್ಮತೆ ಹೆಚ್ಚಾಗಬಹುದು, ಅಸ್ಥಿರತೆ, ಬಳಲಿಕೆ ಇವೇ ಮುಂತಾದವು ಕಾಣಬಹುದು.

ಭಾವನೆಯಲ್ಲಿ ಸಮತೋಲನ: ಬಹಳಷ್ಟು ವೈಜ್ಞಾನಿಕ ಸಂಶೋಧನೆಯಂತೆ ಗರ್ಭವಾಸ್ಥೆಯಲ್ಲಿ ಸಂಗಾತಿಗಳಿಬ್ಬರು ಲೈಗಿಂಕ ಸಂಪರ್ಕವನ್ನು ಹೊಂದಿದರೆ ಅದು ಭಾವನೆಯ ಮೇಲೆ ಸಕಾರಾತ್ಮ ಪರಿಣಾಮವನ್ನು ಬೀರುತ್ತದೆ . ಇದು ಮಗು ಸಕಾರಾತ್ಮಕವಾಗಿ ರೂಪುಗೊಳ್ಳಲು ಸಹಾಯವಾಗುತ್ತದೆ.

ಮಾನಸಿಕ ಆರೋಗ್ಯದ ಸುಸ್ಥಿರತೆ: ಸಂಗತಿಗಳಿಬ್ಬರು ಪ್ರೀತಿಯಿಂದ ಇದ್ದರೆ ಗರ್ಭವತಿಯಾದ ಹೆಂಡತಿಯ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ಮಗುವಿನ ಆರೋಗ್ಯ ತುಂಬಾ ಮುಖ್ಯ . ತಾಯಿಯ ಭಾವನೆ ಮಗುವಿನ ಮೇಲೆ ಪರಿಣಾಮಕಾರಿಯಾಗಿರುವುದರಿಂದ ಮಗುವನ ಭಾವನೆ ಸಮರ್ಪಕ ರೀತಿಯಲ್ಲಿ ಬೆಳವಣಿಯನ್ನು ಕಾಣುತ್ತದೆ.

ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ ರೀತಿಯ ಲೈಂಗಿಕ ಸಂಪರ್ಕ ಸಂಗಾತಿಗಳ ನಡುವೆ ಇರಬೇಕು. ಇಬ್ಬರು ಪರಸ್ಪರ ಪ್ರೀತಿಸಿ, ಅನ್ಯೋನ್ಯತೆಯಿಂದ ಇದ್ದರೆ ಮಗು ಕೂಡ ಸಕಾರಾತ್ಮಕವಾಗಿ ಬೆಳೆಯುತ್ತದೆ. ಈ ದೆಸೆಯಲ್ಲಿ ಪ್ರಸ್ತುತಪಡಿಸಿದ ಈ ಲೇಖನ ನಿಮಗೆ ಇಷ್ಟ ವಾದರೆ ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಪ್ರತಿಕ್ರಿಯೆಯೆನ್ನು ನೀಡಿರಿ. ನಿಮ್ಮ ಪ್ರತಿಕ್ರಿಯೆ ತುಂಬಾ ಅಮೂಲ್ಯವಾದುದು.

#sexandrelationship #pregnancymustknow #pregnancysex

A

gallery
send-btn