ಸೊಳ್ಳೆ ಕಾಯಿಲ್ ಬಳಸುವುದು ನಿಮ್ಮ ಮಗುವಿಗೆ ಸುರಕ್ಷಿತವೇ?

cover-image
ಸೊಳ್ಳೆ ಕಾಯಿಲ್ ಬಳಸುವುದು ನಿಮ್ಮ ಮಗುವಿಗೆ ಸುರಕ್ಷಿತವೇ?

 

ಸೊಳ್ಳೆಯಿಂದ ತಪ್ಪಿಸಿಕೊಳ್ಳಲು ರಾಸಾಯನಿಕ ಬಳಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. 

ಸೊಳ್ಳೆಯ ಕಾಟದಿಂದ ತಪ್ಪಿಸಿಕೊಳ್ಳುವುದು ಒಂದು ರೀತಿಯಲ್ಲಿ ಹರಸಾಹಸವೇ ಸರಿ. ನಾವು ಬಳಸುವ ರಾಸಾಯನಿಕ ಕಾಯಿಲ್, ಲೋಷನ್, ದ್ರವದ ಔಷಧಿ ಮಗುವಿಗೆ ತೊಂದರೆಯಾಗುದಿಲ್ಲವೇ? ಖಂಡಿತ ಆಗುತ್ತದೆ. ಈ ಬಗ್ಗೆ ಮಾತನಾಡೋಣ ಬನ್ನಿ. 

ಮಗುವಿನ, ಬಾಣಂತಿಯ ಕೊನೆಯಲಿ  ಸೊಳ್ಳೆಯ ಕಾಟ ಹೆಚ್ಚಾಗಿದ್ದರೆ, ನಾವು ತಕ್ಷಣ ಅದನ್ನು ಹೋಗಲಾಡಿಸಲು ಕಾಯಿಲ್ ಅನ್ನು ಬಳಸುತ್ತೇವೆ.  ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ವಿವಿಧ ಬಗೆಯ ಕಂಪೆನಿಗಳ ಸೊಳ್ಳೆಯಾ ನಿಯಂತ್ರಕಗಳು ಸಿಗುತ್ತಿವೆ. ನಾವು ನವಜಾತ ಶಿಶುವಿನ ಕೊಠಡಿಯಲ್ಲಿ  ರಾಸಾಯನಿಕವನ್ನು ಬಳಸಿದರೆ ಮಗುವಿಗೆ ಅಪಾಯವಾಗುವ ಸಂಭವ ಹೆಚ್ಚಿರುತ್ತದೆ. 

ನಮ್ಮ ಆರೋಗ್ಯದ ಮೇಲೆ ಸೊಳ್ಳೆಗಳು ವಿಪರೀತ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಮಲೇರಿಯಾ, ಕಾಲರಾ ಹರಡುವಿಕೆಯಲ್ಲಿ ಸೊಳ್ಳೆಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಇತ್ತೀಚಿಗೆ ಚಿಕನ್ ಗುನ್ಯಾ, ಡೆಂಗೆ ರೋಗಗಳು ಕೂಡ ಸೊಳ್ಳೆಯಿಂದ ಹರಡುತ್ತವೆ ಎಂಬುದು ತಿಳಿದಿದೆ. 

ಈ ಎಲ್ಲಾ ರೋಗದ ತೀವ್ರತೆಯಿಂದ ನಮ್ಮನ್ನು ಕಾಪಾಡಿಕೊಳ್ಳಲು ಕೆಲವೊಂದು ಕಂಪೆನಿಗಳು ಹಲವಾರು ರೀತಿಯ ಸೊಳ್ಳೆಯ ನಿಯಂತ್ರಕವನ್ನು ಪ್ರಚಾರಪಡಿಸಿದೆ. ಅವುಗಳ ಸಾಲಿಗೆ ಸೇರುವ ಕಾಯಿಲ್ಗಳು, ಲೋಷನ್ ಗಳು, ಕ್ರೀಮ್ಗಳು ಇಂದು ಹಲವಾರು ಕಂಪೆನಿಗಳ ಉತ್ಪನ್ನ ನಮಗೆ ಮಾರುಕಟ್ಟೆಯಲ್ಲಿ ಸಿಗುತ್ತವೆ. ಇವುಗಳು ಬೇರೆ ಬೇರೆ ವಯೋಮಾನಕ್ಕೆ ಸಿಗುತ್ತವೆ ನಿಜ. ಆದರೆ ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಸಮಸ್ಯೆಯನ್ನು ಸೃಷ್ಟಿಸುತ್ತವಲ್ಲವೇ ? ಎಂದು ನೀವು ಕೇಳಬಹುದು. ನಮ್ಮ ಚರ್ಮ ಹೋಗಲಿ ಸಣ್ಣ ಎಳೆ ಮಗುವಿನ ಪಾಡೇನು ಎಂಬುದು ನಮ್ಮ ಆಲೋಚನೆ.  

1. ಸೊಳ್ಳೆಯ ಕಾಯಿಲ್ 

ಭಾರತದಲ್ಲಿ ಸೊಳ್ಳೆಯ ಕಾಯಿಲ್ ನ ಬಳಕೆ ವ್ಯಾಪಕವಾಗಿದೆ. ಆದರೂ ಒಳಗೆ ಬಹು ಸಮಯದವರೆಗೆ ಸೊಳ್ಳೆಯ ಕಾಯಿಲ್ ಅನ್ನು ಹೊತ್ತಿಸುತ್ತಿದ್ದರೆ, ನಿಮ್ಮ ಮನೆಯ ವಾತಾವರಣ ಕಲುಷಿತಗೊಳ್ಳುತ್ತದೆ. ಸಾಮಾನ್ಯವಾಗಿ ಎಳೆ ಮಗುವು ಉಸಿರಾಟದ ತೊಂದರೆಗೆ ಸಿಲುಕಬಾರದು. ಮಗುವಿಗೆ ತಲೆನೋವು, ಕೆಮ್ಮು, ಶೀತ ನೆಗಡಿ, ಮಂಕು  ಕವಿದಂತೆ ಇರುವುದು , ತಲೆ ತಿರುಗುವುದು, ವಾಂತಿ ಬರುವುದು, ಆಸ್ತಮಾ, ಅಲರ್ಜಿಗಳಿಗೆ ಕಾರಣವಾಗಬಲ್ಲದು. 

ನಾವೇನು ಮಾಡಬೇಕು: ಕಾಯಿಲ್ ಹೊತ್ತಿಸಿದಾಗ ಮಗುವನ್ನು ಬೇರೊಂದು ಕೊಠಡಿಯಲ್ಲಿ ಇರಿಸಿರಿ. ಕಾಯಿಲ್ ನ ಪ್ರಭಾವದಿಂದ ಸೊಳ್ಳೆಗಳು ಪರಾರಿಯಾದ ಮೇಲೆ. ಕೊಠಡಿಯಲ್ಲಿ ಹೋಗೆ ಮತ್ತು ವಾಸನೆಯ ಪ್ರಮಾಣ ತಗ್ಗಿದ ಮೇಲೆ  ಮಗುವನ್ನು ಕೊಠಡಿಗೆ ಕರೆದುಕೊಂಡು ಬನ್ನಿ. 

ಕೆಲವು ಸಮಯದಲ್ಲಿ ಕೊಠಡಿಗೆ ವೇಪರೈಸೆರ್ ಅನ್ನು ಬಳಸಿರಿ. ಇದರಿಂದ ಕಾಯಿಲ್ ನ ವಾಸನೆಯನ್ನು ಶೀಘ್ರವಾಗಿ ಕೊಠಡಿಯನ್ನು ಆವರಿಸಿರುವ ವಾಸನೆ ದೂರವಾಗುತ್ತದೆ. 

2. ಕ್ರೀಮ್ಗಳು, ಸ್ಟಿಕ್ಗಳು ಮತ್ತು ಮಗುವಿಗಾಗಿ ಸ್ಪ್ರೇ. 

ಮಗುವಿನ ಮೇಲೆ ಸ್ಪ್ರೇ ಮತ್ತು ರೋಲ್ ಆನ್ಗಳನ್ನು ಮಗುವಿಗೆ ಹಚ್ಚಿದರೆ ಅದು ಕೇವಲ ಸೀಮಿತ ಅವಧಿ ಮತ್ತು ತಾತ್ಕಾಲಿಕವಾಗಿ ಮಾತ್ರ ಬಳಸಲು ಸಾಧ್ಯ. ಅಂದರೆ ಕೆಲವೇ ಗಂಟೆಗಳು ಮಾತ್ರ. ಮತ್ತೆ ನೀವು ಅದರ ಪ್ರಭಾವ ಕಡಿಮೆಯಾದ ಮೇಲೆ ಹಚ್ಚಬೇಕಾಗುತ್ತದೆ. 

ಏನು ಮಾಡಬೇಕು: ಬೇಬಿನ ಸೊಪ್ಪು ಅಥವಾ ಕರ್ಪೂಣ ಬೆರೆಸಿ ಎಣ್ಣೆಯನ್ನು ಹಚ್ಚುವುದರಿಂದ ಸೊಳ್ಳೆಯನ್ನು ನಿಯಂತ್ರಿಸಬಹದುದು.  

  1. ಬಾಡಿ ಸ್ಪ್ರೇಗಳು: 

ಸೊಳ್ಳೆಗಾಗಿ ಸ್ಪ್ರೇ ಬಳಸುವುದಾದರೆ ಯಾವಾಗಲೂ ಕೊಠಡಿಯಿಂದ ಹೊರ ಹೋಗಿ ಹಚ್ಚಿರಿ. ಏಕೆಂದರೆ, ಮಗು ನಿಮ್ಮ ಬಾಡಿ ಸ್ಪ್ರೇ ಯ ಸುವಾಸನೆಯನ್ನು ಮಗುವಿಗೆ ಉಸಿರಾಡುವ ಹಾಗೆ ಮಾಡಬೇಡಿ. ಇದರಿಂದ ಮಗು ವಾಸನೆಯನ್ನು ತೆಗೆದುಕೊಂಡು ಅಪಾಯಕಾರಿ ಉಸಿರಾಟದ ತೊಂದರೆಯನ್ನು ಅನುಭವಿಸುತ್ತದೆ. 

ಹಲವಾರು ಸಾಂಕ್ರಾಮಿಕ ರೋಗಗಳಿಗೆ ಇವುಗಳು ಕಾರಣವಾಗುತ್ತವೆ. ಆದ್ದರಿಂದ ಸೊಳ್ಳೆಗಳು ಮಕ್ಕಳಿಗೆ ತುಂಬಾ ಅಪಾಯಕಾರಿ. 

 

ಸೊಳ್ಳೆಯ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನಗಳು 

ಸೊಳ್ಳೆ ನಿವಾರಕ ಗಿಡಗಳನ್ನು ಬೆಳೆಸಿ  

ಕೆಲವೊಂದು ಗಿಡದ ವಾಸನೆ ಸೊಳ್ಳೆಗಳಿಗೆ ಆಗಿ ಬರುವುದಿಲ್ಲ, ಅಂಥ ಗಿಡಗಳನ್ನು ಬಳಸಿ. ತುಳಸಿ, ಕಹಿಬೇವು ಇವೆಲ್ಲಾ ಗಾಳಿಯನ್ನು ಶುದ್ಧವಾಗಿಡುವುದು, ಸೊಳ್ಳೆಕಾಟದಿಂದ ಮುಕ್ತಿಯನ್ನು ನೀಡುವುದು.

ಕಾಳುಮೆಣಸಿನ ಕಡ್ಡಿ

ಕಾಳುಮೆಣಸಿನ ಕಡ್ಡಿ (ಕಾಳುಗಳನ್ನು ಬಿಡಿಸಿದಾಗ ಉಳಿಯುವ ನಾರು)ಯನ್ನು ತೆಗೆದಿಟ್ಟು ದಿನಾ ಸಂಜೆ ಹೊತ್ತು ಹೊಗೆ ಹಾಕಿ. ಇದರ ಘಾಟು ವಾಸನೆಗೆ ಸೊಳ್ಳೆ ಬರುವುದಿಲ್ಲ.

ಸುವಾಸನೆ ಇರುವ ಎಣ್ಣೆಯಿಂದ ದೀಪ ಹಚ್ಚಿ

ಲ್ಯಾವೆಂಡರ್ ಎಣ್ಣೆ, ಕರ್ಪೂರ, ನೀಲಗಿರಿ ಎಣ್ಣೆ ಈ ರೀತಿಯ ಸುವಾಸನೆ ಇರುವ ಎಣ್ಣೆಯ ದೀಪ ಹಚ್ಚಿಟ್ಟರೆ ಸೊಳ್ಳೆಗಳು ಬರುವುದಿಲ್ಲ

ಸೊಳ್ಳೆಯ ನಿಯಂತ್ರದ ಬಗ್ಗೆ ಮಾಹಿತಿ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ, ಕಾಮೆಂಟ್ ಮಾಡುವುದರ ಮೂಲಕ ನಿಮ್ಮ ಪ್ರತಿಕ್ರಿಯೆಯನ್ನು ನೀಡಿರಿ.   

#momhealth
logo

Select Language

down - arrow
Personalizing BabyChakra just for you!
This may take a moment!