ಗರ್ಭಿಣಿಯರಿಗಾಗಿ ಸ್ನಾಕ್ಸ್

cover-image
ಗರ್ಭಿಣಿಯರಿಗಾಗಿ ಸ್ನಾಕ್ಸ್

ಗರ್ಭಿಣಿಯರಲ್ಲಿ ಬಹಳಷ್ಟು ಬಯಕೆಗಳು ಅಥವಾ ಆಹಾರದ ಬಗ್ಗೆ ಅಲರ್ಜಿ ವಾಕರಿಕೆ ಆರಂಭವಾಗಿರುತ್ತದೆ. ಈ ಅವಧಿಯಲ್ಲಿ ಮಗುವಿನ ಬೆಳವಣಿಗೆ ಜೊತೆಗೆ ಮಗುವಿನ ಮಿದುಳಿನ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿರುವ ಆಹಾರಕ್ರಮವನ್ನು ಗರ್ಭಿಣಿಯರು ರೂಢಸಿಕೊಳ್ಳಬೇಕು. ಏಕೆಂದರೆ ಮಗುವಿನ ಮಿದುಳು ಹತ್ತು ವರ್ಷದ ಮಗುವಿನ ಮೆದುಳಿನ ಕಾಲು ಗಾತ್ರದಲ್ಲಿರುತ್ತದೆ. ಅದರ ಬೆಳವಣಿಗೆಯನ್ನು ನಾವು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕು. ಮಗುವಿನ ಮಿದಳಿನ ಬೆಳವಣಿಗೆ 7 ವರ್ಷದವರೆಗೆ ಅದರ ಐಕ್ಯೂ ಮಟ್ಟವನ್ನು ಆಲೋಚಿಸಿ ಕೊಂಡು ಆಹಾರಕ್ರಮವನ್ನು ಅನುಸರಿಸಬೇಕಾಗುತ್ತದೆ. ಬಹಳಷ್ಟು ಉತ್ತಮ ರೀತಿಯ ಆಹಾರ ಪದ್ಧತಿಗಳನ್ನು ಗರ್ಭಾವಸ್ಥೆ ಇಂದಲೇ ರೂಢಿಸಿಕೊಳ್ಳಬೇಕು.
ಈ ಅವಧಿಯಲ್ಲಿ ಹೆಚ್ಚು ಮಕ್ಕಳನ್ನು ಚುರುಕುಗೊಳಿಸುವ ಆಹಾರವನ್ನು ನಾವು ಒದಗಿಸಿದರೆ ಮಗು ಹೆಚ್ಚು ಬುದ್ಧಿವಂತನಾಗಿ ಬೆಳೆಯುತ್ತದೆ.


೧. ಅವಲಕ್ಕಿ

ಬೇಕಾಗುವ ಸಾಮಾಗ್ರಿಗಳು:

ಗಟ್ಟಿ ಅವಲಕ್ಕಿ
ಈರುಳ್ಳಿ1
ಮೆಣಸು 2
ಕಡಲೆಬೀಜ
ಕಡಲೆ ಬೇಳೆ 2 ಚಮಚ
ಸಾಸಿವೆ
ಕರಿಬೇವಿನ ಸೊಪ್ಪು
ಕೊತ್ತಂಬರಿ ಸೊಪ್ಪು
ಎಣ್ಣೆ
ನಿಂಬೆಹಣ್ಣಿನ ರಸ 1 ಚಮಚ
ತುರಿದ ತೆಂಗಿನಕಾಯಿ


ತಯಾರಿಸುವ ವಿಧಾನ:

ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ .
ಸ್ಟೌವಿನ ಮೇಲೆ ಬಾಣಲೆಯನ್ನಿಟ್ಟು, ಮೊದಲು ಸಾಸಿವೆಯನ್ನು ಸಿಡಿಸಿ ಕೊಳ್ಳಿ. ಈಗಾಗಲೇ ಹುರಿದು ತೆಗೆದಿಟ್ಟು ಕಡಲೆಬೇಳೆ ಮತ್ತು ಕಡಲೆ ಬೀಜವನ್ನು ಎಣ್ಣೆಗೆ ಹಾಕಿ. ಈರುಳ್ಳಿ , ಹಸಿ ಮೆಣಸು, ಕರಿಬೇವಿನ ಸೊಪ್ಪನ್ನು ಹಾಕಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಹುರಿಯಬೇಕು. ಈರುಳ್ಳಿ ಬ್ರೌನ್ ಬಣ್ಣಕ್ಕೆ ತಿರುಗಿದ ನಂತರ ಅದಕ್ಕೆ ಈಗ ತುರಿದಿಟ್ಟ ತೆಂಗಿನಕಾಯಿಯನ್ನು ಬೆರೆಸಬೇಕು. ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಎಲ್ಲ ಮಿಶ್ರಣವನ್ನು ಚೆನ್ನಾಗಿ ಕಲೆಸಿ ಸ್ವಲ್ಪ ಆರಿಸಿದ ನಂತರ ಕೊನೆಯಲ್ಲಿ ನಿಂಬೆಹಣ್ಣಿನ ರಸವನ್ನು ಹಾಕಿ. ಇಲ್ಲದಿದ್ದರೆ ಕಹಿ ಬರುತ್ತದೆ. ಒಲೆಯಿಂದ ಬಾಣಲೆಯನ್ನು ಕೆಳಗಿಳಿಸಿ. ಅದಕ್ಕೆ ಈಗ ಅವಲಕ್ಕಿಯನ್ನು ಬೆರೆಸಿ ಉಪ್ಪನ್ನು ಮಿಶ್ರ ಮಾಡಿ ಕೊನೆಗೆ ಕೊತ್ತಂಬರಿ ಸೊಪ್ಪನ್ನು ಹಾಕಿ. ಬಿಸಿಬಿಸಿಯಾದ ಅವಲಕ್ಕಿ ರೆಡ್ಡಿ. ಅವಲಕ್ಕಿಯಲ್ಲಿ ಕಾರ್ಬೋಹೈಡ್ರೇಟ್ ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ ಗರ್ಭಿಣಿಯರಿಗೆ ಸಂಜೆ ಅಥವಾ ಬೆಳಗ್ಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು.

 

೨. ಚನ್ನ ಕಡಲೆ ಕಾಳಿನ ಉಸುಲಿ

ಬೇಕಾಗುವ ಸಾಮಾಗ್ರಿಗಳು

ಚೆನ್ನ ಕಡಲೆ 1 ಕಪ್ ಅಥವಾ ಎರಡು ಕಪ್ ಕುಕ್ಕರಿನಲ್ಲಿ ಉಪ್ಪು ಹಾಕಿ ಬೇಯಿಸಿಕೊಳ್ಳಿ.
ಬಾಣಲೆಯಲ್ಲಿ ಹೆಚ್ಚಿದ ಈರುಳ್ಳಿ, ಸಾಸಿವೆ, ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಬೇಯಿಸಿದ ಚನ್ನ ಕಡಲೆಯನ್ನು ಬೇಯಿಸಿದ ನೀರು ಬಸಿದು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪು ರುಚಿ ನೋಡಿ ಬೆರೆಸಿಕೊಳ್ಳಿ. ಏಕೆಂದರೆ ಬೇಯಿಸುವಾಗ ಉಪ್ಪು ಹಾಕಿರುತ್ತೇವೆ.
ಹೆಚ್ಚು ಪೋಷಕಾಂಶ ಇರುವ ಚೆನ್ನ ಕಡಲೆಯು ಗರ್ಭಿಣಿಯರಿಗೆ ಹೆಚ್ಚಿನ ಪೋಷಕಾಂಶವನ್ನು ಒದಗಿಸುತ್ತದೆ. ಗರ್ಭಾವಸ್ಥೆಯಲ್ಲಿ ಆಹಾರ ಇಷ್ಟ ಇಲ್ಲದವರು , ವಾಕರಿಕೆ ಸುಸ್ತು ಆವರಿಸುತ್ತಿರುವವರು ಇಂಥಾ ಸ್ನಾಕ್ಸ್ ಅನ್ನು ಸೇವಿಸಿರಿ.

ಹೆಸರು ಕಾಳಿನ ಉಸುಲಿ
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವ ಹೆಸರು ಕಾಳಿನ ಉಸುಲಿ
ಬೇಕಾಗುವ ಸಾಮಾಗ್ರಿ
ಎಣ್ಣೆ 3 ಚಮಚ
ಹೆಸರು ಕಾಳು 1 ಕಪ್
ನೀರು 2 ಕಪ್
ಸಾಸಿವೆ ಅರ್ಧ ಚಮಚ
ಇಂಗು ಚಿಟಿಕೆ ಯಷ್ಟು
ಅರಸಿನ ಪುಡಿ -ಚಿಟಿಕೆಯಷ್ಟು
ಕರಿಬೇವಿನ ಸೊಪ್ಪು
ಹಸಿಮೆಣಸಿನಕಾಯಿ

ತಯಾರಿಸುವ ವಿಧಾನ:

ಒಂದು ಕುಕ್ಕರಿನಲ್ಲಿ ಒಂದು ಕಪ್ ಹೆಸರುಕಾಳು ತೆಗೆದುಕೊಂಡು ಅದಕ್ಕೆ 2 ಕಪ್ ನೀರನ್ನು ಬೆರೆಸಿ ಸ್ವಲ್ಪ ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ಅದನ್ನು ಇಳಿಸಿ ಬಾಣಲೆಯನ್ನು ಸ್ಟೌವಿನ ಮೇಲೆ ಇಡಿ. ಒಗ್ಗರಣೆಗೆ ಬಾಣಲಿಗೆ ಎಣ್ಣೆ ಹಾಕಿ ಸಾಸಿವೆಯನ್ನು ಹಾಕಿ, ಚಿಟಿಕೆ ಇಂಗು, ಚಿಟಿಕೆ ಅರಿಶಿನಪುಡಿ, ಹೆಚ್ಚಿದ ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಸ್ವಲ್ಪ ಕಾಯಿಸಿರಿ. ನಂತರ ಬಾಣಲಿಗೆ ಬೇಯಿಸಿಟ್ಟ ಹೆಸರುಕಾಳನ್ನು ಮಿಶ್ರ ಮಾಡಿ ಸ್ವಲ್ಪ ಹೊತ್ತು ಎಣ್ಣೆಯಲ್ಲಿ ಮಿಶ್ರಮಾಡಿ


ನೀರಿನಂಶ ಹೋದಮೇಲೆ ಅದಕ್ಕೆ ಬೇಕಿದ್ದರೆ ಸಕ್ಕರೆ 1 ಚಮಚ ಬೆರೆಸಿ. ಕಾಯಿತುರಿ 1ಕಪ್ ಅನ್ನು ಬೆರೆಸಿ ಮಿಶ್ರ ಮಾಡಿದ ಮೇಲೆ ಅರ್ಧ ಚಮಚ ನಿಂಬೆ ಹಣ್ಣಿನ ರಸ ಮಿಶ್ರ ಮಾಡಿರಿ.

ಆರೋಗ್ಯಕ್ಕೆ ಉತ್ತಮವಾದ ಈ ಸ್ನಾಕ್ಸ್ ಇಷ್ಟವಾದರೆ ಲೈಕ್ ಮಾಡಿ, ಷೇರ್ ಮತ್ತು ಕಾಮೆಂಟ್ ಮಾಡಿ

#pregnancyfoods #momnutrition
logo

Select Language

down - arrow
Personalizing BabyChakra just for you!
This may take a moment!