ಪ್ರಸವದ ನಂತರ ಪೋಷಕಾಂಶಗಳ ಮಹತ್ವ

ಪ್ರಸವದ ನಂತರ ಪೋಷಕಾಂಶಗಳ ಮಹತ್ವ

3 Nov 2021 | 1 min Read

Medically reviewed by

Author | Articles

ಭಾರತೀಯ ಸಾಂಪ್ರದಾಯಿಕ ಪದ್ಧತಿ

ಭಾರತೀಯ ಸಾಂಪ್ರದಾಯಿಕ ರೀತಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಹಾರ ಕ್ರಮ ವಿಶಿಷ್ಟ ರೀತಿಯದ್ದು. ಬಾಣಂತಿಯ ಆರೈಕೆಗೆಂದೇ ವಿಶೇಷವಾಗಿ ಪ್ರತ್ಯೇಕ ಕೊಠಡಿ, ಊಟದ ವ್ಯವಸ್ಥೆ ನಮ್ಮ ದೇಶದಲ್ಲಿ ಮಾಡಲಾಗುತ್ತದೆ. ಅದೇ ಬೇರೆ ದೇಶಗಳಲ್ಲಿ ಈ ರೀತಿಯ ವ್ಯವಸ್ಥೆ ಇರುವುದಿಲ್ಲ. ನಮ್ಮ ದೇಶದಲ್ಲಿ, ಪ್ರಾಪ್ತ ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಆರೈಕೆ ಮತ್ತು ಹೆರಿಗೆಯ ನಂತರ ಮಾಡುವ ಹಾರೈಕೆಗಳು ಹೆಚ್ಚುಕಡಿಮೆ ಒಂದೇ ರೀತಿಯಲ್ಲಿರತ್ತವೆ. ನಮ್ಮ ದೇಶದಲ್ಲಿ ಪ್ರಸವದ ನಂತರ ಮಹಿಳೆಯರನ್ನು 40ರಿಂದ 45 ದಿನಗಳ ವರೆಗೆ ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳಲಾಗುತ್ತದೆ. ಆದರೆ ಹೊರದೇಶದಲ್ಲಿ ಹೀಗಿಲ್ಲ. ಮಗು ಜನಿಸಿ ಎರಡು ಗಂಟೆಯ ನಂತರ ತಾವೇ ಸ್ವತಹ ಹೊರಗಡೆ ಓಡಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ನಮ್ಮ ಪರಿಸರಕ್ಕೆ ಅನುಗುಣವಾಗಿ ಅದಕ್ಕಾಗಿ ಪಾಲಿಸಿಕೊಂಡು ಬಂದ ಸಾಂಪ್ರದಾಯಿಕ ಆರೈಕೆಗಳಿವೆ.

 

ಪ್ರಸವಕ್ಕೆ ಮೊದಲು ಮತ್ತು ಬಳಿಕ ಆಗುವ ರಕ್ತಸ್ರಾವದಿಂದ ಕೆಲವು ಮಹಿಳೆಯರಲ್ಲಿ ಕೂದಲು ಉದುರುವಿಕೆ, ಹಲ್ಲು ಒಡೆದುಕೊಳ್ಳುವುದು, ಕಣ್ಣು ಮಂಜಾಗುವುದು, ರಕ್ತಹೀನತೆ, ದೇಹದ ಸಂಧಿಯಲ್ಲಿ ನೋವು, ಕ್ಯಾಲ್ಸಿಯಂನ ಕರತೆ ಉಂಟಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಭಾರತೀಯ ಸಾಂಪ್ರದಾಯಿಕ ವಿಧಾನದಲ್ಲಿ ಕೆಲವೊಂದು ಆರೈಕೆಗಳನ್ನು 45 ದಿನಗಳ ವರೆಗೆ ಪ್ರಸವವಾದ ಸ್ತ್ರೀಯರಿಗೆ ಮಾಡಲಾಗುವುದು. ಅವುಗಳಲ್ಲಿ ಮುಖ್ಯವಾಗಿದ್ದು ಆಹಾರ ಪದ್ಧತಿ, ಸೇವಿಸಲು ಕೊಡುವ ಔಷಧಿ, ತೈಲದ ಅಭ್ಯಂಜನ.

ಗರ್ಭಧಾರಣೆ ಅವಧಿಯಿಂದ ಪ್ರಸವದ ನಂತರ ಕೆಲವು ತಿಂಗಳವರೆಗೆ ಖಾರ ,ಉಪ್ಪು ಹುಳಿ, ಇಂಥ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕಾಗುತ್ತದೆ.

ಪೋಷಕಾಂಶಗಳ ಅಗತ್ಯತೆ

ಪ್ರಸವದ ನಂತರ ಬಹಳಷ್ಟು ಮಹಿಳೆಯರಿಗೆ ಪ್ರಸವದ ಸಮಯದಲ್ಲಿ ಆಗುವ ರಕ್ತಸ್ರಾವ ಮತ್ತು ವ್ಯಯವಾಗುವ ಪೋಷಕಾಂಶದಿಂದಾಗಿ ದೇಹಕ್ಕೆ ಬಹು ಪ್ರಮಾಣದಲ್ಲಿ ಪೋಷಕಾಂಶಗಳ ಅಗತ್ಯ ಇರುತ್ತದೆ. ಅದು ಅಲ್ಲದೆ ಮಗು ಸಂಪೂರ್ಣ ತಾಯಿಯ ಮೇಲೆ ತನ್ನ ಆಹಾರಕ್ಕಾಗಿ ಅವಲಂಬಿಸಿರುವುದರಿಂದ, ಮಗುವಿಗೆ ಸಮರ್ಪಕವಾದ ಪೋಷಕಾಂಶಯುಕ್ತ ಆಹಾರ ತಾಯಿಯ ಎದೆಹಾಲು ಮಾತ್ರ ಒದಗಿಸಲು ಸಾಧ್ಯ. ಈ ದೆಸೆಯಲ್ಲಿ ತಾಯಿಯು ತನಗೂ ಮತ್ತು ಮಗುವಿಗೆ ಬೇಕಾಗುವ ಪೋಷಕಾಂಶಗಳನ್ನು ಸೇವಿಸಬೇಕಾಗುತ್ತದೆ. ಈ ಪೋಷಕಾಂಶದ ಮೂಲ ಪ್ರತಿ ತಾಯಿ ತೆಗೆದುಕೊಳ್ಳುವ ಆಹಾರದ ಮೇಲೆ ಅವಲಂಬಿಸಿರುತ್ತದೆ.

1. ಆಹಾರದಿಂದ ದೇಹಕ್ಕೆ ಶಕ್ತಿ- ಸಾಮರ್ಥ್ಯ

ಗರ್ಭಧಾರಣೆಯ ಮೂರನೇ ತ್ರೈಮಾಸಿಕದಲ್ಲಿ ಕೆಲವರಿಗೆ ತಲೆ ಸುತ್ತುವುದು, ವಿಪರೀತವಾದ ಸುಸ್ತು ಕಾಣಿಸಿಕೊಳ್ಳುತ್ತದೆ. ಇದು ಮುಂದುವರೆದು ಪ್ರಸವದ ನಂತರವೂ ಕೆಲವರಿಗೆ ಇರುತ್ತದೆ. ಇದರ ಜೊತೆಗೆ ಅರ್ಧ ತಲೆನೋವು, ಕ್ಲಸ್ಟರ್ಡ್ ಹೆಡ್ಡೇಕ್ , ಸೈನಸ್ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಬ್ಬಿಣಾಂಶ ತುಂಬಿರುವ ಆಹಾರ, ಮಾಂಸ, ಸೊಪ್ಪು-ತರಕಾರಿ, ಖರ್ಜೂರ ಸೇವಿಸಬೇಕು. ಇದು ಎದೆ ಹಾಲನ್ನು ಹೆಚ್ಚಿಸುವಲ್ಲಿ ತುಂಬಾ ಮುಖ್ಯಪಾತ್ರವನ್ನು ವಹಿಸುತ್ತದೆ.

2. ಎದೆ ಹಾಲು ಹೆಚ್ಚಿಸಲು

ಪ್ರಸವದ ನಂತರ ಕೆಲವರಲ್ಲಿ ಎದೆಹಾಲು ತುಂಬಾ ಕಡಿಮೆ ಪ್ರಮಾಣದಲ್ಲಿರುತ್ತದೆ. ಎದೆಹಾಲು ಹೆಚ್ಚಿಸುವಂಥ ಮತ್ತು ಹಾರ್ಮೋನನ್ನು ಉತ್ತೇಜಿಸುವಂತಹ ಆಹಾರವನ್ನು ಈ ಸಮಯದಲ್ಲಿ ಸೇವಿಸಬೇಕಾಗುತ್ತದೆ. ಮೆಂತೆ, ಬೆಲ್ಲ, ಕರ್ಜೂರ, ಕಪ್ಪುಎಳ್ಳು, ತುಪ್ಪ , ಇವೆಲ್ಲ ಎದೆಹಾಲು ಹೆಚ್ಚಿಸಲು ಪ್ರೇರಕ ಆಹಾರಗಳು.

3. ಭಾವನೆಯ ಏರುಪೇರು

ಪ್ರಸವದ ನಂತರ ಕೆಲವರಲ್ಲಿ ಭಾವನೆಯ ಏರುಪೇರು ಕಂಡುಬರುತ್ತದೆ. ಹಾರ್ಮೋನಿನಲ್ಲಾಗುವ ಬದಲಾವಣೆಯಿಂದ ಮನಸ್ಸಿನ ಭಾವನೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಭಾವನೆ ಏರುಪೇರನ್ನು ನಿಯಂತ್ರಿಸುವ ಆಹಾರವನ್ನು ಸೇವಿಸಬೇಕಾಗುತ್ತದೆ. ಸಮರ್ಪಕವಾದ ಪೋಷಕಾಂಶ ಶಕ್ತಿಶಾಲಿ ಆರೋಗ್ಯಪೂರ್ಣ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸವದ ನಂತರ ಕಾಡುವ ಖಿನ್ನತೆ, ಸಣ್ಣಿ, ಇವೆಲ್ಲದಕ್ಕು ಪೋಷಕಾಂಶಗಳ ಸೇವನೆ ಸರಿಯಾದ ಪರಿಹಾರ.

ಪ್ರಸವದ ನಂತರ ತೆಗೆದುಕೊಳ್ಳುವ ಪೋಷಕಾಂಶಗಳು

ನುಗ್ಗೆ ಸೊಪ್ಪು- ನುಗ್ಗೆಸೊಪ್ಪಿನ ಸೂಪ್ ಅಥವಾ ಸೊಪ್ಪಿನ ಪಲ್ಯ ತಿನ್ನುವುದರಿಂದ ಎದೆ ಹಾಲಿನ ಉತ್ಪತ್ತಿ ಹೆಚ್ಚಾಗುತ್ತದೆ. ತಾಯಿಯ ಎದೆಹಾಲು ಹೆಚ್ಚಿಸಲು ಹಾರ್ಮೋನನ್ನು ಉತ್ತೇಜಿಸುವ ಪ್ರಮುಖ ಆಹಾರದಲ್ಲಿ ಇದು ಕೂಡ ಒಂದು. ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಸಿ , ಕ್ಯಾಲ್ಸಿಯಂ, ಐರನ್, ಇತರ ಪೋಷಕಾಂಶದ ಆಗರವಾಗಿದೆ ನುಗ್ಗಿ ಸೊಪ್ಪು.

ಬಾದಾಮಿ- ಬಾದಾಮಿಯನ್ನು ನೆನೆಸಿ ದಿನದಲ್ಲಿಬೆಳಗ್ಗೆ ಖಾಲಿ ಹೊಟ್ಟೆಗೆ ನಾಲ್ಕು – ಐದು ಗಂಟೆಗೆಬಾದಾಮಿ ತಿನ್ನುವುದರಿಂದ ಎದೆಹಾಲಿನ ಕೊರತೆ ಸಮಸ್ಯೆ ಇಲ್ಲವಾಗುತ್ತದೆ. ಒಮೆಗಾ-3 ಸಮೃದ್ಧವಾಗಿರುವ ಬಾದಾಮಿಯನ್ನು ಸೇವಿಸುದರಿಂದ ತಾಯಿಯ ಎದೆಹಾಲಿನ ಮೂಲಕ ಮಗುವಿಗೆ ತಲುಪುತ್ತದೆ. ಮಗುವಿನ ಮೆದುಳಿನ ಬೆಳವಣಿಗೆಗೆ ತುಂಬಾ ಅವಶ್ಯಕವಾಗಿರುವ ಪೋಷಕಾಂಶ ಒಮೆಗಾ-3 ಬಾದಾಮಿಯಲ್ಲಿದೆ.

ಹಾಗಲಕಾಯಿ- ಹಾಗಲಕಾಯಿ ಕೂಡ ಉತ್ತಮ ಪೋಷಕಾಂಶ ಆಹಾರದ ಮೂಲ. ಪ್ರಸವದ ನಂತರ ಮಹಿಳೆಯರಲ್ಲಿ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಇದು ಸಹಕಾರಿ. ಇವಿಷ್ಟಲ್ಲದೆ ಮೆಂತೆ, ಕಪ್ಪುಎಳ್ಳು, ಬೆಲ್ಲ, ತುಪ್ಪ, ಕಾಳುಮೆಣಸಿನಪುಡಿ, ಜೇನು ಬೆರೆಸಿ ಬಾಣಂತಿಯರಿಗೆ ಕೊಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ ಚಟ್ನಿ:

ಬೆಳ್ಳುಳ್ಳಿ ಮತ್ತು ಈರುಳ್ಳಿಯ ಚಟ್ನಿ ಬಾಣಂತಿಯರಿಗೆ ತುಂಬಾ ಮುಖ್ಯವಾದ ಆಹಾರ. ಇದರಿಂದ ಮಹಿಳೆಯರ ಸಂಧಿವಾತ, ವಾಯು ಹತೋಟಿಗೆ ತರಬಹುದು. ಇದರ ಚೂರ್ಣವನ್ನು ತಯಾರಿಸಿ ಬಾಣಂತಿಗೆ ನೀಡುವುದು ವಾಡಿಕೆ. ಉತ್ತರ ಕರ್ನಾಟಕದಲ್ಲಿ ಬೆಳ್ಳುಳ್ಳಿಯಾ ಚಟ್ನಿ, ಬೆಳ್ಳುಳ್ಳಿ ರಸಂ ಆಹಾರದ ರೂಪದಲ್ಲಿ ಬಾಣಂತಿ ಮಹಿಳೆಯರಿಗೆ ಕೊಟ್ಟರೆ, ಕರಾವಳಿಯ ಪ್ರದೇಶದಲ್ಲಿ ಹಾಗಲಕಾಯಿ- ಮೆಂತೆ ಇಂತಹ ಆ ರವನ್ನು ಹೆಚ್ಚಾಗಿ ಬಾಣಂತಿಯರಿಗೆ ಕೊಡಲಾಗುತ್ತದೆ. ಅದೇ ರೀತಿ ಮಲೆನಾಡು ಭಾಗದಲ್ಲಿ ಕರಿಮೆಣಸು ಪುಡಿ ಮಾಡಿ ಜೇನಿನಲ್ಲಿ ಬೆರೆಸಿ ಅದರ ಜೊತೆಗೆ ಮೆಂತೆ ಪುಡಿಯನ್ನು ಬೆರೆಸಿ ಕೊಡಲಾಗುವುದು. . ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿವಿಧ ಆಹಾರ ಪದ್ಧತಿಯು ಸಾಂಪ್ರದಾಯಿಕವಾಗಿ ಬಾಣಂತಿಯರ ಆರೋಗ್ಯದ ದೃಷ್ಟಿಯಿಂದ ನೀಡಲಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಆಹಾರದಲ್ಲಿ ವ್ಯತ್ಯಾಸ ಕಂಡುಬಂದರೂ ಒಟ್ಟಾರೆಯಾಗಿ ಬಾಣಂತಿಯರಿಗೆ ಬೇಕಾಗುವ ಪೋಷಕಾಂಶ ವಾತಾವರಣವನ್ನು ಅವಲಂಬಿಸಿರುತ್ತದೆ.

#momhealth #momnutrition #breastfeeding

A

gallery
send-btn

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.