ಚಳಿಗಾಲದಲ್ಲಿ ನಿಮ್ಮ ಉಡುಪು ಹೀಗಿರಲಿ

cover-image
ಚಳಿಗಾಲದಲ್ಲಿ ನಿಮ್ಮ ಉಡುಪು ಹೀಗಿರಲಿ

ಚಳಿಗಾಲ ಬಂದಾಗ ನಾವೆಲ್ಲಾ ಬೆಚ್ಚಗಿರಲು ಸ್ವೆಟ್ಟರ್, ಸಾಕ್ಸ್, ಸ್ಕಾರ್ಫ್ ನ್ನು ಧರಿಸುತ್ತೇವೆ. ಅದೇ ರೀತಿಯಲ್ಲಿ ಮನೆ ಬೆಚ್ಚಾಗಿರುವಂತೆ ರೂಮ್ ಹೀಟರ್ ಬಳಸುತ್ತೇವೆ. ಬೇಕಾದಷ್ಟು ಕಸರತ್ತು ಮಾಡುತ್ತೇವೆ. ಒಟ್ಟಾರೆಯಾಗಿ ಚಳಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಕಾಫಿಯ ಸೇವನೆಯಿಂದ ಹಿಡಿದು ದೇಹದ ತಾಪಮಾನ ಹೆಚ್ಚಿಸುವಂತಹ ಆಹಾರ ಸೇವನೆ ಮಾಡುತ್ತೀರಿ. ಇದು ಸರಿಯಾದ ಕ್ರಮವೇ ಆದರೂ ನಾವು ಈ ಎಲ್ಲಾ ವಿಷಯದ ಬಗ್ಗೆ ಕೂಲಂಕಷವಾಗಿ ಚರ್ಚಿಸೋಣ. ಇಲ್ಲಿ ಮುಖ್ಯವಾಗಿ ಗರ್ಭಿಣಿಯರ ಉಡುಪು ಹೇಗಿರಬೇಕು ಎಂದು ತಿಳಿಯೋಣ.


ಸೈಕ್ಲೋನ್ ಪರಿಣಾಮದಿಂದ ಅನಿಯಮಿತವಾಗಿ ಮಳೆ ಆಗುತ್ತಿದೆ. ನಮ್ಮ ದೇಹ ಆಯಾ ಕಾಲಮಾನಕ್ಕೆ ಒಗ್ಗುವ ಹಾಗೆ ನಾವು ಆಹಾರ ಮತ್ತು ಉಡುಪು ಧರಿಸುವಿಕೆ ಬದಲಾವಣೆಯನ್ನು ಮಾಡಿಕೊಂಡಿದ್ದೇವೆ. ಮಳೆಗಾಲದಲ್ಲಿ, ಚಳಿಗಾಲ ಮತ್ತು ಬೇಸಿಗೆ ಋತುಮಾನಕ್ಕೆ ತಕ್ಕಂತೆ ನಮ್ಮ ಜೀವನ ಶೈಲಿ ಯನ್ನು ಮಾರ್ಪಾಡು ಮಾಡಿಕೊಂಡಿದ್ದೇವೆ. ಇಲ್ಲಿ ನಾವು ಸಾಮಾನ್ಯರಂತೆ ಎಲ್ಲದಿಕ್ಕೂ ಹೊಂದಿಕೊಂಡರೆ ಸಮಸ್ಯೆ ಏನೂ ಇರುವುದಿಲ್ಲ. ಆದರೆ ನಮ್ಮ ದೇಹ ಎಲ್ಲಾ ಋತುವಿಗೆ ತಕ್ಷಣ ಒಗ್ಗಿಕೊಳ್ಳಲು ತಕ್ಷಣ ಸಾಧ್ಯವಿಲ್ಲ. ಅದರಲ್ಲೂ ಗರ್ಭಿಣಿಯರ ದೇಹ ಪ್ರಕೃತಿ ಮತ್ತು ಋತುಮಾನಕ್ಕೆ ಹೊಂದಾಣಿಕೆ ಸಮಯ ಹಿಡಿಯುತ್ತದೆ. ನಾವು ಸಾಮಾನ್ಯವಾಗಿ ಇದ್ದೇವೆ ಎಂಬುದು ಮನಸ್ಸಿಗೆ ಅನ್ನಿಸುತ್ತದೆ. ಆದರೆ ದೇಹ ಹಾಗಿರುವುದಿಲ್ಲ. ದೇಹದ ಬದಲಾಗುವ ಹಾರ್ಮೋನ್ ಮತ್ತು ನಮ್ಮ ಮನಸ್ಸಿನಿಂದ ಋತುವಿಗೆ ತಕ್ಷಣ ಹೊಂದಾಣಿಕೆ ಕಷ್ಟ.

ಗರ್ಭಿಣಿಯ ಉಡುಪಿನ ಆಯ್ಕೆ

ಸಾಮಾನ್ಯ ದಿನದಲ್ಲಿ ಯಾವ ರೀತಿಯ ಉಡುಪು ಆಯ್ಕೆ ಮಾಡುತೀವೋ ಹಾಗೆ ಇರಲಿ. ಆದರೆ ಅದರಲ್ಲಿ ಸ್ವಲ್ಪ ಬದಲಾವಣೆ ಇರಲಿ. ಈ ಸಮಯದಲ್ಲಿ ದೇಹದ ಪ್ರತೀ ಕೋಶಗಳಿಗೆ ಆಮ್ಲಜನಕ ಸಮರ್ಪಕವಾಗಿ ಪೂರೈಕೆ ಆಗುತ್ತಿರಬೇಕು. ಹಾಗಾಗಿ ಬಿಗಿಯಾಗಿ ಬಟ್ಟೆಯನ್ನು ಧರಿಸದೇ ಸಡಿಲವಾದ ಬಟ್ಟೆಯನ್ನು ಧರಿಸಿರಿ. ಕೆಲವು ಬಟ್ಟೆ ವಿಧಗಳು ಕೆಲವರಿಗೆ ಅಲರ್ಜಿ ಇರುತ್ತದೆ. ಉದಾಹರಣೆಗೆ ಪಾಲಿಸ್ಟರ್ ಬಟ್ಟೆಗಳು ಕೆಲವರಿಗೆ ಆಗುವುದಿಲ್ಲ. ಹಾಕಿದ ತಕ್ಷಣ ವಿಪರೀತ ಬೆವರುವುದು, ದೇಹದಲ್ಲಿ ಬೊಬ್ಬೆ ಏಳಲು ಶುರುವಾಗುತ್ತವೆ. ಕಾಟನ್ ಬಟ್ಟೆಗಳು ಎಲ್ಲರಿಗೂ ಸರಿಹೊಂದುತ್ತದೆ. ಯಾವುದೇ ಋತುವಿನಲ್ಲಿ ಕಾಟನ್ ಬಟ್ಟೆ ಧರಿಸಬಹುದು. ಅದೇ ರೀತಿ , ಕಾಟನ್ ಬ್ಲೆಂಡ್ ಆಗಿರುವ ಬಟ್ಟೆಗಳು ಲಭ್ಯವಿದೆ. ಅದನ್ನೂ ಕೂಡ ಆಯ್ಕೆ ಮಾಡಬಹುದು. ನವಣೆ ಮತ್ತು ಕೆಲವು ಜ್ಯುಟ್ ಬಟ್ಟೆಗಳು ವಾತಕಾರಕ. ಇಂಥಾ ಕಚ್ಛಾದಿಂದ ತಾಯಾರಿಸಿರುವ ಫ್ಲೋರ್ ಮ್ಯಾಟ್ಗಳು ವಾತಕಾರಕವಾಗಿವೆ. ಕೆಲವರಿಗೆ ನಡೆದಾಗ ಕಾಲು ಸೆಳೆತ ಆರಂಭವಾಗುತ್ತದೆ. ಇದು ವಿಶೇಷವಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಇರುತ್ತದೆ. ಸಾಧ್ಯವಾದಷ್ಟು ವಾತಕಾರಕ ಬಟ್ಟೆಗಳಿಂದ, ಫ್ಲೋರ್ ಮ್ಯಾಟ್ಗಳಿಂದ ದೂರವಿರಿ. ಕಾಟನ್ ಎಲ್ಲರಿಗೂ ಸೂಕ್ತ ಮತ್ತು ಹೆಚ್ಚು ಕಂಫರ್ಟ್ ಆಗುತ್ತದೆ.


ಗರ್ಭಿಣಿಯರು ಯಾವ ತರದ ಬಟ್ಟೆ ಧರಿಸಬೇಕು:

 • ಈ ಸಮಯದಲ್ಲಿ ಸಾಧ್ಯವಾದಷ್ಟು ಸಡಿಲವಾದ ಬಟ್ಟೆಯನ್ನು ಧರಿಸಿರಿ.
 • ಚಳಿಗಾಲದಲ್ಲಿ ಸ್ವಲ್ಪ ಗಟ್ಟಿ, ಉಣ್ಣೆಯ ಬಟ್ಟೆಯನ್ನು ಧರಿಸಿ. ಆದರೆ ಗಾಳಿಯಾಡುವಂತಿರಬೇಕು.
 • ಬೆಳಗ್ಗೆ ಮತ್ತು ಸಂಜೆ ತುಂಬಾ ಚಳಿ ಇರುವುದರಿಂದ ಸ್ವೇಟರ್ ಮತ್ತು ಸ್ಕಾರ್ಫ್ ಬಳಸಿರಿ. ಏಕೆಂದರೆ, ಶೀತವಾದಾಗ ಅದಕ್ಕೆ ಔಷಧಿ ತೆಗೆದುಕೊಂಡರೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
 • ಚಳಿ, ಗಾಳಿ ಎಂದು ಬಿಗಿಯಾಗಿ ಗಾಳಿಯಾಡದ ಬಟ್ಟೆ ಧರಿಸಬೇಡಿ. ಶರೀರಕ್ಕೆ ಗಾಳಿಯಾಡಬೇಕು. ಚರ್ಮದ ಮೇಲ್ಪದರವು ಸಣ್ಣ ಸಣ್ಣ ರಂಧ್ರವನ್ನು ಹೊಂದಿದೆ. ನಾವು ಉಸಿರಾಡುವ ಗಾಳಿ ಮೂಗಿನ ಮೂಲಕ ಶರೀರವನ್ನು ತಲುಪುತ್ತದೋ , ಅದೇ ರೀತಿಯಾಗಿ ಚರ್ಮವೂ ಆಮ್ಲಜನಕವನ್ನು ಹೀರಿಕೊಂಡು ಚರ್ಮದ ಕೋಶಗಳಿಗೆ ತಲುಪಿಸುತ್ತದೆ.
 • ಆಮ್ಲಜನಕ ಸರಿಯಾಗಿ ಪೂರೈಕೆಯಾಗದ ಚರ್ಮದ ಭಾಗದಲ್ಲಿ , ಚರ್ಮ ಕಪ್ಪು ಬಣ್ಣಕ್ಕೆ ಬದಲಾಗಿರುತ್ತದೆ.
 • ಚಳಿಗಾಲದಲ್ಲಿ ಎಳ್ಳೆಣ್ಣೆ, ಸಾಸಿವೆ ಎಣ್ಣೆಯಿಂದ ದೇಹವನ್ನು ಮಸಾಜ್ ಮಾಡಿ ಸ್ನಾನ ಮಾಡಿರಿ.
 • ಕೊಠಡಿಯ ಉಷ್ಣತೆಯನ್ನು ಹೆಚ್ಚಿಸಲು ಎಲೆಕ್ಟ್ರಿಕ್ ಹೀಟರ್ ಬಳಸಿದರೂ , ತುಂಬಾ ಸಮಯದವರೆಗೆ ಹೀಟರ್ ಅನ್ನು ಉಪಯೋಗಿಸದಿರಿ.
 • ನೀವು ಧರಿಸಿದ ಬಟ್ಟೆಯನ್ನು ಒಣಗಿಸಲು ಹೀಟರ್ ಉಪಯೋಗಿಸಬಹುದು.
 • ಚಳಿಗೆ ಕೈ ಕಾಲುಗಳು ಸೆಟೆದು , ಕಳೆಗುಂದಿದ ಹಾಗೆ ಇರುತ್ತದೆ. ಅದಕ್ಕಾಗಿ ಸ್ನಾನಕ್ಕೆ ಮೊದಲು ಎಳ್ಳೆಣ್ಣೆ , ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಿದ ನಂತರ ಕಾಟನ್ ಬಟ್ಟೆಯನ್ನು ಧರಿಸಿರಿ.
  ತಿಳಿಬಣ್ಣದ ಕಾಟನ್ ಬಟ್ಟೆಗಳು ಮನಸ್ಸಿನ ಭಾವನೆಯನ್ನು ಸಕಾರಾತ್ಮಕವಾಗಿ ರೂಪಿಸುತ್ತವೆ.
 • ಗರ್ಭಿಣಿಯರು ಆದಷ್ಟು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿರಿ. ಇದು ಮಗುವಿಗೂ ಸಕಾರಾತ್ಮಕ ಭಾವನೆಯನ್ನು ರೂಪಿಸುತ್ತದೆ.
 • ರಾತ್ರಿ ಮಲಗುವಾಗ ಸಾಕ್ಸ್, ಹ್ಯಾಂಡ್ ಗ್ಲೋಸ್ , ಸ್ಕಾರ್ಫ್, ಟೊಪ್ಪಿ ಅಥವಾ ದುಪ್ಪಟ್ಟದಿಂದ ಕಿವಿ, ತಲೆಯನ್ನು ಮುಚ್ಚಬೇಡಿ. ರಾತ್ರಿ ಮಲಗುವಾಗ ಆದಷ್ಟು ಸಡಿಲವಾದ ಬಟ್ಟೆಯನ್ನು ಧರಿಸಿರಿ. ಹೊದಿಕೆ ಬೇಕಾದಲ್ಲಿ ಗಟ್ಟಿ ಇರುವ, ಉಣ್ಣೆಯ ಹೊದಿಕೆಯನ್ನು ಹಾಸಿಕೊಳ್ಳಬಹುದು.
  ಹೊಟ್ಟೆ ಕಾಣುಸುವ ರೀತಿಯ ಬಿಗಿಯಾದ ಬಟ್ಟೆಯನ್ನು ಧರಿಸಬೇಡಿ.
#momhealth #pregnancymustknow
logo

Select Language

down - arrow
Personalizing BabyChakra just for you!
This may take a moment!