ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರ

ಜ್ಞಾಪಕ ಶಕ್ತಿ ಹೆಚ್ಚಿಸುವ ಆಹಾರ

10 Nov 2021 | 1 min Read

Medically reviewed by

Author | Articles

ಪ್ರತೀಯೊಬ್ಬ ತಾಯಿಗೆ ಗರ್ಭದಲ್ಲಿರುವು ಮಗುವಿನ ಮೇಲೆ ಬಳಷ್ಟು ಇಟ್ಟಿರುತ್ತಾರೆ. ಪ್ರತೀ ಹೆಣ್ಣಿಗೆ ಜೀವನದ ಪ್ರಮುಖ ಮಜಲು ಗರ್ಭಧಾರಣೆ . ಈ ಬಗ್ಗೆ ಹಲವಾರು ರೀತಿಯಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾಳೆ. ಅದೇ ರೀತಿಯಲ್ಲಿ ಮಗುವಿನ ಬೆಳವಣಿಗೆ, ತಾನು ಯಾವ ರೀತಿಯ ಆಹಾರ ತೆಗೆದುಕೊಂಡರೆ ಮಗು ಪುಷ್ಟಿದಾಯಕವಾಗಿರುತ್ತದೆ, ಮಗು ಎಲ್ಲಾ ಮಕ್ಕಳಿಗಿಂತ ಹೇಗೆ ವಿಭಿನ್ನವಾಗಿರಬೇಕು ಎಂಬ ಆಸೆ ಆಕೆಯ ಮನಸಲ್ಲಿ ಮನೆಮಾಡಿರುತ್ತದೆ. ಒಟ್ಟಾರೆಯಾಗಿ ಮಗುವಿನ ಜನನದಿಂದ ಹಿಡಿದು ಮಗು ಶಾಲೆಗೆ ಹೋಗುವವರೆಗೆ ಕನಸ್ಸು ಕಂಡಿರುತ್ತಾಳೆ. ಈ ನಿರೀಕ್ಷೆ ತಪ್ಪಲ್ಲ. ಹಾಗೇನೇ ತಾಯಿ ಸೇವಿಸುವ ಆಹಾರ ಮಗುವಿನ ಆರೋಗ್ಯ ಮತ್ತು ಮಿದುಳಿನ ಬೆಳವಣಿಗೆಗೆ ಪೂರಕ ವಾಗಿರಬೇಕು. ಈ ಬಗ್ಗೆ ಆಕೆ ಹಲವಾರು ಸ್ನೇಹಿತರು, ಮನೆಯ ಸದಸ್ಯರು, ಎಲ್ಲರ ಬಳಿ ಮಾಹಿತಿ ಪಡೆಯುತ್ತಾಳೆ. ತನ್ನ ಮಗು ತುಂಬಾ ಬುದ್ದಿವಂತನಾಗಲು ಯಾವ ಆಹಾರ ಸೇವಿಸಬೇಕು ಎಂಬ ಕನ್ಫ್ಯೂಸ್ ಸ್ಟೇಟ್ ಆಕೆಯಲ್ಲಿ ಇರುತ್ತದೆ. ಅದಕ್ಕಾಗಿ ಬೇಬಿಚಕ್ರ ಕೆಲವು ಆಹದ ಮಾಹಿತಿಯನ್ನು ನಿಮಗೆ ನೀಡುತ್ತಿದೆ. ಇದು ನಿಮ್ಮ ಮಗುವಿನ ಬೆಳವಣಿಗೆಗೆ ಪೋಷಕಾಂಶ ಮಾತ್ರವಲ್ಲ ಮಗುವಿನ ಮಿದುಳಿನ ಬೆಳವಣಿಗೆಗೆ ಪೂರಕವಾದ ಆಹಾರ.

 

ಈ ನಿಟ್ಟಿನಲ್ಲಿ ಬುದ್ಧಿವಂತ ಮಗುವನ್ನು ಪಡೆಯಲು ನೀವು ಸ್ವೀಕರಿಸಬೇಕಾದ 10 ಆಹಾರಗಳು ಇಲ್ಲಿವೆ ನೋಡಿ.

1. ಮೀನು

ಒಮೆಗಾ 3 ಫ್ಯಾಟಿ ಆ್ಯಸಿಡ್ಸ್​​​ ಇರುವ ಆಹಾರ ಎಂದರೆ ಮೀನು. ಇದು ಮಗುವಿನ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಆದ್ದರಿಂದ ಗರ್ಭಿಣಿಯರು ಸಾಲ್ಮನೆಲ ಮೀನಿನ ಖಾದ್ಯ ಸೇವಿಸಬಹುದು. ವಾರದಲ್ಲಿ ಒಂದರಿಂದ ಎರಡು ಮೀನಿನ ಸೇವನೆ ಇರಲಿ. ಗರ್ಭಿಣಿಯರಲ್ಲಿ ಕಡಿಮೆ ಐಯೋಡಿನ್​ ಕೊರತೆ ಇದ್ದರೆ ಮಗುವಿನ ಮೆದುಳಿನ ಚುರುಕುತನ ಕಡಿಮೆಯಾಗುತ್ತದೆ. ಆದರೆ ಗರ್ಭಿಣಿಯರು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕು. ಶಾರ್ಕ್, ಕತ್ತಿಮೀನು, ಮ್ಯಾಕೆರೆಲ್, ಹೆರಿಂಗ್ಸ್, ಸಾರ್ಡಿನ್ ಗಳನ್ನುಗರ್ಬಾವಸ್ಥೆಯಲ್ಲಿ ಸೇವನೆ ಮಾಡಬೇಡಿ. ದೊಡ್ಡ ದೊಡ್ಡ ಮೀನುಗಳಲ್ಲಿ ಹೆಚ್ಚಿನ ಸಾಂದ್ರತೆಯ ಪಾದರಸವಿರುತ್ತದೆ, ಅದು ಮಗುವಿನ ನರ ವ್ಯವಸ್ಥೆಯ ಬೆಳವಣಿಗೆಗೆ ಹಾನಿಯನ್ನುಂಟುಮಾಡುತ್ತದೆ. ಒಣಗಿಲು ಮೀನುಗಳನ್ನು ಸೇವಿಸದಿರುವುದು ಒಳ್ಳೆಯದು. ಬೇಯಿಸಿದ ಮೀನುಗಳನ್ನು ಮಾತ್ರ ಗರ್ಭಿಣಿಯರು ಸೇವಿಸಬೇಕು. ಸಮುದ್ರದ ಮೀನುಗಳನ್ನು ಸಹ ಚೆನ್ನಾಗಿ ಬೇಯಿಸಿ ತಿನ್ನಬೇಕು.

 

2. ಸೊಪ್ಪು

ಪಾಲಕ್ ಮತ್ತು ಲೆಂಟಿಲ್​ ಎಲೆಗಳಲ್ಲಿ ಫಾಲಿಕ್ ಆ್ಯಸಿಡ್​​ ಹೆಚ್ಚಿಸುತ್ತದೆ. ಇದು ನಿಮ್ಮ ಮಗುವಿನ ಟಿಶ್ಯೂ ವಿಗೆ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ನ್ಯೂರಲ್ ಟ್ಯೂಬ್ ಡಿಟಕ್ಟ್​​ ಸಮಸ್ಯೆ ನಿವಾರಣೆಗೆ ಸೊಪ್ಪು, ತರಕಾರಿಯ ಫಾಲಿಕ್​​​ ಆ್ಯಸಿಡ್​​ ಪ್ರಯೋಜನಕಾರಿ. ಫಾಲಿಕ್​ ಆ್ಯಸಿಡ್​​​ಯುಕ್ತ ಆಹಾರಗಳಿಂದ ಬುದ್ಧಿವಂತ ಮಗುವಿಗೆ ಜನ್ಮ ನೀಡಬಹುದು. ಅದೇ ರೀತಿ ಎಲ್ಲಾ ರೀತಿಯ ಸೊಪ್ಪು ಉತ್ತಮ. ಒಂದೆಲಗ ಸೊಪ್ಪಿನ ಜ್ಯುಸ್ ಮಾಡಿ ಕುಡಿಯುವುದರಿಂದ ಮಗುವಿನ ಮಿದುಳು ಬೆಳವಣಿಗೆ ಮಾತ್ರವಲ್ಲದೇ ಬುದ್ದಿವಂತ ಮಗುವಾಗಿ ಬೆಳೆಯುತ್ತದೆ.

3. ಬ್ಲೂ ಬೆರ್ರಿ

ಬೆರ್ರಿ ಹಣ್ಣುಗಳಲ್ಲಿ ಆ್ಯಂಟಿಆ್ಯಕ್ಸಿಡೆಂಟ್‌ಗಳು ಅಧಿಕವಾಗಿದ್ದು ನಿಮ್ಮ ಮಗುವಿನ ಅರಿವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ಟ್ರಾಬೆರಿ, ರಾಸ್ ಬೆರ್ರಿ, ಕಪ್ಪು ಬೆರ್ರಿ, ಟೊಮ್ಯಾಟೋ, ಬೀನ್ಸ್ ಇವೆಲ್ಲವೂ ಪ್ರಯೋಜನಕಾರಿ .

4. ಮೊಟ್ಟೆ

ಬೇಯಿಸಿದ ಮೊಟ್ಟೆಗಳು, ನಿರ್ದಿಷ್ಟವಾಗಿ, ಹೆಚ್ಚಿನ ಪ್ರೊಟೀನ್ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಕೊಲೀನ್ ಎಂಬ ಅಮೈನೊ ಆಮ್ಲವಿದೆ. ಇದು ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ವೃದ್ಧಿಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಪಾಶ್ಚರೀಕರಿಸದ ಮೊಟ್ಟೆಗಳನ್ನು ತಪ್ಪಿಸಿ. ಏಕೆಂದರೆ ಅವುಗಳು ತೊಂದರೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಕೆಲವು ಫೀಡ್ ಹಾಕಿ ಬೆಳೆಸಲಾದ ಕೋಳಿಗಳಿಂದ ಪಡೆದ ಮೊಟ್ಟೆಯನ್ನು ಬಳಸಬೇಡಿ. ಇದು ರಾಸಾಯನಿಕ ಆಹಾರ ಸೇವನೆ ಮಾಡಿ ಬೆಳೆದಿರುತ್ತದೆ. ಮೊಟ್ಟೆಯ ಹಳದಿಭಾಗ ಹೆಚ್ಚು ಕ್ಯಾಲೋರಿ ಹೊಂದಿದ್ದು , ಸ್ಥೂಲ ಕಾಯ ಇರುವವರು, ಬಿಪಿ ಇರುವವರು ಸೇವಿಸದಿರಿ.

5. ಬಾದಾಮಿ

ಬಾದಾಮಿಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಶಿಯಮ್, ವಿಟಮಿನ್ ಇ ಮತ್ತು ಪ್ರೋಟೀನ್ ಅಧಿಕವಾಗಿದೆ. ಬಾದಾಮಿಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದ್ದು, ಇದು ಮೆದುಳಿಗೆ ಪ್ರಯೋಜನಕಾರಿ. ನಿಮ್ಮ ಮಗು ಚುರುಕು ಮತ್ತು ಬುದ್ದಿವಂತನಾಗಬೇಕು ಎಂದರೆ ನೀವು ಪ್ರತಿದಿನ ೪-೫ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಯಿಟ್ಟು ಖಾಲಿ ಹೊಟ್ಟೆಗೆ ಬೆಳಗ್ಗೆ ತಿನ್ನಬೇಕೆಂದು ಹೇಳಲಾಗುತ್ತದೆ. ಕಡಲೆಕಾಯಿ ಮತ್ತು ವಾಲ್​​ನಟ್ಸ್​​​ ಎರಡೂ ಆರೋಗ್ಯಕರ. ವಾಲ್​​ನಟ್​​​ನಲ್ಲಿ ಒಮೆಗಾ -3 ಅಧಿಕವಾಗಿದ್ದು, ಇದು ಮಗುವಿಗೆ ಬುದ್ಧಿವಂತಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.

6. ಗ್ರೀಕ್​ ಯೋಗರ್ಟ್​​

ತಾಯಿಯ ಗರ್ಭದಲ್ಲಿ ಆರೋಗ್ಯಕರ ನರ ಕೋಶಗಳ ರಚನೆಗೆ ಪ್ರೋಟೀನ್ ಭರಿತ ಆಹಾರದ ಅಗತ್ಯವಿರುತ್ತದೆ. ಇದು ಮಗುವಿನ ಗ್ರಹಿಕೆ, ಬೆಳವಣಿಗೆಗೆ ಅತ್ಯಗತ್ಯ. ಗ್ರೀಕ್ ಯೋಗರ್ಟ್​​ನಂತಹ ಪ್ರೋ ಬಯೋಟಿಕ್​​​​ ಆಹಾರಗಳು ನಿಮ್ಮ ಮಗುವಿನ ಮೂಳೆ ಬೆಳವಣಿಗೆಗೆ ಕಾರಣವಾದ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಗ್ರೀಕ್ ಯೋಗರ್ಟ್​​​ನಲ್ಲಿ ಅಯೋಡಿನ್ ಕೂಡ ಅಧಿಕವಾಗಿದೆ. ಇದು ನಿಮ್ಮ ಮಗು ಕಡಿಮೆ ಜನನ ತೂಕದೊಂದಿಗೆ ಜನಿಸುವುದನ್ನು ತಪ್ಪಿಸುತ್ತದೆ. ಮಗು ಆರೋಗ್ಯ ಮತ್ತು ಪುಷ್ಟಿದಾಯಕವಾಗಿರುತ್ತದೆ.

7. ಚೀಸ್

ಮಗುವಿನ ಅರಿವಿನ ಬೆಳವಣಿಗೆಗೆ ವಿಟಮಿನ್ ಡಿ ಅತ್ಯಗತ್ಯ. ಗರ್ಭಿಣಿ ತಾಯಂದಿರು ತಮ್ಮ ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಕಡಿಮೆ ಹೊಂದಿದ್ದರೆ, ಐಕ್ಯೂ ಸ್ಕೋರ್ ಕಡಿಮೆ ಇರುವ ಮಕ್ಕಳನ್ನು ಹೊಂದುವ ಸಾಧ್ಯತೆ ಹೆಚ್ಚು. ಆರೋಗ್ಯಕರ ಐಕ್ಯೂ ಹೊಂದಿರುವ ಸ್ಮಾರ್ಟ್ ಮಗುವನ್ನು ನೀವು ಬಯಸಿದರೆ ನಿಮ್ಮ ಚೀಸ್ ಸೇವನೆಯನ್ನು ಹೆಚ್ಚಿಸಿ. ಅದೇ ರೀತಿ ಬೆಳಗ್ಗೆ ಮತ್ತು ಸಂಜೆ ಸೂರ್ಯನ ಎಳೆಬಿಸಿಲಿಗೆ ನಿಮ್ಮ ಮೈ ಒಡ್ಡಿ ನಿಲ್ಲಿರಿ. ಸೂರ್ಯನ ಕಿರಣ ಉತ್ತಮ ವಿಟಮಿನ್ ಡಿ ಕಾರಕ. ಸೂರ್ಯನ ಕಿರಣವು ನಿಮ್ಮ ಮಗುವನ್ನು ತಾಕುತ್ತದೆ.

8. ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜಗಳಲ್ಲಿ ಸತು ಹೇರಳವಾಗಿದೆ. ಸತು ಖನಿಜವಾಗಿದ್ದು ಅದು ಸೂಕ್ತವಾದ ಮೆದುಳಿನ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಆಲೋಚನೆ, ಮಾಹಿತಿ ಸಂಸ್ಕರಣೆಯಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಪೋಷಕಾಂಶ ದಟ್ಟವಾಗಿವೆ ಮತ್ತು ರೋಗ ನಿರೋಧಕ ಶಕ್ತಿ ಅಧಿಕವಾಗಿವೆ.

9. ಬೀನ್ಸ್​​

ಮಗುವಿನ ಮೆದುಳಿನಲ್ಲಿರುವ ನರ ಕೋಶಗಳಲ್ಲಿ ಸರಾಗ ಆಮ್ಲಜನಕ ಪ್ರಕ್ರಿಯೆಗೆ ದೇಹಕ್ಕೆ ಕಬ್ಬಿಣದ ಅಗತ್ಯವಿದೆ. ಬೀನ್ಸ್ ನಲ್ಲಿ ಅಧಿಕ ಕಬ್ಬಿಣಾಂಶವಿದೆ. ಅದಕ್ಕಾಗಿಯೇ ಗರ್ಭಿಣಿಯರು ಈ ಹಸಿರು ತರಕಾರಿದ ಆಹಾರ ಪದಾರ್ಥವನ್ನು ಹೆಚ್ಚು ಸೇವಿಸಬೇಕು. ಪಾಲಕ್, ಅಂಜೂರದ ಹಣ್ಣುಗಳು, ಚಿಕನ್ ಮತ್ತು ಒಣ ದ್ರಾಕ್ಷಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಇವು ಕಬ್ಬಿಣ ಭರಿತ ಇತರ ಆಹಾರಗಳಾಗಿವೆ. ಒಂದು ವೇಳೆ ನಿಮಗೆ ಗಸ್ಟೇಷನಲ್ ಡೈಯಾಬಿಟೀಸ್ ಇದ್ದಾರೆ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು, ಒಣದ್ರಾಕ್ಷಿಗಳನ್ನು ಮಿತವಾಗಿ ಸೇವಿಸಿ.

10. ಹಾಲು

ಗರ್ಭಿಣಿ ಮಹಿಳೆಯರಲ್ಲಿ ಕಬ್ಬಿಣದ ಕೊರತೆಯು ಮಾನಸಿಕ ಬೆಳವಣಿಗೆಯ ಕುಂಠಿತಕ್ಕೆ ಕಾರಣವಾಗುತ್ತದೆ. ಕಬ್ಬಿಣದ ಕೊರತೆಯು ಗರ್ಭಿಣಿಯರಲ್ಲಿ ಖಿನ್ನತೆ, ಭಾವನಾತ್ಮಕ ಏರುಪೇರು, ಕೆಲವು ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು. ಇದು ಮಗುವಿನ ಒಟ್ಟು ಆಲೋಚನೆಯ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ನವಜಾತ ಶಿಶುಗಳಿಗೆ ಆರೋಗ್ಯಕರ ಯೋಚನಾಶಕ್ತಿ ವೃದ್ಧಿಸಲು ತಾಯಿ ಆದವಳು ಹಾಲಿನ ಸೇವನೆ ಮಾಡಬೇಕು. ತಾಯಿಯ ಭಾವನೆಯ ಏರುಪೇರು ಮಗುವಿನ ಮೇಲೆ ಪರಿಣಾಮ ಬೀರುವುದರಿಂದ ತಾಯಿ ಕೂಡ ತನ್ನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಗಮನದಲ್ಲಿಡಬೇಕು. ಮಗು ಜನಿಸುವ ಮೊದಲು ಅದರ ಮೆದುಳಿನ ಬೆಳವಣಿಗೆಯನ್ನು ಕಾಪಾಡಿಕೊಳ್ಳುತ್ತದೆ.

ಸಲಹೆಗಳು​​ ಮತ್ತು ಮುಚ್ಚರಿಕೆಗಳು

ನೀವು ಸೇವಿಸುವ ಆಹಾರ ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಕೆಲವು ನಿಯಮಗಳನ್ನು ಪಾಲಿಸಿ.

  • ಗರ್ಭಿಣಿಯಾಗಿದ್ದಾಗ ನೀವು ಸೇವಿಸುವ ಪ್ರತಿಯೊಂದರ ಬಗ್ಗೆ ನಿಗಾ ಇರಲಿ. ತಾಜಾ, ಸಾವಯವ ಮತ್ತು ಬಿಸಿಯಾದ ಆಹಾರವನ್ನು ಸೇವಿಸುವುದನ್ನು ಮರೆಯದಿರಿ. ತಂಗಳು ಆಹಾರ ಸೇವಿಸದಿರಿ.
  • ಸಂಸ್ಕರಿಸಿದ ಆಹಾರಗಳು, ಸಕ್ಕರೆ ಪಾನೀಯಗಳು ಮತ್ತು ಅನಾರೋಗ್ಯಕರ ಜೀವನಶೈಲಿಗೆ ಕಾರಣವಾಗುವ ಎಲ್ಲವನ್ನೂ ತ್ಯಜಿಸಿ. ಕುಡಿಯುವುದು, ಧೂಮಪಾನ ಮತ್ತು ತಂಬಾಕು ಸೇವನೆ ಬೇಡ.
  • ಅರೆಬೆಂದ ಮಾಂಸ, ಪಾದರಸದ ಅಂಶದ ಮೀನು, ಚಿಪ್ಪುಮೀನು ಮತ್ತು ಕೆಫೀನ್ ಇವೆಲ್ಲವೂ ಗರ್ಭಪಾತದ ಸಮಸ್ಯೆಯೊಡ್ಡಬಹುದು. ಆದ್ದರಿಂದ ಇದನ್ನು ನಿಯಂತ್ರಿಸಿ.
  • ಹಣ್ಣುಗಳು ಮತ್ತು ತರಕಾರಿಗಳನ್ನು ಶುಭ್ರವಾಗಿ ತೊಳೆದು ಕತ್ತರಿಸಿ. ಕೆಟ್ಟ ಬ್ಯಾಕ್ಟೀರಿಯಾ ಮಗುವಿಗೆ ತೊಂದರೆಯುಂಟು ಮಾಡಬಹುದು. ತರಕಾರಿ , ಹಣ್ಣುಗಳನ್ನು ಉಪಯೋಗಿಸುವ ಮೊದಲು ಉಪ್ಪುನೀರಿನಲ್ಲಿ ನೆನೆಸಿಡಿ. ಆರೋಗ್ಯಕರ ಪಥ್ಯ ಅಥವಾ ಡಯಟ್ನಲ್ಲಿ ಹಣ್ಣು ಮತ್ತು ತರಕಾರಿ ಪ್ರಮುಖ ಭಾಗವಾದರೂ ಅವುಗಳನ್ನು ಸರಿಯಾಗಿ ತೊಳೆಯದೆ, ಸ್ವಚ್ಛ ಮಾಡದೆ ಬಳಸಿದರೆ ತಾಯಿ ಮತ್ತು ಭ್ರೂಣದಲ್ಲಿರುವ ಶಿಶುವಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಸೋಂಕುಗಳು ಕೂಡ ತಗಲುವ ಸಾಧ್ಯತೆಯಿದೆ.
  • ಹಣ್ಣು, ತರಕಾರಿ ಸೇವನೆ ಅಧಿಕವಾಗಿರಲಿ. ಓಟ್​​ ಮೀಲ್​, ವೆಜ್ ಆಮ್ಲೆಟ್, ಜೊತೆಗೆ ಮಾಮೂಲಿಯಂತೆ ಹಣ್ಣು ತರಕಾರಿಯೂ ಇರಲಿ.

ಇದನ್ನು ಮಾಡಬೇಡಿ.

ತೊಳೆಯದೆ ಬಳಸುವ ಹಣ್ಣು-ತರಕಾರಿಗಳು: ಗರ್ಭವತಿಯರು ಹಸಿ ತರಕಾರಿಗಳನ್ನು ಸೇವಿಸುವುದಕ್ಕಿಂತ ಹೆಚ್ಚಾಗಿ ಶುಚಿಯಾದ ಬೇಯಿಸಿದ ತರಕಾರಿಗಳನ್ನು ಸೇವಿಸುವುದು ಒಳಿತು. ಬಾಳೆಹಣ್ಣು, ಕಿತ್ತಳೆ ಮೊದಲಾದ ಹಣ್ಣುಗಳು ಸೇವನೆಗೆ ಉತ್ತಮ.

ಕೆಫೀನ್: ಅತಿಯಾಗಿ ಕೆಫೀನ್ ಸೇವಿಸುವುದರಿಂದ ಅದು ಗರ್ಭದ ಮೇಲೆ ಪರಿಣಾಮ ಬೀರಿ ಮಗುವಿನ ಆರೋಗ್ಯಕ್ಕೆ ಕುಂದುಂಟಾಗಬಹುದು.

ಹಸಿ ಮೊಟ್ಟೆ: ಗರ್ಭವತಿಯರು ಹಸಿ ಮೊಟ್ಟೆ ಸೇವಿಸುವುದು ಅಪಾಯಕಾರಿ, ಏಕೆಂದರೆ ಅದರಲ್ಲಿರುವ ಬ್ಯಾಕ್ಟೀರಿಯಾದಿಂದ ತೀವ್ರ ಸೋಂಕು ತಗಲುವ ಸಾಧ್ಯತೆಯಿದೆ. ಮೊಟ್ಟೆಯೊಳಗಿರುವ ಹಳದಿ ಲೋಳೆ ಗಟ್ಟಿಯಾಗುವವರೆಗೆ ಮೊಟ್ಟೆಯನ್ನು ಬೇಯಿಸಿ ನಂತರ ಸೇವಿಸುವುದು ಉತ್ತಮ.

ಹಸಿ ಹಾಲು: ಬಿಸಿ ಮಾಡದಿರುವ ಅಥವಾ ಪಾಶ್ಚರೀಕರಿಸದಿರುವ ಹಾಲು ಸೇವನೆ ಕೂಡ ಗರ್ಭಿಣಿಯರಿಗೆ ತೊಂದರೆಯುಂಟುಮಾಡುವ ಸಾಧ್ಯತೆಯಿದೆ, ಅದರಿಂದ ಭ್ರೂಣಕ್ಕೂ ಅಪಾಯವಿದೆ. ಹಸಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳಾದ ಮೊಸರು, ಪನ್ನೀರ್ ಅಥವಾ ಚೀಸ್ ಸೇವನೆ ಕೂಡ ಒಳ್ಳೆಯದಲ್ಲ. ಬ್ಲೂ ಚೀಸ್ ನ್ನು ಕೂಡ ಗರ್ಭಿಣಿಯರು ಸೇವಿಸಬಾರದು. ಪಾಶ್ಚರೀಕರಿಸಿದ ಹಾಲು ಮತ್ತು ಅದರ ಉತ್ಪನ್ನಗಳು ಸೇವನೆಗೆ ಸುರಕ್ಷಿತವಾಗಿರುತ್ತದೆ.

ಹಸಿ ಮಾಂಸ, ಅರೆಬೆಂದ ಮಾಂಸಗಳು: ತಂದೂರಿ, ಕಬಾಬ್ ಮತ್ತು ಬಾರ್ಬೆಕ್ಯೂಡ್ ಮಾಂಸಗಳು ರಕ್ತದಿಂದ ಬೆರೆತಿರದಂತೆ ನೋಡಿಕೊಳ್ಳಬೇಕು. ಮಾಂಸದ ಬಣ್ಣ ಬೇಯಿಸಿದಾಗ ಗುಲಾಬಿ ಬಣ್ಣದಿಂದ ಕೆಂಪು ಬಣ್ಣಕ್ಕೆ ತಿರುಗಿರಬೇಕು.
ಯಕೃತ್ತಿನಂತಹ ಮಾಂಸದ ಭಾಗಗಳು: ಯಕೃತ್ತಿನಂತಹ ಮಾಂಸಾಹಾರಿ ಭಾಗಗಳಲ್ಲಿ ವಿಟಮಿನ್ ಎ ಸೇರಿದಂತೆ ವಿಟಮಿನ್ ಸೇರ್ಪಡೆಯಾಗಿರುತ್ತದೆ. ವಿಟಮಿನ್ ಎ ಜಾಸ್ತಿ ಸೇವನೆ ಮಾಡಿದರೆ ಗರ್ಭಾವಸ್ಥೆಯಲ್ಲಿ ವಿಷವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ ಯಕೃತ್ತಿನಂತಹ ಭಾಗಗಳನ್ನು ಸೇವಿಸಬೇಡಿ

ಆಲ್ಕೋಹಾಲ್: ಗರ್ಭಿಣಿಯರು ಆಲ್ಕೋಹಾಲ್ ಸೇವಿಸಿದರೆ ಅದರಲ್ಲಿರುವ ನಂಜು ಅಥವಾ ವಿಷಕಾರಿ ಅಂಶ ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗರ್ಭವತಿ ತಾಯಿಯ ಮೇಲೆ ಆಲ್ಕೋಹಾಲ್ ಸೇವನೆ ಹಸಿವು ಕಡಿಮೆ ಮಾಡಿ ಅಪೌಷ್ಟಿಕತೆ ಹೆಚ್ಚಿಸುತ್ತದೆ. ಕಾಕ್ಟೈಲ್ ಗಳಲ್ಲಿ ಅಥವಾ ಇತರ ಆಹಾರ ಪದಾರ್ಥಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೂಡ ಆಲ್ಕೋಹಾಲ್ ಸೇವಿಸಬಾರದು.

#pregnancymustknow #momnutrition #babynutrition

A

gallery
send-btn

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.