ಪ್ರಸವದ ನಂತರ ತಪಾಸಣೆ

cover-image
ಪ್ರಸವದ ನಂತರ ತಪಾಸಣೆ

ಪ್ರತಿ ಮಹಿಳೆಯೂ ಪ್ರಸವದ ನಂತರ ವಿಶೇಷವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಪ್ರಸವದ ನಂತರದ ದಿನಗಳು ದೇಹವು ತಮ್ಮ ಪೂರ್ವಸ್ಥಿತಿಗೆ ತಲುಪುವುದಕ್ಕೆ ಅಣಿಯಾಗುತ್ತದೆ. ಅದರಲ್ಲಿ ಮುಖ್ಯವಾಗಿ ಗರ್ಭಾಶಯದ ಕುಗ್ಗುವಿಕೆ ಇಂದ ಗಿಡಿದು ಹಾರ್ಮೋನಿನ ಏರುಪೇರು ಸರಿಯಾಗುತ್ತಿರುತ್ತದೆ. ಈ ಹಂತದಲ್ಲಿ ಬಾಣಂತಿಯರ ಆರೈಕೆ ಜೊತೆಗೆ ವೈದ್ಯಕೀಯ ತಪಾಸಣೆ ಕೂಡ ಅಗತ್ಯ. ಪ್ರಸವದ ನಂತರ ಎದುರಾಗುವ ಹಲವಾರು ತೊಂದರೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆಯ ಅಗತ್ಯವಿದೆ.

 

ಪ್ರಸವದ ನಂತರ ಎದುರಾಗುವ ಸಮಸ್ಯೆಗಳು

ಪ್ರಸವದ ನಂತರ ಸಾಮಾನ್ಯ ಆರೋಗ್ಯವಂತ ಮಹಿಳೆಯರಿಗೆ 21 ದಿನಗಳವರೆಗೆ ರಕ್ತಸ್ರಾವ ಇರುತ್ತದೆ. ಅದಕ್ಕೂ ಮೀರಿ ವಿಪರೀತವಾದ ರಕ್ತಸ್ರಾವ ಆಗುತ್ತಿದ್ದರೆ, ಅಂದರೆ ಒಂದು ದಿನಕ್ಕೆ ನಾಲ್ಕರಿಂದ ಐದು ಪ್ಯಾಡ್ಗಳು ಬದಲಾಯಿಸಿದರೆ ಅದನ್ನು ವಿಪರೀತ ರಕ್ತಸ್ರಾವ ಎಂದು ಹೇಳಲಾಗುವುದು. ತಕ್ಷಣ ನೀವು ವೈದ್ಯರನ್ನು ಸಂಪರ್ಕಿಸಬೇಕು.
ಕೆಲವರಿಗೆ ಉಸಿರುಗಟ್ಟಿದ ಅನುಭವ, ಉಸಿರಾಟದಲ್ಲಿ ತೊಂದರೆಯಾಗುವುದು, ವಿಪರೀತ ತಲೆನೋವು, ಹೊಟ್ಟೆ ಹಿಡಿದುಕೊಂಡ ಅನುಭವ, ಜ್ವರ, ರಕ್ತ ಮಿಶ್ರಿತ ಬೇಧಿ, ಚಳಿ ಮಿಶ್ರಿತ ಜ್ವರ ಇವುಗಳು ಕಾಣಿಸಿಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ವೈದ್ಯರನ್ನು ತಕ್ಷಣ ಭೇಟಿ ಮಾಡಬೇಕಾಗುತ್ತದೆ. ಅದೇ ರೀತಿ ಮಗುವಿನಲ್ಲಿ ಜ್ವರ, ವಾಂತಿ-ಬೇಧ, ಕಾಮಲೆ ಇವೇ ಮುಂತಾದ ಸಮಸ್ಯೆಗಳಿಗೆ ಮಗುವಿನ ತಪಾಸಣೆ ಮಾಡಲೇಬೇಕಾಗುತ್ತದೆ.

 

ಯಾವ ಸಂದರ್ಭದಲ್ಲಿ ಚಿಕಿತ್ಸೆ ಪಡೆಯಬೇಕು

ಪ್ರಸವದ ನಂತರ ಹೊಟ್ಟೆ ನೋವು ,ಕಿಬ್ಬೊಟ್ಟೆ ಸೆಳೆತ, ಬೆನ್ನು ನೋವು, ಸಿ-ಸೆಕ್ಷನ್ ಆಗಿದ್ದರೆ ಹೊಲಿಗೆ ಹಾಕಲಾದ ಸ್ಥಳದಲ್ಲಿ ಸೆಳೆತ, ರಕ್ತಸ್ರಾವ, ನೋವು ನಿಮ್ಮ ಗಮನಕ್ಕೆ ಬಂದ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.

 • ಉರಿಮೂತ್ರ. ಮೂತ್ರ ವಿಸರ್ಜನೆ ಮಾಡುವಾಗ ತುಂಬಾ ಕಷ್ಟಕರ ವಾಗಿರುವುದು
 • ಎದೆ ನೋವು ಉಸಿರಾಟದ ತೊಂದರೆ
 • ರಕ್ತ ಹೆಪ್ಪುಗಟ್ಟಿ ದಂತೆ ಸ್ರಾವವಾಗುವುದು
 • ವಿಪರೀತ ಎದೆ ನೋವು, ತಲೆನೋವು
 • ಕಣ್ಣು ಮಂಜಾಗುವುದು
 • ವಿಪರೀತ ಚಳಿ ಮತ್ತು ನಡುಕ
 • ಸೆಕೆ ಮತ್ತು ದೇಹ ಬೆವರುವುದು
 • ವಿಪರೀತ ಭಯ
 • ಖಿನ್ನತೆ
 • ಬೇರೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಾಗ.

 

ಇವಿಷ್ಟು ಅಲ್ಲದೇ ಪ್ರಸವವಾದ ಮಹಿಳೆ ಮತ್ತು ಮನೆಯವರು ಗಮನದಲ್ಲಿ ಇಡಬೇಕಾದ ಮುಖ್ಯ ಅಂಶ ಈ ಕೆಳಗಿನಂತಿದೆ.

 

ಮೊದಲನೇ ತಪಾಸಣೆ ಹೆರಿಗೆಯ ಮೊದಲ ದಿವಸ
2ನೇ ತಪಾಸಣೆ ಹೆರಿಗೆಯ 3ನೇ ದಿವಸ
3ನೇ ತಪಾಸಣೆ ಹೆರಿಗೆಯ 7ನೇ ದಿವಸ
4ನೇ ತಪಾಸಣೆ ಹೆರಿಗೆಯ 6 ವಾರಗಳ ನಂತರ


ತಾಯಿ ಮತ್ತು ಮಗುವಿನ ತಪಾಸಣೆಯ ಅಗತ್ಯತೆ

 

  ತಾಯಿ ನವಜಾತ ಶಿಶು
ಗಮನದಲ್ಲಿಡಿ
 • ಅತೀವ ರಕ್ತಸ್ರಾವ
 • ಹಿಗ್ಗುಮುಗ್ಗಾದ ಮೊಲೆ

     • ಮೂತ್ರ ದ್ವಾರ ಮತ್ತು ಮಲಮೂತ್ರದ  ಬಗ್ಗೆ ಖಚಿತತೆ (ಜನಿಸಿದ 24 ಗಂಟೆಗಳೊಳಗಾಗಿ)

• ಸೆಳೆತ, ಬೇಧಿ, ವಾಂತಿಯಾಗುತ್ತಿದ್ದರೆ

ಪರೀಕ್ಷಿಸಿ
 • ವಿವರ್ಣತೆ, ನಾಡಿ, ರಕ್ತದೊತ್ತಡ ಮತ್ತು ಉಷ್ಣಾಂಶ 
 • ಮೂತ್ರದ ಸಮಸ್ಯೆಗಳು ಮತ್ತು ಅವಿರತ ಕಣ್ಣೀರು ಸ್ರವ 
 • ಅತಿಯಾದ ರಕ್ತಸ್ರಾವ (ಪಿಪಿಎಚ್) 
 • ಬಿಳಿಸೆರಗು ಮತ್ತು ದುರ್ವಾಸನೆ ಯಿಂದ ಕೂಡಿದ್ದರೆ
 • ಲವಲವಿಕೆ, ಬಣ್ಣ ಮತ್ತು ಜನ್ಮಜಾತ ವಿರೂಪತೆ
 • ಉಷ್ಣತೆ, ಕಾಮಲೆ, ಚರ್ಮದ ಮೇಲೆ ಗುಳ್ಳೆಗಳಿದ್ದರೆ 
 • ಉಸಿರಾಟ, ಎದೆ ಉಬ್ಬರ, ಇಳಿತ
 • ಸ್ತನ್ಯಪಾನದ ಸಂರ್ಭದಲ್ಲಿ ಮಗುವಿನ ಹೀರಿಕೆ
ಸಲಹೆ ನೀಡಿ
 • ಅಪಾಯ ಸಂಕೇತಗಳಿಗೆ • ಸ್ತನ್ಯಪಾನಕ್ಕೆ ಸರಿಯಾದ ಸ್ಥಿತಿ, ಹಾಗೂ ಸ್ತನ ಮತ್ತು ಸ್ತನದತೊಟ್ಟುಗಳ ಪಾಲನೆ  
 • 6 ತಿಂಗಳವರೆಗೆ ಸಂಪೂರ್ಣ ಸ್ತನ್ಯಪಾನ 
 • ಪೌಷ್ಟಿಕ ಸಮತೋಲನ ಆಹಾರ ಮತ್ತು ಕ್ಯಾಲ್ಷಿಯಮ್ ಹೆಚ್ಚಿರುವ ಆಹಾರಗಳು 
 • ಆರೋಗ್ಯ ನಿರ್ವಹಣೆ ಮತ್ತು ನೈರ್ಮಲ್ಯ ಕರವಸ್ತ್ರಗಳ ಬಳಕೆ
 • ಗರ್ಭನಿರೋಧಕ ಪದ್ಧತಿಯ ಆಯ್ಕೆ
 • ಮಗುವನ್ನು ಬೆಚ್ಚಗೆ ಇಡುವುದು
 • ಮೊದಲ ದಿನ ಸ್ನಾನ ಬೇಡ 
 • ಹೊಕ್ಕಳುಬಳ್ಳಿಯ ತುದಿಯನ್ನು ಸ್ವಚ್ಛ ಹಾಗೂ ಒಣಗಿರುವಂತೆ ಇಟ್ಟುಕೊಳ್ಳುವಿಕೆ 
 • ಕಡಿಮೆ ಹುಟ್ಟುತೂಕದ ಮಗುಗಳಿಗೆ ಹೆಚ್ಚುವರಿ ಪರೀಕ್ಷೆಗಳು 
 • ಮಗುವಿನ ಅಪಾಯದ ಸಂಕೇತಗಳು
ಹೀಗೆ ಮಾಡಿ
 • ಹೀಮೋಗ್ಲೋಬಿನ್ ಶೇಕಡದ ಅಂದಾಜು ರಕ್ತ ಪರೀಕ್ಷೆಯ ನಂತರ ಸಿಗುವುದು . 
 • ತಾಯಿಗೆ 3 ತಿಂಗಳುಗಳ ಕಾಲ ಐಎಫ್ಎ ಪೌಷ್ಟಿಕ ಸತ್ವಗಳ ಪೂರೈಕೆ
 • ಇವುಗಳನ್ನು ಹಾಕಿಸಿ - 0 dose ಬಿಸಿಜಿ, OPV, ಹೆಪಾಟೈಟಿಸ್ ಬಿ 
 • ವಿಟಮಿನ್ ಕೆ 1-ಎಂಜಿ IM ಇಂಜೆಕ್ಷನ್ ಹಾಕಿಸಿ

 

ಪ್ರಸವದ ನಂತರ ಯಾವುದೇ ವಿಷಯಕ್ಕೂ ಹೆಚ್ಚಿನ ನಿರ್ಲಕ್ಶ್ಯ ಪಡಬಾರದು. ನಿರ್ಲಕ್ಷ್ಯ ಅತೀ ದೊಡ್ಡ ಸಮಸ್ಯೆಯನ್ನು ಎದುರುಗೊಳ್ಳುವಂತೆ ಮಾಡುತ್ತದೆ. ಪ್ರಸವದ ನಂತರದ ವೈದ್ಯರನ್ನು ಯಾವಾಗ ಭೇಟಿಯಾಗಬೇಕೆಂಬ ಬಗೆಗಿನ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಖಂಡಿತವಾಗಿ ಲೈಕ್ ಮಾಡಿ, ಶೇರ್ ಮಾಡಿ , ಕಾಮೆಂಟ್ ಮಾಡಿ. ನಿಮ್ಮಾ ಪ್ರತಿಕ್ರಿಯೆ ಅಮೂಲ್ಯವಾದುದು.

#momhealth #postpartumcare #momnutrition
logo

Select Language

down - arrow
Personalizing BabyChakra just for you!
This may take a moment!